ದಯವಿಟ್ಟು ಕ್ಷಮಿಸಿ ಖರ್ಗೆ ಜೀ. ಸಾಮಾಜಿಕ ನ್ಯಾಯಕ್ಕಾಗಿ ಹೊರಡುವ ಪಕ್ಷದಲ್ಲಿಯೇ ನ್ಯಾಯವಿಲ್ಲ ?????.

ಖರ್ಗೆಯವರು ಕನ್ನಡ ನಾಡಿನ ಪಕ್ಷಾತೀತ ನಾಯಕರು. ಅವರು ನೋವು ಅನುಭವಿಸುವುದು, ನಾಡಿಗಾಗಲೀ, ಕಾಂಗ್ರೆಸ್ ಪಕ್ಷಕ್ಷೇ ಆಗಲಿ ಶ್ರೇಯಸ್ಕರವಲ್ಲ. ಕಾರಣ ಖರ್ಗೆಯವರು ರಾಜಕೀಯ ಹಾಗೂ ಈ ದೇಶದ ಸಾಮಾಜಿಕ ನ್ಯಾಯ ವ್ಯವಸ್ಥೆಯ ದುರಂತ ನಾಯಕರಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯ ವಿಶೇಷವಾಗಿ ಭವಿಷ್ಯತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಉಳಿವಿಗೆ ಶ್ರೇಯಸ್ಕರ.
ಕರ್ನಾಟಕ ರಾಜ್ಯದಲ್ಲಿಯೇ ಅತೀ ಹಿಂದುಳಿದ ಪ್ರದೇಶ ಕಲ್ಯಾಣ ಕರ್ನಾಟಕವಾಗಿದೆ. ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನವಾಗಿ ಆರ್ಟಿಕಲ್ 370 ಜಾರಿ ಮಾಡಿರುವುದು ಸಹ ಕೇಂದ್ರ ಸರ್ಕಾರವೇ. ಅದಕ್ಕೆ ಕಾರಣೀಭೂತರೂ ಕೂಡ ಖರ್ಗೆಯವರೇ, ಕಾರಣ ಅತಿ ಹಿಂದುಳಿದ ಪ್ರದೇಶದ ಅತಿ ಹಿಂದುಳಿದ ಜಾತಿಯ ನಾಯಕನಾಗಿ ಹಳ್ಳಿಯಿಂದ ದಿಲ್ಲಿಯವರೆಗೂ ರಾಜಕೀಯದಲ್ಲಿ ಬೆಳೆದು ಪಕ್ಷ ನಿಷ್ಠಾವಂತರಾಗಿ ಕಾರ್ಯನಿರ್ವಹಿಸಿದ್ದು ಚಿಕ್ಕ ಮಕ್ಕಳಿಗೂ ಕೂಡ ತಿಳಿದಿರುವ ವಿಚಾರ.
ಖರ್ಗೆಯವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನ ವಂಚಿತರಾಗಿರುವುದು ದೇಶಕ್ಕೆ ಗೊತ್ತಿರುವ ವಿಚಾರ. ಕಾರಣ ಸಮಾಜದ ಕಟ್ಟಕಡೆ ವ್ಯಕ್ತಿಯೂ ಕೂಡ ಖರ್ಗೆಯವರಿಗೆ ರಾಜಕೀಯದಲ್ಲಿ ಅನ್ಯಾಯವಾಗಲು ಬಿಡಬಾರದು. ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಈ ವಿಚಾರ ಮನದಟ್ಟು ಮಾಡಬೇಕಾಗಿದೆ. ಈ ವಿಷಯವಾಗಿ ಪ್ರತಿಯೊಬ್ಬರೂ ಹೋರಾಡಬೇಕು.
ಹೋದಲ್ಲಿ ಬಂದಲ್ಲಿ ಸಂವಿಧಾನ ಪುಸ್ತಕ ಕೈಯಲ್ಲಿಡಿದುಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಭಾಷಣ ಬಿಗಿಯುವ ರಾಹುಲ ಗಾಂಧೀಯವರು ತಮ್ಮ ಪಕ್ಷದಲ್ಲಿಯೇ ಸಾಮಾಜಿಕ ನ್ಯಾಯ ಇಲ್ಲದಿರುವುದನ್ನು ಯಾಕೆ ಅರಿಯುತ್ತಿಲ್ಲ? ತಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಧೃಢವಾಗಿರುವುದನ್ನು ಸಾರ್ವಜನಿಕವಾಗಿ ಮತ್ತು ದೇಶದ ಜನರ ಎದುರು ಖಚಿತ ಪಡಿಸುವುದು ಇಂದಿನ ದಿನಗಳಲ್ಲಿ ಅತೀ ಅವಶ್ಯಕತೆ ಇದೇ.




