ಪರಂಪರಾ ಕಲ್ಚರಲ್ ಫೌಂಡೇಶನ್ (ರಿ)ಎರಡನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು.9448202708


ಪರಂಪರಾ ಕಲ್ಚರಲ್ ಫೌಂಡೇಶನ್ (ರಿ)
ಎರಡನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು.
9448202708
*ಬಾಲ ಪ್ರತಿಭಾವಳಿ* – ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು
ಮಕ್ಕಳಿಂದ ಭಾಷಣ, ಗಾಯನ, ವಾದನ, ನರ್ತನ – 19/10/2025 ರ ಭಾನುವಾರ ಇಳಿಮದ್ಯಾಹ್ನ 2 ಗಂಟೆಯಿಂದ
ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.) ವತಿಯಿಂದ ಇದೇ 19ರಂದು ಭಾನುವಾರ ಅಪರಾಹ್ನ 2ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬಾಲಪ್ರತಿಭಾವಳಿ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿದೆ.
ಇದೇ ಸಂದರ್ಭದಲ್ಲಿ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ಮಕ್ಕಳ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಪರಿಪೂರ್ಣ ಪ್ರಜ್ಞಾ ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ಎನ್.ದೇವರಾಜ, ಬಿಬಿಎಂಪಿ ಮಾಜಿ ಸದಸ್ಯ ಎಂ.ಮುನಿರಾಜು, ವಿಶ್ವವಾಣಿ ಕಾರ್ಯ ನಿರ್ವಾಹಕ ಸಂಪಾದಕ ಲೋಕೇಶ್ ಕಾಯರ್ಗ, ಮುದ್ರಣೋದ್ಯಮಿ ಡಾ.ನಂದಿ ಸುಬ್ರಮಣಿ, ಚಲನಚಿತ್ರ ಸಮನ್ವಯಕಾರ ಎಸ್.ಕೆ.ಅನಂತ, ಬೆಂಗಳೂರು ಪೂರ್ವ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಈ.ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥೆಯ ಅಧ್ಯಕ್ಷ ಜಿ ಪಿ ರಾಮಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಎಸ್.ಸುಧಾಕರ, ಜಿ.ಮಧುಸೂದನ್ ನಾಯಕ, ಏಣಗಿ ಪ್ರಭಾಕರ್, ಟಿ.ಅರ್.ದಿವಾಕರ ಕಶ್ಯಪ್ ಕಾರ್ಯಕ್ರಮ ನಿರ್ವಹಿಸುವರು ಎಂದು ಪರಂಪರಾ ಅಧ್ಯಕ್ಷ ಜಿ ಪಿ ರಾಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ವಿಶ್ವಾಸಿ
ಜಿ ಪಿ ರಾಮಣ್ಣ
ಅಧ್ಯಕ್ಷ
ಪರಂಪರಾ ಕಲ್ಚರಲ್ ಫೌಂಡೇಶನ್
ಎರಡನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು.
9448202708
paramparagpr@gmail.com



