ಸಂಪಾದಕೀಯ

ಅಯ್ಯಪ್ಪ ಸ್ವಾಮಿ ಮಹಾ ಕುಂಭಾಭಿಷೇಕ ಪ್ರತಿಷ್ಠಾಪನ ಮಹೋತ್ಸವಡಾ.ಜಯರಾಮಸ್ವಾಮಿ.

ಅಯ್ಯಪ್ಪ ಸ್ವಾಮಿ ಮಹಾ ಕುಂಭಾಭಿಷೇಕ ಪ್ರತಿಷ್ಠಾಪನ ಮಹೋತ್ಸವ ಡಾ.ಜಯರಾಮಸ್ವಾಮಿ

ಬೆಂಗಳೂರು.ಅಯ್ಯಪ್ಪ ಸ್ವಾಮಿ ಮಹಾ ಕುಂಭಾಭಿಷೇಕ ಪ್ರತಿಷ್ಠಾಪನ ಇದೇ ತಿಂಗಳು 18ರಿಂದ 20 ವರೆಗೂ ಆಚರಿಸಲಾಗುತ್ತದೆ ಎಂದು ಡಾ.ಜಯರಾಮಸ್ವಾಮಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಮಹೋತ್ಸವ ವನ್ನು ಚಾಮರಾಜಪೇಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ (ಆರ್)
ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧ ವಾದ ಚಾಮರಾಜಪೇಟೆಯಲ್ಲಿರುವ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ರಾಜರಾಜೇಶ್ವರಿ, ಶ್ರೀ ಅಯ್ಯಪ್ಪಸ್ವಾಮಿಯ ಕುಂಭಾಭಿಷೇಕ, ವಿಮಾನಗೋಪುರ ಮಹಾಕುಂಭಾಭಿಷೇಕ ಪೂಜಾ ಕಾರ್ಯಕ್ರಮವನ್ನು ದಿನಾಂಕ:18. ಶನಿವಾರದಿಂದ 20. ಸೋಮವಾರದವರೆಗೆ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು (ಸಿದ್ಧಗಂಗಾ ಮಠ ತುಮಕೂರು), ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನಮಠ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು (ಶ್ರೀ ಕನಕಗುರುಪೀಠ, ಹೊಸದುರ್ಗ), ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಪೀಠಾಧ್ಯಕ್ಷರು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಕೆಂಗೇರಿ ಬೆಂಗಳೂರು, ಪೂಜ್ಯ ಷ. ಬ್ರ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧ್ಯಕ್ಷರು, ಶ್ರೀ ಸಾಲೂರು ಬೃಹನ್ಮಠ ಶ್ರೀ ಮಲೆ ಮಹದೇಶ್ವರ ಬೆಟ್ಟ, ಇವರುಗಳು ದಿವ್ಯಸಾನಿಧ್ಯವನ್ನು ವಹಿಸಲಿದ್ದಾರೆ. ಜೊತೆಗೆ ರಾಜ್ಯದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಚಲನಚಿತ್ರ ನಟರು, ರಾಜಕೀಯ ಮುಖಂಡರು ಹಾಗೂ ಎಲ್ಲ ಸಮಾಜಗಳ ಗಣ್ಯಮಾನ್ಯರು ಆಗಮಿಸಲಿದ್ದಾರೆಂದೂ ತಿಳಿಸಿದರು. ಮಹಾಕುಂಭಾಭಿಷೇಕದ ಆಹ್ವಾನ ಮಾಡಿದರು.
ಎನ್. ಜಯರಾಮಸ್ವಾಮಿ
ಧರ್ಮದರ್ಶಿಗಳು ಮತ್ತು ಗುರುಸ್ವಾಮಿಗಳು, ಎಂ.ವಿನಾಯಕ,
ಸಂಚಾಲಕರು.
ಮಹಾಕುಂಭಾಭಿಷೇಕ ಸಮಿತಿ .ಚಾಮರಾಜಪೇಟೆ ಶ್ರೀ ಅಯಪ್ಪಸ್ವಾಮಿ ದೇವಾಲಯ ಟ್ರಸ್ಟ್ (ಆರ್)
ಡಾ. ಜಯರಾಮಸ್ವಾಮಿ
ಇ-ಮೇಲ್:silklonj@gmail.cm ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button