ಸಂಪಾದಕೀಯ

ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ಮಹಾನಗರದ ಹೊರ ವಲಯದಲ್ಲಿ ಯುವ ವಕೀಲರನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ.

ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ಮಹಾನಗರದ ಹೊರ ವಲಯದಲ್ಲಿ ಯುವ ವಕೀಲರನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ.

ಈರಣ್ಣಗೌಡ ಪಾಟೀಲ ಉದನೂರು ಯುವ ವಕೀಲರು ಕಲಬುರ್ಗಿ ಮಹಾನಗರದ ಹೊರವಲಯದ ತಮ್ಮ ಉದನೂರು ತೋಟದ ಮನೆಯಿಂದ ಬೆಳಗ್ಗೆ ೧೦.೩೦ ಮುಂಜಾನೆ. ಜಿಲ್ಲಾ ನ್ಯಾಯಾಲಯಕ್ಕೆ ಕರ್ತವ್ಯಕ್ಕಾಗಿ ಬರುತ್ತಿದ್ದಾಗ. ಉದನೂರು ಮುಖ್ಯ ರಸ್ತೆಯ ಐರನ್ ಅಂಗಡಿಯ ಎದುರು ಈರಣ್ಣಗೌಡರು ಬರುತ್ತಿದ್ದಾಗ ನಾಲ್ಕು ಜನ ಹಂತಕರು ಈರಣ್ಣಗೌಡರ ದ್ವೀಚಕ್ರ ವಾಹನ ತಡೆಗಟ್ಡಿ ಮಾರಕಾಸ್ತರ ಬೀಸಿದ್ದಾರೆ. ವಕೀಲರು ತಮ್ಮ ವಾಹನ ಬಿಟ್ಟು ಸಮೀಪದ ಅಪಾರ್ಟಮೆಂಟನಲ್ಲಿ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.

ಬೆನ್ನಟ್ಟಿದ ೪ ಜನ ಹಂತಕರು ಅರ್ಪಾಟಮೆಂಟನಲ್ಲಿ ಬೆನ್ನತ್ತಿ ಕುತ್ತಿಗೆಗೆ ಮಾರಕಾಸ್ತ್ರ ಬೀಸಿದ್ದಾರೆ. ವಕೀಲರು ನೆಲಕ್ಕೆ ಬಿದ್ದಾಗ ಅವರ ಮುಖದ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿದ್ದಾರೆ. ವಕೀಲರ ಮುಖ ಗುರುತು ಸಿಕ್ಕದಂತದಾಗಿದೆ. ೪ ಜನ ಹಂತಕರು ಮಾರಕಾಸ್ತ್ರದಿಂದ ಮನಬಂದಂತೆ ವಕೀಲರ ದೇಹ ಚಿದ್ರ ಚಿದ್ರ ಮಾಡಿದ್ದಾರೆ.

ದಿನಾಂಕ ೭/೧೨/೨೦೨೩ ರಂದು‌ ಮಧ್ಯಾಹ್ನ ಕಲಬುರ್ಗಿ ನ್ಯಾಯಾಲಯದ ಬಾರ್ ಅಸೋಸಿಯೇ಼ಷನ ಪದಾಧಿಕಾರಿಗಳು, ಮೃತ ವಕೀಲರ ಮಿತ್ರರು, ಮಹಿಳಾ ವಕೀಲರು ಸಭೆ ಸೇರಿ ಮೃತ ವಕೀಲರ ಆತ್ಮಕ್ಕೆ ಶಾಂತಿ ಕೋರಿದರು ವಕೀಲರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ದುಃಖ ತಪ್ತ ವಕೀಲರ ಕುಟುಂಬಕ್ಕೆ ನೋವು ತಡೆಯುವ ಧೈರ್ಯ ಕೊಡಲಿ ಎಂದು ಪ್ರರ್ಥಿಸಿದರು. ಪ್ರಜಾಶ್ರೀ ವೆಬ್ ಪತ್ರಿಕೆ ಬೆಂಗಳೂರು 9731113141

Related Articles

Leave a Reply

Your email address will not be published. Required fields are marked *

Back to top button