ಸುದ್ಧಿ

ಅಂಗನವಾಡಿಗಳನ್ನು ಉಳಿಸಿರಿ – ಅಂಗನವಾಡಿಗಳನ್ನು ಬಲಪಡಿಸಿರಿ… ಘೋಷಣೆಯೊಂದಿಗೆ ವಿಧಾನಸೌಧ ಚಲೋ ಕಾರ್ಯಕ್ರಮ.

ಅಂಗನವಾಡಿಗಳನ್ನು ಉಳಿಸಿರಿ – ಅಂಗನವಾಡಿಗಳನ್ನು ಬಲಪಡಿಸಿ ಘೋಷಣೆಯೊಂದಿಗೆ ವಿಧಾನಸೌಧ ಚಲೋ ಕಾರ್ಯಕ್ರಮ.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮೀತಿ ವತಿಯಿಂದ ಅಂಗನವಾಡಿಗಳನ್ನು ಉಳಿಸಿರಿ – ಅಂಗನವಾಡಿಗಳನ್ನು ಬಲಪಡಿಸಿ ಎಂಬ ಘೋಷಣೆಯೊಂದಿಗೆ ವಿಧಾನಸೌಧ ಚಲೋ ಕಾರ್ಯಕ್ರಮ ದಿನಾಂಕ 19/09/2024 ರಂದು ಫ್ರೀಡಂ ಪಾಕ್೯ ಬೆಂಗಳೂರ ಮಹಾನಗರದಲ್ಲಿ ಹಮ್ಮಿಕೊಂಡಿದ್ದ ಸಂಘದ ಪ್ರತಿಭಟನೆ ಕಾರ್ಯಕ್ರ‌ದ‌ ವಿವರಣೆ.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮೀತಿಯು ತಮ್ಮ ಬೇಡಿಕೆಗಳಾದ

೧) ಎಲ್ಲಾ ನಿವೃತ್ತ ಕಾರ್ಯಕರ್ತೆಯರಿಗೆ ಗ್ರ್ಯಾಚುಟಿ ನೀಡಬೇಕು.

೨) ಗೌರವ ಧನ ( ಕನಿಷ್ಠ ವೇತನ ) ಹೆಚ್ಚಿಸಬೇಕು.

೩) ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕಾಂಶದ ಆಹಾರ ಪೂರೈಸಬೇಕು.

೪) ಅಂಗನವಾಡಿ ಕೇಂದ್ರಗಳಲ್ಲಿಯೇ LKG – UKG ತರಗತಿಗಳನ್ನು ಪ್ರಾರಂಭಿಸಬೇಕು ಎಂಬ ತಮ್ಮ ಹಲವಾರು ಬೇಡಿಕೆ ಈಡೇರಿಕೆಗಾಗಿ ಸರಕಾರ ಮತ್ತು ಸಂಬಂಧಿಸಿದ ಸಚಿವರು, ಅಧಿಕಾರಿಗಳ ಗಮನಕ್ಕೆ ತರಲು ಬೆಂಗಳೂರು ನಗರದ ಫ್ರೀಡಮ್‌ ಪಾರ್ಕಿನಿಂದ ವಿಧಾನಸೌಧ ಚಲೋ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರ ವಿಷಯದ ಮಾಹಿತಿ ಕಾರ್ಯಕ್ರಮ ಸುಲಲಿತವಾಗಿ ಕ್ರಮಬದ್ಧವಾಗಿ, ಶಾಂತರೀತಿಯಿಂದ ನಡೆಯಿತು. ಪ್ರಜಾಶ್ರೀ ವೆಬ್ ಪತ್ರಿಕೆ ಬೆಂಗಳೂರು. Editor Bangalore.
9731113141

ವರದಿಗಾರರು ಡಿ.ರಮೇಶ.

Oplus_131072

Related Articles

Leave a Reply

Your email address will not be published. Required fields are marked *

Back to top button