ಜಿಲ್ಲೆ
ಕುಂದಗೋಳ; ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಂ.ಆರ್.ಪಾಟೀಲ್

ಧಾರವಾಡ : ಇಂದು ಕುಂದಗೋಳ ಮತಕ್ಷೇತ್ರದ ಕುಂದಗೋಳ – ಕಡಪಟ್ಟಿ ರಸ್ತೆಯಲ್ಲಿ 410ಲಕ್ಷ ರೂಪಾಯಿ ವೆಚ್ಚದಲ್ಲಿ 2025 26 ನೇ ಸಾಲಿನ PRAMC ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರಾಜ್ಯ ಹೆದ್ದಾರಿ – 73 ಮಂಗಸೂಲಿ ಲಕ್ಷ್ಮೇಶ್ವರ ರಸ್ತೆ 273.00 ಶಿರೂರು ಗ್ರಾಮದ ಹತ್ತಿರ ಮತ್ತು 274.10 ಸಂಶಿ ಗ್ರಾಮದ ಹತ್ತಿರ ಮತ್ತು ಹುಬ್ಬಳ್ಳಿ ಹಳ್ಯಾಳ ಕಡಪಟ್ಟಿಯಿಂದ ಕುಂದಗೋಳ ಕಿಲೋಮೀಟರ್ 11.76 ರಿಂದ 14:40 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಎಂ.ಆರ್.ಪಾಟೀಲ್ ಅವರು ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಸ್ಥಳೀಯ ಗ್ರಾಮದ ಗುರು ಹಿರಿಯರು ಪಕ್ಷದ ಮುಖಂಡರು ಮತ್ತು ಕಡಪಟ್ಟಿ ಅಲ್ಲಾಪುರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.



