ಕನಕಗಿರಿಯಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ.

ಕನಕಗಿರಿಯಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
ಕನಕಗಿರಿ, ಜು. 12: ಪಟ್ಟಣದ ಕೆಪಿಎಸ್ ಶಾಲೆಯ ಮೈದಾನದಲ್ಲಿ 2026-27ನೇ ಸಾಲಿನ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದ ಎರಡನೇ ಬ್ಯಾಚ್‌ಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಮಲ್ಲಯ್ಯ ಗೋಮರ್ಸಿ ವಹಿಸಿದ್ದರು. ನಿಲಯ ಪಾಲಕರಾದ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ತರಬೇತಿಯ ಮುಖ್ಯ ತರಬೇತುದಾರರಾದ ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೇನಾ ಸೇವೆಗೆ ಸೇರ್ಪಡೆಯಾಗಲು ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ನಿರಂತರ ಅಭ್ಯಾಸ ಅತ್ಯಂತ ಮುಖ್ಯವಾಗಿದ್ದು, ತರಬೇತಿ ಕೇಂದ್ರವು ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಫಯುಮ್ ಪಟೇಲ್, ರಕ್ಷಕ ದಳದ ಶರೀಫ್, ತರಬೇತುದಾರರಾದ ರವಿ ದೇಸಾಯಿ ಹಾಗೂ ರವಿ ತಾಳಿ, ತರಗತಿ ಶಿಕ್ಷಕರಾದ ಕುಮಾರ್ ದಸರಾ ಮತ್ತು ಹುಲಿಹೈದರ್, ನಿಲಯ ಮೇಲ್ವಿಚಾರಕರಾದ ಬಸಪ್ಪ ಬಡಿಗೇರ್, ಶಿಕ್ಷಕರಾದ ಕುಮಾರ ಶಿವಲೀಲಾ ಹಾಗೂ ಕುಮಾರ್ ವೆಂಕಟೇಶ್ ಬಿಳಗುಡ್ಡೆ ಉಪಸ್ಥಿತರಿದ್ದರು.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಸ್ತುತ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ಮತ್ತು ಯಶಸ್ವಿಯಾಗಿ ನಡೆಯಿತು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.








