ಸಂಪಾದಕೀಯ

ಯುಗಾದಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು. ತುರುವಿಹಾಳ್

ಯುಗಾದಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ ನಡೆಯಿತು

ತುರ್ವಿಹಾಳ: ಪಟ್ಟಣದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡಿದ್ದ ಯುಗಾದಿ ಮತ್ತು ರಂಜಾನ್ ಎರಡು ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಂಕರಲಿಂಗೇಶ್ವರ ಜಾತ್ರೆ ಮತ್ತು ರಂಜಾನ್ ಹಬ್ಬಕ್ಕೆ ಅಚ್ಚುಕಟ್ಟಾಗಿ ಬಂದೋಬಸ್ತ್ ವಿರುತ್ತದೆ ಹಾಗೂ ಎರಡು ಹಬ್ಬ ಒಂದೇ ದಿನ ಇರುವದರಿಂದ ಯಾರು ಸಹ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಪಿ.ಎಸ್.ಐ ಸುಜಾತ್.ಡಿ.ಎನ್ ತಿಳಿಸಿದರು..

ನಂತರ ಮಾತನಾಡಿದ ಬಾಪುಗೌಡ ದೇವರಮನಿ ಹಬ್ಬಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ಹಾಗೂ ಪೋಲಿಸ್ ಸಿಬ್ಬಂದಿ ಅಲ್ಲದೆ ಊರಿನ ಯುವಕರು ಸಹ ಭಾಗವಹಿಸಿ ಹಬ್ಬವನ್ನು ಯಶ್ವಶ್ವಿಗೊಳಿಸಬೇಕು, ಹಾಗೂ ಇದು ತುರ್ವಿಹಾಳ ಅಲ್ಲ ಇದು ತುರುವಿಹಾಲ ಎಂದು ಮತ್ತೆ ಮರುಕಳಿಸಿದೆ ಎಂದು ಹೇಳಲು ಇಷ್ಟಪಡುತ್ತೇನೆ, ಎಂದು ಹೇಳಿದರು.

ಪಟ್ಟಣದ ಆರಾಧ್ಯದೈವ ಎಂದರೆ ಶಂಕರಲಿಂಗ ತಾತನವರು ಎಂದು ಮರಿಸ್ವಾಮಿ ಹತ್ತಿಗುಡ್ಡ ಹೇಳಿದರು.

ಅನ್ವರ ಪಾಷಾ ದಳಪತಿ ಮಾತನಾಡಿ ಪಟ್ಟಣದ ಸರ್ವ ಜನಾಂಗ ಮಾಡುವ ಹಬ್ಬ ಎಂದರೆ ಅದು ಯುಗಾದಿ ಹಬ್ಬ ಎಂದು ಹೇಳಿದರು ಹಾಗೂ ಜಾತ್ರೆಯ ಪ್ರಯುಕ್ತ ಈ ವರ್ಷ ಶಂಕರಲಿಂಗೇಶ್ವರ ದೇವಸ್ಥಾನದ ಸಮಿತಿಯವರು ಪ್ರಸಾದ ವ್ಯವಸ್ಥೆ ಮಾಡಿರುವದು ವಿಶೇಷವಾಗಿದೆ ಎಂದರು.

ಈ ಸಂದರ್ಭದಲ್ಲಿ: ಮಲ್ಲನಗೌಡ ದೇವರಮನಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಶ್ಯಾಮಿದ್ ಸಾಬ್ ಚೌದ್ರಿ, ಗೂಳಪ್ಪ ಕುಂಟೋಜಿ ಮೌಲಪ್ಪಯ್ಯ ಗುತ್ತೇದಾರರರು ಮಂಟೆಪ್ಪ ಎಲೆಕೂಡ್ಲೀಗಿ,ಸಿದ್ದೇಶ್ವರ ಗುರಿಕಾರ್, ಮರಿಸ್ವಾಮಿ ಹತ್ತಿಗುಡ್ಡ, ಯಲ್ಲಪ್ಪ ಭೋವಿ, ನಿಂಗಪ್ಪ ಗೋಸಬಾಳ, ಶಂಕರಗೌಡ ದೇವರಮನಿ,ಸಿರಾಜ್ ಪಾಷ ದಳಪತಿ,ಅರವಿಂದ್ ರೆಡ್ಡಿ, ಭೀಮದಾಸ್, ಅನ್ವರ್ ಪಾಷ, ಹಾಗೂ ಊರಿನ ಹಿರಿಯರು ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button