” ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು” ಈ ಸಂಘದ ಕರ್ಮಕಾಂಡ.

” ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದಿರುವ ಕರ್ಮಕಾಂಡ ಬಗೆದoತೆಲ್ಲ ಹಗರಣಗಳ ಆಸoಹ್ಯ ಮೂಳೇಗಳೇ ಸಿಕ್ಕುತ್ತಿವೆ.”
ಪತ್ರಕರ್ತರ ಸಂಘದಲ್ಲಿ ಕಾನೂನಿಗಿ ಬೆಲೆಯೇ ಇಲ್ಲ ?.
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೋ.)ದಲ್ಲಿ ಪತ್ರಕರ್ತರಲ್ಲದ ಅನರ್ಹರಿಗೆ ಸದಸ್ಯತ್ವ ನೀಡಲಾಗಿದೆ, ಕಾರ್ಮಿಕ ಇಲಾಖೆ ಕಾಯ್ದೆಯಡಿ ನೋಂದಾಯಿಸಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾನೂನುಬಾಹಿರವಾಗಿ ಪತ್ರಿಕಾ ಮಾಲೀಕರಿಗೂ ಸದಸ್ಯತ್ವ ಕೊಡಲಾಗಿದೆ ಎಂಬ ಗಂಭೀರ ಆರೋಪಗಳು ಆಗಿಂದಾಗ್ಗೆ ಕೇಳಿಬರುತ್ತಿದ್ದವು.
ತಮ್ಮ ಇಚ್ಚೆಯಂತೆ/ಅನುಕೂಲಕ್ಕೆ ತಕ್ಕಂತೆ ಚುನಾವಣೆ ನಡೆಸುವ ಉದ್ದೇಶವೇನು?
ಅಷ್ಟಕ್ಕೂ ಪತ್ರಿಕಾ ಮಾಲೀಕರು ಸಂಘದಲ್ಲಿ ಸದಸ್ಯತ್ವ ಪಡೆಯುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿ, ಈಗಾಗಲೇ ನೂರಾರು ಮಾಲೀಕರುಗಳಿಗೆ ನಿಯಮಬಾಹಿರವಾಗಿ ಸಂಘದ ಸದಸ್ಯತ್ವ ನೀಡಿರುವುದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವಾಗ ಮತ್ತೆ ಪತ್ರಿಕೆ ಮಾಲೀಕರನ್ನೇ ಚುನಾವಣಾಧಿಕಾರಿಯಾಗಿ ನೇಮಿಸಿರುವುದು ಎಷ್ಟು ಸರಿ.
ಈ ಎಲ್ಲಾ ಹಗರಣಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಸಂಘದ ಸದಸ್ಯರಿಗಾಗಲಿ, ಇತರೆ ಪತ್ರಕರ್ತರಿಗಾಗಲಿ ಇದೆಯೇ? ಇಂತಹ ಸಾಲು ಸಾಲು ತಪ್ಪುಗಳಿಂದ/ಕಳಂಕಗಳಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊರಬರುವುದು ಯಾವಾಗ? ಜಾಗೃತರಾಗಿ ಪತ್ರಕರ್ತರೇ/ಸಂಘದ ಸದಸ್ಯರೇ.








