ಸುದ್ಧಿ

ಪಕ್ಷಕ್ಕಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಅದೃಷ್ಟದ ವಿಷಯ: ಡಾ.ಅಂಜಲಿತಾಯಿ ನಿಂಬಾಳ್ಕರ್, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ

ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಅದೃಷ್ಟದ ವಿಷಯ: ಡಾ.ಅಂಜಲಿತಾಯಿ ನಿಂಬಾಳ್ಕರ್, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ

ಯಾವ ಪಕ್ಷ ಬಲವರ್ಧನೆ ಮತ್ತು ಪಕ್ಷ ಸಂಘಟನೆ ಬಲವಾಗಿದೆಯೋ ಆ ಪಕ್ಷವು ಬಲಿಷ್ಟವಾಗಿದೆ ಎಂದರ್ಥ. ಅದಕ್ಕಾಗಿ ಪಕ್ಷ ಸಂಘಟನೆಯ ಕೆಲಸವನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡುವುದು ಅವಶ್ಯ. ಲಾಭ-ನಷ್ಟ ನೋಡದೆ ಪಕ್ಷ ಸಂಘಟನೆ ಮಾಡುವವರೇ ನಿಜವಾದ ಪಕ್ಷ ನಿಷ್ಠರು ಕಾರ್ಯಕರ್ತರು ಎಂದರೂ ತಪ್ಪಾಗದು, ಪಕ್ಷದ ತತ್ವ ಆದರ್ಶಗಳಲ್ಲಿ ನಂಬಿಕೆಯಿಟ್ಟು ತಳಮಟ್ಟದ ಕಾರ್ಯಕರ್ತರುಯನ್ನು ಒಗ್ಗೂಡಿಸಿ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯಕರ್ತರೇ ಪಕ್ಷದ ನಿಜವಾದ ಆಧಾರ ಸ್ತಂಭಗಳು, ಪಕ್ಷವೂ ತಳಮಟ್ಟದ ಕಾರ್ಯಕರ್ತರನ್ನು ಸರಿಯಾದ ಸಮಯದಲ್ಲಿ ನಾಯಕರನ್ನಾಗಿ ಪರಿವರ್ತಿಸುತ್ತದೆ ಎಂದು ಒಂದು ಒಳ್ಳೆಯ ಉದಾಹರಣೆ ಅಂದರೆ ಅದು ನಮ್ಮ ಡಾ.ಅಂಜಲಿತಾಯಿ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಇದಕ್ಕೆ ಉತ್ತಮ ಉದಾಹರಣೆ.

ಕಳೆದ ಹತ್ತು ವರ್ಷಗಳಲ್ಲಿ ಅಂಜಲಿತಾಯಿ ಅವರಿಗೆ ಪಕ್ಷ ವಹಿಸಿದ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ, ಅದು ತಮಿಳುನಾಡಿನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಿರಲಿ ಅಥವಾ ಹಲವಾರು ರಾಜ್ಯಗಳ ಅಥವಾ ಕ್ಷೇತ್ರಗಳಲ್ಲಿ ವೀಕ್ಷಕರಾಗಿ ಕೆಲಸ ಒಪ್ಪಿಸಿದ್ದನ್ನು ಅತಿ ನಿಷ್ಠೆಯಿಂದ ಕಾರ್ಯ ಮಾಡಿದ್ದಾರೆ.  ಶ್ರೀ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಕರ್ನಾಟಕದಲ್ಲಿ ಸುಮಾರು ಐನೂರು ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ, ಖಾನಾಪುರ ದಿಂದ ಸುವರ್ಣ ಸೌಧದ ವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಖಾನಾಪುರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದನ್ನು ಸರಿಪಡಿಸಲು  ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಿದ್ದು, ಹಿಗೆ ಹತ್ತು ಹಲವು ಸಂಘಟನಾತ್ಮಕ ಕಾರ್ಯಗಳಿಗೆ ಡಾ ಅಂಜಲಿತಾಯಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದಾರೆ.  70 ವರ್ಷಗಳ ನಂತರ ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ನೆಟ್ಟ ಸಂದರ್ಭದಲ್ಲಿ ಖಾನಾಪುರ ತಾಲೂಕಿನ ಪ್ರತಿ ಸಣ್ಣ ಸಣ್ಣ ಗ್ರಾಮಕ್ಕೆ ಒಂದಿಲ್ಲಾ ಒಂದು ಮನೆ ಮನೆಗೆ ಕೆಲಸದ ರೂಪದಲ್ಲಿ ಉಡುಗೊರೆಯಾಗಿ ನೀಡಿದ್ದಾರೆ, ಪಕ್ಷದ ವತಿಯಿಂದ ಮಾನ್ಯ ಡಾ ಅಂಜಲಿತಾಯಿ ಅವರಿಗೆ ನೀಡಿದ ಕಾರ್ಯವನ್ನು ಚಾಚು ತಪ್ಪದೆ ಮಾಡಿದ್ದಾರೆ ಇನ್ನೂ ಮುಂದೆಯೂ ಮಾಡುತ್ತಾರೆ.

 ಅಂಜಲಿತಾಯಿ ಅವರು ಒಬ್ಬ ವೈದ್ಯೆಯಾಗಿ ಉನ್ನತ ಶಿಕ್ಷಣ ಪಡೆದವರಾಗಿದ್ದಾರೆ ಹಾಗೂ 4-4 ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದವರಾಗಿದ್ದಾರೆ ಇದರ ಬಗ್ಗೆ ಪಕ್ಷವು ಮನಗೊಂಡು ನಾಯಕರ ಆದೇಶದ ಮೇರೆಗೆ ಅಂಜಲಿತಾಯಿ ಅವರು ದೆಹಲಿಗೆ ತೆರಳಿದರು, ಅಲ್ಲಿ ಪಕ್ಷದ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಭೇಟಿ ಮಾಡಿದರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ವಿಸ್ತರಣೆ ಬಗ್ಗೆ ಚರ್ಚಿಸಿದರು, ಈ ಎಲ್ಲಾ ವಿಷಯಗಳನ್ನು ಪರಿಗಣಿಸಿ, ಪಕ್ಷವು ಅವರಿಗೆ "ಅಖಿಲ ಭಾರತೀಯ ಕಾಂಗ್ರೆಸ್" ಪಕ್ಷದ 'ಕಾರ್ಯದರ್ಶಿ'ಯಾಗಿ ಕೆಲಸ ಮಾಡಲು ಅವಕಾಶವನ್ನು ನೀಡಿ ಗೋವಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ಉಸ್ತುವಾರಿ ಯಾಗಿ ನೇಮಕ ಮಾಡಿದರು.

ಪಕ್ಷದ ಕಾರ್ಯವನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆ ಇಂದ ಮಾಡಿದ್ದಾದಲ್ಲಿ ಪಕ್ಷವು ಗುರುತಿಸುವ ಕೆಲಸ ಮಾಡುತ್ತದೆ ಎಂದು ಸದಾ ಡಾ ಅಂಜಲಿತಾಯಿ ಅವರು ಹೇಳಲು ಇಚ್ಛಿಸುತ್ತಾರೆ.

ಡಾ ಅಂಜಲಿತಾಯಿ ಅವರು ಕೂಡ ತಮ್ಮ ಕಾರ್ಯಕರ್ತರಿಗೆ ಇದನ್ನು ಯಾವಾಗಲೂ ಹೇಳುತ್ತಿರುತ್ತಾರೆ, ಪಕ್ಷವನ್ನು ಸಂಘಟಿಸಿ, ಪಕ್ಷವನ್ನು ಬಲಪಡಿಸಿ, ಪಕ್ಷವು ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ನೀಡುತ್ತದೆ ನೀವು ತಾಳ್ಮೆಯಿಂದಿರಬೇಕು ಅಷ್ಟೇ..

 ಪಕ್ಷ‌ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಸಾಕು, ತಾಳಿದವನು ಬಾಳಿಯಾನು ಎಂಬಂತೆ ಸಮಯ ತಾನಾಗಿ ಬರುತ್ತದೆ..



Related Articles

Leave a Reply

Your email address will not be published. Required fields are marked *

Back to top button