ಕಬಡ್ಡಿ ಪಂದ್ಯ ರಾಜ್ಯ ಮಟ್ಟಕ್ಕೆ ಆಯ್ಕೆ…..ಹಗರಿಬೊಮ್ಮನಹಳ್ಳಿ
ಕಬಡ್ಡಿ ಪಂದ್ಯ ರಾಜ್ಯ ಮಟ್ಟಕ್ಕೆ ಆಯ್ಕೆ
ಹಗರಿಬೊಮ್ಮನಹಳ್ಳಿ ವಿಜಯನಗರ ಜಿಲ್ಲೆ. ದಿ: 06.10.2024 ಹಗರಿಬೊಮ್ಮನಹಳ್ಳಿ ಪಟ್ಟಣದ ಹರಿಣಿ ಪದವಿ ಪೂರ್ವ ಕಾಲೇಜ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. ಕೂಡ್ಲಿಗಿಯ ಬಾಲಕಿಯರ ಸಂಯುಕ್ತ ಕಾಲೇಜ್ ಹಾಗೂ ಹರಿಣಿ ಪದವಿ ಪೂರ್ವ ಕಾಲೇಜ್ ಹ.ಬೊ.ಹಳ್ಳಿಯ ಬಾಲಕಿಯರ ಮಧ್ಯೆ ಮೈಲಾರ ಮಹಾದೇವಪ್ಪ ತಾಲೂಕು ಕ್ರೀಡಾಂಗಣದಲ್ಲಿ ರೋಚಕ ಹಣಾಹಣಿಯಲ್ಲಿ 27-15 ಅಂಕ ಪಡೆದು ರಾಜ್ಯ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆಯಿತು.
ಈ ಮೊದಲು ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಗಂಗಾವತಿ ಭೀಮಪ್ಪನವರ ಸರಕಾರಿ ಪದವಿ ಪೂರ್ವ ಕಾಲೇಜ್ ವಿರುದ್ದ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿತ್ತು. ಹರಿಣಿ ಪದವಿ ಪೂರ್ವ ಕಾಲೇಜಿನ ಬಾಲಕಿಯರಿಗೆ ಕನ್ನಡ ಉಪಾನ್ಯಸಕರಾದ ಗುರುಪ್ರಸಾದ್ ಹಿರೇಮಠ್ ಹಾಗೂ ಶಿವು ಸೊಬಟಿ ಇವರ ಮಾರ್ಗದರ್ಶನದಲ್ಲಿ ಮತ್ತು ಪರಿಶ್ರಮದ ಫಲವಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಆಟಗಾರರ ಹೆಸರು ಈ ರೀತಿ ಇದೆ 1. ಸುಪ್ರಿತ (ಕ್ಯಾಪ್ಟನ್) 2. ಎಂ. ಕರಿಬಸಮ್ಮ (ವೈಸ್ ಕ್ಯಾಪ್ಟನ್) 3. ಕೆ ಸಹನ 4. ಬಿ ಚಿನ್ಮಯಿ 5. ಕೆ ಕರಿಬಸಮ್ಮ 6. ಜಿ. ಲಕ್ಷೀ 7. ವಾಣಿ 8. ಪಿ ಲಕ್ಷೀ 9. ದೀಪಾ 10. ಕೆ ಡಿ ಲಕ್ಷೀ
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರಿಗೆ ಶ್ರೀ ಮೂಗ ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.
ಮಹೇಶ್ ಮಾದೂರು



