ಸಂಪಾದಕೀಯ

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) 10 ನೇ ತಾಲೂಕು ಸಮ್ಮೇಳನ…..ಹಗರಿಬೊಮ್ಮನಹಳ್ಳಿ.

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) 10 ನೇ ತಾಲೂಕು ಸಮ್ಮೇಳನ
ಹಗರಿಬೊಮ್ಮನಹಳ್ಳಿ.ತಾಲೂಕು 10.ನೇ ತಾಲೂಕು ಸಮ್ಮೇಳನ.14-10-2024..ವಿಶ್ವ ಕರ್ಮ ಸಮುದಾಯ ಭವನದಲ್ಲಿ ಜರುಗಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ಕಾರ್ಮಿಕರ ಮಹಿಳೆಯರ ವಿರೋಧಿ ನೀತಿಯನ್ನು ಅನುಸರಿಸುತ್ತಾ ಬರಲಾಗಿದೆ ಬೆಲೆ ಏರಿಕೆನಿಯಂತ್ರಣ ಮಾಡಲು ವಿಫಲವಾಗಿವೆ ಬಡವರಿಗೆ ಅದರಲ್ಲೂ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ಭೂಮಿ ಸಾಗುವಳಿ ಮಾಡಿದ್ದರೂ ಪಟ್ಟಾ ನೀಡದೆ ವಿರೋದಿ ನೀತಿಯನ್ನು ಅನುಸರಿಸುತ್ತಾ ಬರಲಾಗಿದೆ. ಜಿಂದಾಲ್ ಕಂಪನಿಗಳಿಗೆ ತೀರ ಕಡಿಮೆ ಬೆಲೆಯಲ್ಲಿ 3657.ಎಕರೆ ಭೂಮಿ ಕೊಡಲಾಗಿದೆ. ಈ ಎರಡು ಸರ್ಕಾರಗಳು ರೈತ ಕಾರ್ಮಿಕ ಮಹಿಳೆಯರ ವಿರೋಧಿ ಯಾಗಿದೆ. ಎಂದು ಸಿಪಿಎಂ ಪಕ್ಷದ 10 ನೇ ತಾಲೂಕು ಸಮ್ಮೇಳನ ಉದ್ಘಾಟನೆ ಮಾಡಿದ ಯು. ಬಸವರಾಜ ಸಿಪಿಎಂ ರಾಜ್ಯ ಕಾರ್ಯದರ್ಶಿಗಳು ಮಾತನಾಡಿದರು. ಮುಂದುವರೆದು ಮಾತನಾಡುತ್ತಾ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಲೆ ಇವೆ. ದೌರ್ಜನ್ಯ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಬಲವಾಗಿ ಟೀಕಿಸಿದರು. ಇಂತಹ ಸಂದರ್ಭದಲ್ಲಿ ಸಿಪಿಎಂ ಪಕ್ಷ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಇನ್ನಷ್ಟು ಹೋರಾಟಗಳನ್ನು ಬಲಪಡಿಸಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆರ್.ಎಸ್.ಬಸವರಾಜ (ಸಿಪಿಎಂ) ರಾಜ್ಯ ಸಮಿತಿ ಸದಸ್ಯರು. ಬಿ.ಮಾಳಮ್ಮ ತಾಲೂಕು ಕಾರ್ಯದರ್ಶಿ, ಎಸ್. ಜಗನ್ನಾಥ ಜಿಲ್ಲಾ ಸಮಿತಿ ಸದಸ್ಯರು, ತಾಲೂಕು ಸಮಿತಿ ಸದಸ್ಯರಾದ ಕೆ.ಗಾಳೆಪ್ಪ, ಕೆ.ಅಂಜೀನಮ್ಮ, ಪಿ.ಚಾಂದಬೀ, ಎಂ.ಆನಂದ್, ಕೆ. ರಮೇಶ್. ಇದ್ದರು. ಅಧ್ಯಕ್ಷತೆಯನ್ನು ಕೆ.ಅಂಜೀನಮ್ಮ ವಹಿಸಿದ್ದರು, ಹುಲುಗಪ್ಪ ಉಪನಾಯಕನಹಳ್ಳಿ ಇನ್ನೂ ಮುಂತಾದವರು ಭಾಗವಹಿಸಿದ್ದರು. ವಂದನಾರ್ಪಣೆ ಅನಂದ್ ಮಾಡಿದರು, ಸಮ್ಮೇಳನ ಸಂದರ್ಭದಲ್ಲಿ ನೂರಾರು ಜನರೊಂದಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button