ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಕೊಳ್ಳಬಹುದು – ನಿತಿನ್ ಶಾ ಬೆಂಗಳೂರು.

ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಕೊಳ್ಳಬಹುದು – ನಿತಿನ್ ಶಾ ಬೆಂಗಳೂರು. ಉದ್ಯಾನ ನಗರಿ ಬೆಂಗಳೂರಿನ ಆಗ್ನೆಯ ಭಾಗದ ಎಲೆಕ್ಟ್ರಾನಿಕ್ ಸಿಟಿ ಫಸ್-1 ನಲ್ಲಿ ಸಪ್ನ ಬುಕ್ ಹೌಸ್ ಆರಂಭ ಪುಸ್ತಕವನ್ನು ಕನ್ನಡಿಗರಿಗೆ ವ್ಯಾಪಕವಾಗಿ ತಲುಪಿಸುವ ಸದಾಶಯ ಹೊಂದಿದೆ, ಒಂದೇ ಸೂರಿನಡಿ ಎಲ್ಲಾ ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕ, ಅಧ್ಯಯನ ಸೇರಿ ಎಲ್ಲಾ ರೀತಿಯ ಪುಸ್ತಕಗಳನ್ನು ಬೆಂಗಳೂರಿನ ಆಗ್ನೆಯ ಭಾಗದ ಓದುಗರಿಗೆ ತಲುಪಿಸುವ ಮೂಲಕ ಕನ್ನಡಿಗರ ಸಪ್ನವನ್ನು ನನಸಾಗಿಸಲು ‘ಸಪ್ನಾ’ ಸಜ್ಜಾಗಿದೆ. ಗ್ರಾಹಕರ ನೆಚ್ಚಿನ ಪುಸ್ತಕ, ಮಕ್ಕಳ ಪಠ್ಯಪುಸ್ತಕ, ಅಧ್ಯಯನ ಪುಸ್ತಕಗಳು, ಮಕ್ಕಳ ಆಟಿಕೆ, ಗಿಫ್ಟ್, ಸ್ಟೇಷನರಿ, ಅಲಂಕಾರಿಕ ವಸ್ತುಗಳು ಆಫ್‌ಲೈನ್ ಹಾಗೂ ಅನ್‌ಲೈನ್ ಎರಡೂ ವಿಭಾಗದಲ್ಲಿ ನೂರಾರು ಬಗೆಯ ಪುಸ್ತಕಗಳನ್ನು ಒದಗಿಸಲಿದೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡದ ಎಲ್ಲ ಪ್ರಕಾರಗಳ ಸಾಹಿತ್ಯ ಸಪ್ನ ಮಳಿಗೆಯಲ್ಲಿ ಇರಲಿದೆ.
ಸಪ್ನಾ ಬುಕ್ ಹೌಸ್ ಕರ್ನಾಟಕದ ವಿವಿಧ ನಗರಗಳಲ್ಲಿ 23 ಶಾಖೆಯನ್ನು ಹೊಂದಿದ್ದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಆಗ್ನೆಯ ಭಾಗದಲ್ಲಿ 24ನೆಯ ಮಳಿಗೆ ತೆರೆಯಲು ಸಜ್ಜಾಗಿದೆ. ಕನ್ನಡದ ಅತಿದೊಡ್ಡ ಪುಸ್ತಕ ಮಳಿಗೆ ಮತ್ತು ದೊಡ್ಡ ಪುಸ್ತಕ ಪ್ರಕಾಶನ ಸಂಸ್ಥೆಯಾಗಿರುವ ಸಪ್ಪಾ, ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕರ್ನಾಟಕ ಸರ್ಕಾರವು ಸಪ್ನ ಬುಕ್ ಹೌಸ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆ ಸಪ್ಪದ್ದು. ಸಪ್ನ ಬುಕ್ ಹೌಸ್ ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದಂತೆ 500ಕ್ಕೂ ಹೆಚ್ಚು ಬರಹಗಾರರ 7000ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಸಪ್ನಾ ಇಂದು ಪುಸ್ತಕಗಳಿಗೆ ಪರ್ಯಾಯ ಹೆಸರಾಗಿದೆ. ಒಂದೇ ಸೂರಿನಡಿ ವಿವಿಧ ವಿಷಯಗಳ ಕುರಿತು ಒಂದು ಲಕ್ಷಕ್ಕೂ ಹೆಚ್ಚು ಶೀರ್ಷಿಕೆಗಳನ್ನು ನೀವು ಕಾಣುವ ಭಾರತದ ಏಕೈಕ ಸ್ಥಳ ಸ್ವಪ್ನ ಬುಕ್ ಹೌಸ್.
ಎಂಬ ಉತ್ಸಾಹ ಭರಿತ ಬೆಳವಣಿಗೆಯೊಂದಿಗೆ ಮುಂದೆ ಮುಂದೆ ಸಾಗುತ್ತಿರುವ ಸಪ್ನ ಪುಸ್ತಕ ಕಾಶಿ ದೇಶದಲ್ಲಿಯೇ ಅತಿಆಧುನಿಕ ಶೈಲಿಯ ತಂತ್ರಜ್ಞಾನವನ್ನು ಒಳಗೊಂಡಿರುವ ಒಂದು ವಿಶಿಷ್ಟ ಹಾಗೂ ವಿಶೇಷವಾದ ಪುಸ್ತಕ ಕಾಶಿ.
ಸಪ್ನ ಈ ಹೆಸರು ಪುಸ್ತಕ ಪ್ರಿಯರಿಗೆ ತಮ್ಮ ಪುಸ್ತಕ ದಾಹವನ್ನು ತೀರಿಸುವ ಪ್ರೀತಿಯ ಪುಸ್ತಕ ಭಂಡಾರ. 1967ರಲ್ಲಿ 40 ಚದರ ಅಡಿಗಳ ವಿಸ್ತೀರ್ಣದಲ್ಲಿ ಪ್ರಾರಂಭವಾಗಿ ಪ್ರಸ್ತುತ 24 ಶಾಖೆಗಳನ್ನೂ ಒಳಗೊಂಡಂತೆ ಒಟ್ಟು ಸುಮಾರು 5.5 ಲಕ್ಷ ಚದರ ಅಡಿಗಳ ವಿಸ್ತೀರ್ಣದಲ್ಲಿ ಅಲಂಕೃತಗೊಂಡಿದೆ. ಈಗಾಗಲೇ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ, ಪುಸ್ತಕ ಸಂಗ್ರಹದ ಜೊತೆ ಸ್ಟೇಷನರಿ, ಆರ್ಟ್ & ಕ್ರಾಫ್ಟ್, ಗಿಫ್ಟ್, ಟಾಯ್ಸ್ & ಸ್ಪೋರ್ಟ್ಸ್, ಆಫೀಸ್ ಸಪ್ಲೆಸ್, ಟೆಕ್ ಅಕ್ಸೆಸರೀಸ್, ಸ್ಕೂಲ್ ಪ್ರಾಡಕ್ಟ್, ಫುಡ್ & ಚಾಕೊಲೇಟ್ಸ್, ಕನ್ನಡ ಪುಸ್ತಕಗಳು ಹೀಗೆ ಹಲವು…ಇವುಗಳಿಗೆ ಪೂರಕವಾಗಿ ನಮ್ಮದೇ ಆದ ಸ್ಟೋರ್ 67 ಬ್ಯಾಂಡ್ ನ ಹತ್ತು ಹಲವು ಪರಿಕರಗಳು ಲಭ್ಯ ಈ ದೃಷ್ಟಿಯಿಂದ ಅಕ್ಷರ ಪ್ರಿಯರಿಗೆ ಹತ್ತಿರವಾಗುವುದರಲ್ಲಿ ಸಂದೇಹವೇ ಇಲ್ಲ, ಇದೇ ಸಂದರ್ಭದಲ್ಲಿ ಇನ್ನೊಂದು ಸಂತಸದ ಸುದ್ದಿ ಅದುವೇ ಸಪ್ನದ ಇನ್ನೊಂದು ಅಂಗ ಸಂಸ್ಥೆ ದಿಯಾರ ಪ್ರೆಸ್. ಇದರ ಮೂಲ ಉದೇಶ 2 ರಿಂದ 6ನೇ ವಯಸ್ಸಿನ ವಯೋಮಾನದ ಮಕ್ಕಳಿಗೆ ಅತ್ಯುತ್ತಮವಾದ ವರ್ಣರಂಜಿತ ಪುಸ್ತಕಗಳಲೋಕಾರ್ಪಣೆ ಆಗ್ಲಿವೆ ಎಂದರು.
ಸಪ್ನ ಮಸ್ತಕ ಪ್ರಕಾಶನ ಮತ್ತು ಮಾರಾಟವನ್ನು ಒಂದು ಉದ್ಯಮವನ್ನಾಗಿ ಜಗತ್ತಿಗೆ ತೋರಿಸಿಕೊಟ್ಟಿದೆ. ಈವರೆಗೂ ಕನ್ನಡದಲ್ಲಿ 7000ಕ್ಕೂ ಹೆಚ್ಚು ವಿಷಯ ವೈವಿದ್ಯತೆಯ ದೃಷ್ಟಿಯಿಂದ ವೈವಿದ್ಯಮಯ ಕೃತಿಗಳನ್ನು ಹಾಗೂ 900 ಕ್ಕೂ ಹೆಚ್ಚು ಪಠ್ಯ ಹಾಗೂ ಸ್ಪರ್ಧಾತ್ಮಕ ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯ ವಿಚಾರ. ಅದಷ್ಟೇ ಅಲ್ಲದೆ ಸಪ್ನ ಇಂಕ್ ಎಂಬ ಸ್ವ – ಪ್ರಕಾಶನ ಮೂಲಕ ಉದಯೋನ್ಮುಖ ಲೇಖಕರಿಗೂ ಸ್ವ – ಪ್ರಕಾಶನಕ್ಕೆ ನಾಂದಿಯಾಗಿದೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ Sapnaonline.com ಮೂಲಕ ತಾವಿದ್ದಲ್ಲಿಗೆ ಪುಸ್ತಕ/ಸಾಮಾಗ್ರಿ ಪೂರೈಸುವ ಸೌಲಭ್ಯವನ್ನು ಸಹ ಓದುಗರಿಗೆ ಕಲ್ಪಿಸಿ ಕೊಟ್ಟಿದೆ ಎಂದು ತಿಳಿಸಿದರು.
ಪುಸ್ತಕ ಪ್ರಿಯರು ತಮ್ಮ ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ, ತಮ್ಮ ಮಕ್ಕಳ ಭವಿಷ್ಯದ ಉಜ್ವಲ ಪ್ರತಿಭೆಗಳ ಏಳಿಗೆಗಾಗಿ ನಮ್ಮ ಅಂದರೆ ಸಪ್ನದ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು, ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಕೊಳ್ಳಬಹುದು, ಇದು ನಿಮ್ಮ ಭವಿಷ್ಯದ ಕನ್ನಡಿ ಎಂದು ನಿತಿನ್ ಶಾ ಅವರು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.



