ನಿವೃತ್ತಿ ಹೊಂದಿದ ನಂತರವೂ ಮಾಹಿತಿ ಆಯುಕ್ತರುಗಳ ಹೆಸರುಗಳು ವೆಬ್ ಸೈಟ್ ನಲ್ಲಿ ತೆಗೆಯದ ಬಗ್ಗೆ

ರವರಿಗೆ
ಶ್ರೀಮತಿ. ಸುಷಮಾ ಗೋಡ್ಬೋಲೆ, ಭಾ.ಆ.ಸೇ
ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಮಾಹಿತಿಸೌಧ, ಬೆಂಗಳೂರು.
Smt. Thulasi Maddineni
Secretary to Government
Department of Personal and Administrative Reforms (AR)
ವಿಷಯ : ಕರ್ನಾಟಕ ರಾಜ್ಯ ಮಾಹಿತಿ ಆಯೋಗ ವೆಬ್ಸೈಟ್ನ ಪ್ರಕರಣಗಳ ಸೂಚಿ ಪಟ್ಟಿಯಲ್ಲಿ ನಿವೃತ್ತ ಆಯುಕ್ತರಗಳ ಹೆಸರುಗಳು ಇನ್ನೂ ಇರುವ ಬಗ್ಗೆ.
ಮಾನ್ಯರೇ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಎಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ಮೂವರು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರುಗಳು ನಿವೃತ್ತಿ ಹೊಂದಿರುತ್ತಾರೆ. ಆದರೆ ಅವರು ನಿವೃತ್ತಿ ಹೊಂದಿದ ನಂತರವೂ ಅವರ ಹೆಸರುಗಳು ಇನ್ನು ಕರ್ನಾಟಕ ರಾಜ್ಯ ಮಾಹಿತಿ ಆಯೋಗ ವೆಬ್ಸೈಟ್ನ ಪ್ರಕರಣಗಳ ಸೂಚಿ ಪಟ್ಟಿಯಲ್ಲಿ ಇರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಮತ್ತು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಾಯುಕ್ತ ದಾಳಿಯಲ್ಲಿ ಲಂಚದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಆಯುಕ್ತರ ಹೆಸರು ಸಹಾ ಇರುವುದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ಕಳಂಕ ತಂದಿರುತ್ತದೆ.
ಹಾಗಾಗಿ ಕೂಡಲೇ ಎಚ್ಚೆತ್ತು ಈ ಕುರಿತಂತೆ ಅನ್ವಯ ಆಗುವ ಕಾನೂನಿನ ಅಡಿಯಲ್ಲಿ ಸೂಕ್ತ ರೀತಿಯ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹದ ಮನವಿ.
ವಂದನೆಗಳೊಂದಿಗೆ
ಮಲ್ಲಿಕಾರ್ಜುನ ರಾಜು
ಅಧ್ಯಕ್ಷರು
ಯೂತ್ ಫಾರ್ ಹ್ಯೂಮನ್ ರೈಟ್ಸ್ ಕರ್ನಾಟಕ & ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ
ಸಂಖ್ಯೆ.859, ಮೊದಲನೇ ಮಹಡಿ, ಮೊದಲನೇ ಮುಖ್ಯ ರಸ್ತೆ, ಯಶವಂತಪುರ, ಬೆಂಗಳೂರು.
9449023764
ಪ್ರಧಾನ ಕಾರ್ಯದರ್ಶಿ
ಜಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ
ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿ
National Anti Corruption and Operation Committee of India
ಇನ್ವೆಸ್ಟಿಗೇಷನ್ ಜರ್ನಲಿಸ್ಟ್
ರಾಜೇಶ್ವರಿ ವಾಹಿನಿ
ಸ್ಥಳ – ಬೆಂಗಳೂರು
ದಿನಾಂಕ – 21.04.25



