ಸ್ವಯಂಕೃತ ಅಪರಾಧದಿಂದ ಬಿಜೆಪಿ ಅವನತಿಯತ್ತ ಸಾಗುತ್ತಿದೆಯಾ??

ಸ್ವಯಂಕೃತ ಅಪರಾಧದಿಂದ ಬಿಜೆಪಿ ಅವನತಿಯತ್ತ ಸಾಗುತ್ತಿದೆ ಕರ್ನಾಟಕದಲ್ಲಿನ ಬಿಜೆಪಿ ತನ್ನಿಂದ ತಾನೇ ಅವಸಾನದತ್ತ ಮುನ್ನಡೆಯುತ್ತಿದೆ ಅದಕ್ಕೆ ಯಾರೂ ಹೊಣೆಗಾರರಲ್ಲ ದೆಹಲಿ ವರಿಷ್ಠರು ಮಾಡುತ್ತಿರುವ ಸ್ವಯಂಕೃತ ಅಪರಾಧವೇ ಕಾರಣವಾಗಿದೆ ಸ್ವಯಂಕೃತ ಅಪರಾಧದಿಂದ ಬಿಜೆಪಿ ಅವನತಿಯತ್ತ ಸಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಯಾವಾಗಲೂ ರಾಜ್ಯದ ಬಿಜೆಪಿ ನಾಯಕರು ಕಾಂಗ್ರೆಸ್ ಮುಳುಗುವ ಹಡಗು ಅದಕ್ಕೆ ರಾಷ್ಟ್ರ ನಾಯಕರಿಲ್ಲ ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು ನಮ್ಮಲ್ಲಿ ಮೋದಿ ಅಮಿತ್ ಶಾಹ ನಡ್ಡ ಘಟಾನುಘಟಿ ನಾಯಕರುಗಳು ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು ಇದು ಸತ್ಯವೇ ಆದರೆ ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ಈಗ ಮುಳುಗುವ ಹಡಗಾಗಿದೆ ರಾಜ್ಯವನ್ನು ಮುನ್ನಡೆಸುವ ಸಮರ್ಥ ಹಾಗೂ ದಕ್ಷ ಮತ್ತು ಘಟಾನು ಘಟಿ ಅನುಭವಿಗಳನ್ನು ದೂರವಿಟ್ಟು ಅವರನ್ನು ಮುಳುಗಿಸಲಾಗುತ್ತಿದೆ ಬದಲಿಗೆ ನಾವು ಏನೋ ಸಾಧನೆ ಮಾಡುತ್ತಿದ್ದೇವೆ ಹೊಸದನ್ನು ಹೇಳುತ್ತಿದ್ದೇವೆ ಎನ್ನುವ ರೀತಿಯಲ್ಲಿ ಯುವಕರ ಕೈಗೆ ಅಧಿಕಾರವನ್ನು ಕೊಡುತ್ತಿದ್ದೇವೆ ಎಂದು ಹೇಳಿ ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪದವಿಯನ್ನು ನೀಡಲಾಯಿತು ಇದರಿಂದ ಇನ್ನಷ್ಟು ಬಿಜೆಪಿ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ ವಿಜೇಂದ್ರ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕೇಂದ್ರದ ಹಿರಿಯ ನಾಯಕರು ಬರದೇ ಇರುವುದು ರಾಜ್ಯದ ಬಹುಪಾಲು ನಾಯಕರು ಗೈರು ಹಾಜರಾಗಿರುವುದು ಒಂದೊಂದು ನೆಪ ಹೇಳಿ ನುಣಚಿಕೊಂಡು ದೂರವಿರುವುದು ನೋಡಿದರೆ ಬಿಜೆಪಿ ಇಕ್ಕಟ್ಟಿಗೆ ಅಥವಾ ಸಂಕಟಕ್ಕೆ ಒಳಗಾಗುವ ಸಾಧ್ಯತೆಗಳಿವೆ ಯಡಿಯೂರಪ್ಪನವರನ್ನ ಆಗಲಿ ಅವರ ಮಗ ವಿಜೇಂದ್ರ ಅವರನ್ನಾಗಲಿ ಈ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುವ ತಂತ್ರದಿಂದ ಅಧ್ಯಕ್ಷ ಪದವಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ ಇದೇ ಯಡಿಯೂರಪ್ಪನವರು ಹೈಕಮಾಂಡ್ ಬಗ್ಗೆ ಅಗೌರವ ತೋರಿಸಿದ್ದು ಮತ್ತು ಅವರು ಇವರನ್ನು ನಡೆಸಿಕೊಂಡಿದ್ದು ಕರ್ನಾಟಕದ ಜನತೆ ಮರೆತಿಲ್ಲ ಆದರೂ ಕೂಡ ನನ್ನ ಮಗನಿಗೆ ದೊಡ್ಡ ಹುದ್ದೆಯನ್ನು ನೀಡಿದ್ದಾರೆ ಎಂಬ ಕಾರಣಕ್ಕಾಗಿ ಯಡಿಯೂರಪ್ಪನವರು ಹೈಕಮಾಂಡ್ ವಿರುದ್ಧ ಮಾತನಾಡದೆ ಇಂದು ಓಲೈಸಿಕೊಂಡು ಹೋದಂತೆ ಕಾಣುತ್ತಿದೆ ವಿಜಯೇಂದ್ರ ಅವರು ಯಡಿಯೂರಪ್ಪನವರ ಮಗ ಎಂಬ ಕಾರಣಕ್ಕಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹೊರಿಸಿದ್ದಾರೆ ಆದರೆ ಇದು ಲಿಂಗಾಯತ ದಲಿತ ಹಾಗೂ ಒಕ್ಕಲಿಗ ಸಮುದಾಯದ ನಾಯಕರಿಗೆ ಮುಜುಗರವನ್ನುಂಟು ಮಾಡಿದೆ ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದು ಹೇಳಲಾಗುತ್ತಿದೆ ಕರ್ನಾಟಕದ ಬ.ಜೆ.ಪಿ ಯನ್ನು ಮುಗಿಸಲು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಬದಲಿಗೆ ವರಿಷ್ಠರು ಮಾಡಿದ ಸ್ವಯಂಕೃತ ಅಪರಾಧದಿಂದ ಮತ್ತು ಅವರು ತೆಗೆದುಕೊಂಡ ತಪ್ಪು ನಿರ್ಣಯದಿಂದ ಅದು ತನ್ನಿಂದ ತಾನೇ ಮುಳುಗುವ ಹಡಗಾಗಿದೆ ಅದರಲ್ಲಿ ಕುಳಿತವರೆಲ್ಲರೂ ಅರಿವಿಲ್ಲದೆ ಮುಳುಗಿ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ ಕರ್ನಾಟಕದ ಬಿಜೆಪಿಗೆ ಹಿಂತಹ ಹೀನಾಯ ಸ್ಥಿತಿ ಬರಲು ಕಾರಣವೇನೆಂದು ದೆಹಲಿಯ ವರಿಷ್ಠರು ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಂದಾಗ ಕರ್ನಾಟಕದಲ್ಲಿಬಿಜೆಪಿ ಅಧಿಕಾರಕ್ಕೆ ತರುವುದಕ್ಕೆ ಏನು ಮಾಡಬೇಕೆಂದು ಅವರಿಗೆ ಹೊಳೆಯುತ್ತದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



