ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ. ಉಮಾಶಂಕರ್, ಐಎಎಸ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ. ಉಮಾಶಂಕರ್, ಐಎಎಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಯಾದವ್, ಐಎಎಸ್ ಅವರನ್ನು ಇಂದು ದಿಲ್ಲಿಯಲ್ಲಿ ಭೇಟಿಯಾಗಿ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಹೆದ್ದಾರಿ ವಿಷಯಗಳ ಬಗ್ಗೆ ಚರ್ಚಿಸಿದೆ.
ಸೂರತ್–ಚೆನ್ನೈ ಕಾರಿಡಾರ್ನ (NH-150C) ಪ್ಯಾಕೇಜ್-3 (ಯಾದಗಿರಿ) ಮತ್ತು ಪ್ಯಾಕೇಜ್-4 (ರಾಯಚೂರು) ಭಾಗಗಳಲ್ಲಿ ಸ್ಥಳೀಯ ಗ್ರಾಮಸ್ಥರ ಸುಗಮ ಸಂಚಾರಕ್ಕಾಗಿ ಸರ್ವೀಸ್ ರಸ್ತೆಗಳ ನಿರ್ಮಾಣ ಮತ್ತು ಸಮರ್ಪಕ ಅಂಡರ್ಪಾಸ್ಗಳ ವ್ಯವಸ್ಥೆಯ ಅಗತ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆ.
ಅದೇ ರೀತಿ, ಬೆಳಗಾವಿ–ಹುನಗುಂದ–ರಾಯಚೂರು ವಿಭಾಗದ (NH-748A) ಪ್ಯಾಕೇಜ್ಗಳು 5, 6 ಮತ್ತು 7ರ ವಿಚಾರದಲ್ಲೂ ಇದೇ ಬೇಡಿಕೆ ಮುಂದಿಟ್ಟೆನು.
ಆಂಧ್ರಪ್ರದೇಶ/ಕರ್ನಾಟಕ ಗಡಿ–ರಾಯಚೂರು–ಕರ್ನಾಟಕ/ತೆಲಂಗಾಣ ಗಡಿ ಯೋಜನೆಗಳು ಈ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ್ದರಿಂದ, ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಹಾಗೂ ಪ್ಯಾಕೇಜ್-7ಗೆ ಸಂಬಂಧಿಸಿದಂತೆ ತ್ವರಿತವಾಗಿ ಟೆಂಡರ್ ಕರೆಯಲು ಮನವಿ ಮಾಡಿದೆ.
ಇಬ್ಬರೂ ಅಧಿಕಾರಿಗಳು ಈ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸಾಧ್ಯವಾದ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.
Met Shri V. Umashankar, IAS, Secretary, Ministry of Road Transport and Highways, and Shri Santosh Kumar Yadav, IAS, Chairman, National Highways Authority of India (NHAI), in Delhi, and discussed key #highway issues concerning my constituency.
Raised the demand for service roads to ensure cross movement and adequate underpasses for local villagers in Pkg-3 (#Yadgir) and Pkg-4 (#Raichur) of the Surat–Chennai Corridor (NH-150C), as well as Pkg-5, 6, and 7 (Raichur) of the Belgaum–Hungund–Raichur section (NH-748A).
Also emphasised the importance of the AP/KN Border–Raichur–KN/TS Border Project for the #development of this backward region, urging its high-priority implementation and immediate tendering of Pkg-7 to benefit this Aspirational District. Both officers assured that they would look into the issues and extend all possible assistance.




