ಸಂಪಾದಕೀಯ

ಕನಕಗಿರಿಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಮನವಿ.

ಕನಕಗಿರಿಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು

ಜನಗಣತಿ ಗೌರವಧನಕ್ಕೆ ಮನವಿ

ಕನಕಗಿರಿ: ಏಪ್ರಿಲ್ ತಿಂಗಳಲ್ಲಿ ಜನಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಿಕ್ಷಕರಿಗೆ ಗೌರವ ಧನ ಮಂಜೂರು ಮಾಡುವಂತೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ‌ ಪದಾಧಿಕಾರಿಗಳು ತಹಶೀಲ್ದಾರ್ ಚಂದ್ರಶೇಖರ ಗಾಳಿ ಅವರಿಗೆ ಮನವಿ ಸಲ್ಲಿಸಿದರು.
ಚಂದ್ರಶೇಖರ ಗಾಳಿ ಮಾತನಾಡಿ ನೌಕರರ ಸಂಘದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ ಮಾತನಾಡಿ
2006, ಎಪ್ರೀಲ್ ನಂತರ ನೇಮಕಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆ ಇಲ್ಲ, ನೂತನ ಪಿಂಚಣಿ ಯೋಜನೆ ನೌಕರರ ಮರಣ ಶಾಸನವಾಗಿದೆ, ನೂತನ‌ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದು ಜು.11ರಂದು ಸಂಘದ ರಾಜ್ಯ ಘಟಕದಿಂದ ಮುಖ್ಯಮಂತ್ರಿ ಡಿ.‌ಕೆ.‌ಶಿವಕುಮಾರ ಅವರಿಗೆ ಅಭಿನಂದನೆ ಹಾಗೂ ಎನ್‌ಪಿಎಸ್ ಕಿತ್ತೊಗೆಯುವಂತೆ ಮನವಿ ಸಲ್ಲಿಸಲಾಗುತ್ತಿದೆ , ತಾಲ್ಲೂಕಿನ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಭಾಗವಹಿಸುವಂತೆ ಕೋರಿದರು.
ಸಂಘದ ಕೋಶಾಧ್ಯಕ್ಷ ಗುರುಲಿಂಗಯ್ಯ ಪಂಜಿನ ಪೂಜಾರಿ, ಪ್ರಧಾನ ಕಾರ್ಯದರ್ಶಿ ಉಮೇಶ ಕಂದಕೂರು, ನಿರ್ದೇಶಕ ಶೇಖರಯ್ಯ ಕಲ್ಮಠ ಇತರರು ಇದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button