ಸುದ್ಧಿ

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು: ಮಹೇಶ್ ಪಟ್ಟೆದ್..

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು: ಮಹೇಶ್ ಪಟ್ಟೆದ್

ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಳ್ಳಬೇಕು ಎಂದು ಕೊಪ್ಪಳದ ಭೂಮಿ ಐ.ಎ.ಎಸ್ ಮತ್ತು ಕೆ ಎ ಎಸ್ ತರಬೇತಿ ಕೇಂದ್ರ ನಿರ್ದೇಶಕರಾದ ಶ್ರೀ ಮಹೇಶ ಪಟ್ಟೆದ್ ಹೇಳಿದರು.
ಇಲ್ಲಿನ ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗುಳ ಶಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಉದ್ಯೋಗ ಮಾಹಿತಿ ಕೋಶ ಸಹಯೋಗದಲ್ಲಿ
ಒಂದು ವಾರದ ಉಚಿತ ಕಾರ್ಯಾಗಾರದ 4ನೇ ದಿನವಾದ ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಸುಧಾರಣೆ ಆಗಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ, ಭರವಸೆ ನಿಮ್ಮ ಕೈಯಲ್ಲಿದೆ ಚೆನ್ನಾಗಿ ಓದಿ, ಒಳ್ಳೆ ಉದ್ಯೋಗ ಪಡೆದು ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿಮ್ಮ ಗುರಿಯನ್ನು ನನಸಾಗಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಶಾಸ್ತ್ರ ಉಪನ್ಯಾಸಕರಾದ ಮಾರುತೇಶ್ ವಹಿಸಿದರು. ಕಾಲೇಜಿನ ಪ್ರಾಂಶುಪಲರಾದ ಶ್ರೀ ಬಜರಂಗ ಬಲಿ ಮಾತನಾಡಿದರು.
ನಂತರ ಮಾತನಾಡಿದ ಭೂಮಿ ತರಬೇತಿ ಕೇಂದ್ರದ ಮಾರ್ಗದರ್ಶಕರಾದ ಹನುಮೇಶ್ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಹೊಂದಬೇಕಾದರೆ ಕೇವಲ ಜ್ಞಾನ ಪಡೆದರೆ ಸಾಲದು ತಂದೆ ತಾಯಿಗಳ ಮಾರ್ಗದರ್ಶನ ಅತ್ಯಗತ್ಯ ಎಂದು ಹೇಳಿದರು. ಐಕ್ಯೂಎಸಿ ಸಂಯೋಜಕರಾದ ಮರ್ವಿನ್ ಡಿಸೋಜ, ಹಾಗೂ ಉದ್ಯೋಗ ಮಾಹಿತಿ ಕೋಶ ಕೇಂದ್ರ ಸಂಯೋಜಕರಾದ ಡಾ. ವೀರೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಲಲಿತಾ ಎನ್. ಕೆ, ಡಾ. ಆಶಿಕಾ ಎಚ್ .ಸಿ. ಹಾಗೂ ಉಪನ್ಯಾಸಕರಾದ ಗೋಪಾಲ್, ಸಿದ್ದಪ್ಪ, ಸೈಯದ್ ಖಲಿಲುಲ್ಲಾ ಖಾದ್ರಿ ಉಪಸ್ತಿತರಿದ್ದರು ಮತ್ತು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button