ಸುದ್ಧಿ

ಅಗಸ್ತ್ಯ ಅಡೋಬಿ ಮೊಬೈಲ್ ಇನ್ನೋವೇಶನ್ ಲ್ಯಾಬ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ – ಬೆಂಗಳೂರು.

ಅಗಸ್ತ್ಯ ಅಡೋಬಿ ಮೊಬೈಲ್ ಇನ್ನೋವೇಶನ್ ಲ್ಯಾಬ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬೆಂಗಳೂರು:- ಅಡೋಬಿ ಮೊಬೈಲ್ ಇನ್ನೋವೇಶನ್ ಲ್ಯಾಬ್ ವತಿಯಿಂದ ಜಿಕೆ ಎಂಪಿಎಸ್ ಸುಬ್ಬಯ್ಯನ ಪಾಳ್ಯ 21 ಜೂನ್ 2024 ಪ್ರಯುಕ್ತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಅಗಸ್ತ್ಯ ಹೊಯ್ಸಳ ಸರ್ ರವರು ಅನುದಿನದ ಯೋಗ ಮಾನವನ ಜೀವದ ಜೀವಾಳ ಎಂಬ ಹೇಳಿಕೆಯನ್ನು ನೀಡಿ ಯೋಗ ದಿನದ ಮಹತ್ವ ಮತ್ತು ಹಿನ್ನೆಲೆ ಬಗ್ಗೆ ವಿವರವಾಗಿ ತಿಳಿಸಿದರು. ನಂತರ ದೇವಿಯಾನಿ ಯೋಗ ಶಿಕ್ಷಕರು ಯೋಗ ಭಂಗಿಗಳಾದ ವಜ್ರಾಸನ, ಶವಾಸನಾ ಚಕ್ರಾಶನ, ಭುಜಂಗಾಶನ, ಧನುರಾಶನ,ಪದ್ಮಾಸನ,ಭಾಲಶನ, ಇನ್ನು ಮುಂತಾದ 9 ಆಸನಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟರು. ಜೊತೆಗೆ ಅವುಗಳನ್ನು ಮಾಡುವುದರಿಂದ ಮಾನವನ ದೇಹಕ್ಕೆ ಆಗುವಂತಹ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿದರು. ಇದರ ಜೊತೆಗೆ ಸೂರ್ಯ ನಮಸ್ಕಾರ ಮತ್ತು ಯೋಗ ಮುದ್ರೆಗಳು,ಹಾಗೂ ಮುದ್ರೆಗಳನ್ನು ಮಾಡುವ ವಿಧಾನಗಳನ್ನೂ ತಿಳಿಸಿದರು,ಜೊತೆಗೆ ಯಾವ ಯಾವ ಯೋಗ ಮುದ್ರೆಗಳು ಯಾವ ಯಾವ ಅಂಗಗಳಿಗೆ ಉಪಯೋಗವಾಗುತ್ತವೆ,ಮತ್ತು ನಮ್ಮ ಯಾವ ಆರೋಗ್ಯ ಸಮಸ್ಯೆಗೆ ಯಾವ ಯೋಗಮುದ್ರೆ ಸೂಕ್ತ ಎಂಬುದನ್ನು ಮಾಡಿ ತೋರಿಸಿ ಅವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಈ ದಿನ ಕಲಿತಿರುವಂತಹ ಎಲ್ಲಾ ಯೋಗ ಭಂಗಿಗಳು ಮತ್ತು ಯೋಗ ಮುದ್ರೆಗಳು ಮತ್ತು ಸೂರ್ಯ ನಮಸ್ಕಾರ ಇವುಗಳನ್ನು ನಿಮ್ಮ ಜೀವನದಲ್ಲಿ ಪ್ರತಿದಿನ ಅಳವಡಿಸಿಕೊಂಡು ಅಭ್ಯಾಸ ಮಾಡಿ ಆರೋಗ್ಯವಂತ ಜೀವನವನ್ನು ನಡೆಸಬೇಕೆಂದು ತಿಳಿಸಿದರು. ಈ ಒಂದು ಯೋಗ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಮಂಗಳ ಗೌರಿ ರವರು ಸಹ ಉಪಸ್ಥಿತರಿದ್ದರು. ಜೊತೆಗೆ ಶಾಲೆಯ ಸಿಬ್ಬಂದಿಗಳು ಸಹ ಶಿಕ್ಷಕರು ಹಾಗೂ ಪೋಷಕರು,ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಂತೆ 100ರಕು ಜನರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.

Related Articles

Leave a Reply

Your email address will not be published. Required fields are marked *

Back to top button