ಸುದ್ಧಿ

ಮಾರ್ಚ್ 9 ರಂದು ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಲ್ಲಾ ನಾಗರೀಕರೂ ಭಾಗವಹಿಸಲು ಮುಕ್ತವಾಗಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್, ಹಾಗು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಬೆಂಗಳೂರು ಘಟಕದ ಸಹಯೋಗದೊಂದಿಗೆ ಮಾರ್ಚ್ 9 ರಂದು ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’ (ನಮ್ಮ ಪೊಲೀಸ್, ನಮ್ಮ ಹೆಮ್ಮೆ) ಬ್ಯಾನರ್ ಅಡಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಓಟ( running race ) ಎರಡನೇ ಆವೃತ್ತಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಎಲ್ಲಾ ವಯೋಮಾನದ ಸುಮಾರು 1೦,೦೦೦ ಕ್ಕೂ ಹೆಚ್ಚು ಶ್ರದ್ದಾಳುಗಳು ಭಾಗವಹಿಸಬಹುದು. ಎರಡು ವಿಭಾಗಗಳಲ್ಲಿ ಭಾಗವಹಿಸಬಹುದು (1) – ವೃತ್ತಿಪರ ಓಟಗಾರರಿಗೆ 100 ಓಟ ಮತ್ತು 500 A ಓಟ, ಎಲ್ಲಾ ನಾಗರೀಕರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ. ಇಷ್ಟೇ ಅಲ್ಲದೆ ಈ ಕಾರ್ಯಕ್ರಮವು (ಓಟವು) ಕರ್ನಾಟಕದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ, ಎರಡೂ ರೇಸ್ಗಳು ವಿಧಾನಸೌದಿಂದ ಪ್ರಾರಂಭವಾಗುತ್ತವೆ ರಮಣೀಯ ಕಬ್ಬನ್ ಪಾರ್ಕ್ ಮೂಲಕ ಹಾದುಹೋಗುತ್ತವೆ. ವಿಜೇತರು ನಗದು ಬಹುಮಾನಗಳನ್ನು ಪಡೆಯುತ್ತಾರೆ (ಸ್ವೀಕರಿಸುತ್ತಾರೆ.)
ಶುಕ್ರವಾರ ಸಂಜೆ ನಡೆದ ಉನ್ನತಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಿದೆ. ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಡಿಜಿ ಮತ್ತು ಐಜಿಪಿ) ಅಲೋಕ್ ಮೋಹನ್ ಅವರು ಹಸಿರು ಬೆಂಗಳೂರು, ಮಾದಕ ದ್ರವ್ಯ ಮುಕ್ತ ಕರ್ನಾಟಕ ಮತ್ತು ಸೈಬರ್ ಕ್ರೈಮ್ ಜಾಗೃತಿಯನ್ನು ಉತ್ತೇಜಿಸುವಲ್ಲಿ ಈವೆಂಟ್ನ ಪಾತ್ರವನ್ನು ಎತ್ತಿ ತೋರಿಸುವರು ಮತ್ತು ಹಿರಿಯ ನಾಗರಿಕರನ್ನು ಸಕ್ರಿಯವಾಗಿರಲು ಪ್ರೋತ್ಸಾಹಿಸುವರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸರ್ಕಲ್ನ ಎಸ್ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಜೂಹಿ ಸ್ಮಿತಾ ಸಿನ್ಹಾ, ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಓಟಕ್ಕೆ ನೋಂದಣಿಗೆ ಕೊನೆಯ ದಿನಾಂಕ ಮಾರ್ಚ್ ೪.

Related Articles

Leave a Reply

Your email address will not be published. Required fields are marked *

Back to top button