ಜಿಲ್ಲೆ

ಯಶ್ ಕಟೌಟ್ ವೇಳೆ ವಿದ್ಯುತ್ ಸ್ಪರ್ಶ ಘಟನೆ: ಮೃತ ಅಭಿಮಾನಿಗಳ ಮನೆಗೆ ಇಂದು ಯಶ್ ಭೇಟಿ

ಬೆಂಗಳೂರು : ಹುಟ್ಟು ಹಬ್ಬದ ಸಲುವಾಗಿ ಕಟೌಟ್ ನಿಲ್ಲಿಸುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ನಿಧನರಾಗಿರುವ ಮೂವರ ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ಸಂಜೆಯೇ ನಟ ಯಶ್ ಗದಗ ತೆರಳಲಿದ್ದಾರೆ ಎಂದು ಮೂಲಗಳು ಮಾದ್ಯಮಕ್ಕೆ ತಿಳಿಸಿವರ.

ಅವರ ಆಪ್ತರೇ ತಿಳಿಸಿರುವಂತೆ, ಸದ್ಯ ವಿದೇಶದಲ್ಲಿರುವ ಯಶ್ ಅವರು ವಿದೇಶದಿಂದ ಬೆಂಗಳೂರಿಗೆ ಬರುತ್ತಿದ್ದಂತೆಯೇ ಹೆಲಿಕಾಪ್ಟರ್ ಮೂಲಕ ಯಶ್ ಗದಗಗೆ ದೌಡಾಯಿಸಲಿದ್ದಾರೆ. ಅಲ್ಲಿಂದ ಮೃತ ಅಭಿಮಾನಿಗಳ ಮನೆಗೆ ಯಶ್ ತೆರಳಲಿದ್ದಾರೆ. 3 ಗಂಟೆಗೆ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದು ಅಲ್ಲಿಂದ 4 ಗಂಟೆಗೆ ರಸ್ತೆ ಮಾರ್ಗವಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ತೆರಳಿ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಡಲಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ 3 ಜನ ಸಾವನ್ನಪ್ಪಿದ ಘಟನೆ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button