ಸಂಪಾದಕೀಯ

ದಶಮಾಪುರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎನ್.ನಾಗರಾಜ ನಿವೃತ್ತಿ . ಆತ್ಮೀಯ ಬೀಳ್ಕೊಡುಗೆ

ದಶಮಾಪುರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎನ್.ನಾಗರಾಜ
ನಿವೃತ್ತಿ ಆತ್ಮೀಯ ಬೀಳ್ಕೊಡುಗೆ
ಹಗರಿಬೊಮ್ಮನಹಳ್ಳಿ, ಸೆ-೧೯:- ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕು, ದಶಮಾಪುರ ಗ್ರಾಮದ ಪಾಟೀಲ ಕೃಷ್ಣಮೂರ್ತಿರಾವ್ ಸ್ಮಾರಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್.ನಾಗರಾಜ ಸೇವೆಯಿಂದ ದಿನಾಂಕ:೧೮-೦೯-೨೦೨೪ ರಂದು ನಿವೃತ್ತಿ ಹೊಂದಿದರು. ಎನ್.ನಾಗರಾಜ ರವರಿಗೆ ಉತ್ತಮ ಶಿಕ್ಷಕ ಹಾಗೂ ಅತ್ಯುತ್ತಮ ಗಣಿತ ಶಿಕ್ಷಕ ಎಂಬ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜನಪ್ರಿಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಗರಿಮೆ ಅವರದ್ದಾಗಿತ್ತು. ವಿನಯ, ಸಹೃದಯತೆ, ಶಿಸ್ತು, ಸಮಯ ಪಾಲನೆಯಿಂದ ಎನ್.ನಾಗರಾಜ ಪ್ರಸಿದ್ಧಿಯಾಗಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಗ್ರಾಮದ ಪ್ರಮುಖರು ಗೌರವಾನ್ವಿತರಿಗೆ ಎನ್.ನಾಗರಾಜ ಅವರ ಪತ್ನಿ ಎನ್.ಕವಿತಾ ರವರಿಗೂ ಶಾಲು ಹೊದಿಸಿ ಫಲ ತಾಂಬೂಲಾದಿಗಳನ್ನು ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಎನ್.ನಾಗರಾಜ ರವರು ತಮ್ಮ ಭಾಷಣದಲ್ಲಿ ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಲ್ಲದೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ದೇಶಭಕ್ತಿ, ವಿನಯಶೀಲತೆ, ಸನ್ನಡತೆ ರೂಪಿಸುವ ಶಕ್ತಿ ಇಂದಿನ ದಿನಗಳಲ್ಲಿ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ನರಸಿಂಹಗಿರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ರುದ್ರಣ್ಣನವರು ವಹಿಸಿದ್ದರು. ಶಾಲೆಯ ಮುಖ್ಯ ಗುರುಗಳಾದ ಎನ್.ಸುರೇಶ್ ಸ್ವಾಗತಿಸಿದರು. ಸಹಶಿಕ್ಷಕಿ ಎ.ಎಂ.ಸುಮAಗಳಮ್ಮ ನಿರೂಪಣೆ ಮಾಡಿದರು. ದಶಮಾಪುರ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮರಿಸ್ವಾಮಿ, ಗ್ರಾಮದ ಮುಖಂಡರಾದ ಓಬಳೇಶ್, ಗಿರೀಶ್, ಸಿದ್ದಬಸಪ್ಪ, ಕೆ.ಎಸ್.ಆನಂದ, ವಕೀಲ ದೊಡ್ಡಮನಿ ಮಂಜುನಾಥ, ರವೀಂದ್ರ ತುರಾಯಿ, ಪಿ.ಡಿ.ಓ ನವೀನ್‌ಕುಮಾರ್ ಹಾಗೂ ಮಾಜಿ ಯೋಧ ವೀರೇಶ್, ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
-ಮಹೇಶ್ ಮಾದೂರು

Related Articles

Leave a Reply

Your email address will not be published. Required fields are marked *

Back to top button