ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ….ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಉತ್ತರ ಕರ್ನಾಟಕದವರಿಗೆ ಅವಕಾಶವಿಲ್ಲದಂತಾಗಿದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷನಾಗುತ್ತೇನೆ ಇಲ್ಲವೇ ವಿರೋಧ ಪಕ್ಷದ ನಾಯಕನಾಗುತ್ತೇನೆ ಎಂದು ಕನಸು ಕಂಡಿದ್ದರು ಆ ಕನಸು ಇಂದು ನನಸಾಗಿಲ್ಲ ಕರ್ನಾಟಕದ ದಕ್ಷಿಣದವರಿಗೆ ಉತ್ತರ ಕರ್ನಾಟಕ ಲಿಂಗಾಯಿತರು ಹಣಿಯಬಹುದು ಮತ್ತು ಪ್ರಾದೇಶಿಕ ಅಸಮಾನತೆ ದೂರ ಮಾಡಿ ದಕ್ಷಿಣ ಕರ್ನಾಟಕದ ಹಾಗೆ ಎಲ್ಲ ಸೌಲಭ್ಯಗಳನ್ನು ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕಕ್ಕೆ ದೊರೆಯುವಂತೆ ಮಾಡಬಹುದು ಎಂಬ ಕನಸು ಈಗ ಬಗ್ನವಾಗಿದೆ ಬಸನಗೌಡ ಪಾಟೀಲರು ಉತ್ತರ ಕರ್ನಾಟಕದ ಬಿಜೆಪಿಯ ಪ್ರಭಾವಿ ನಾಯಕರು ಮೇಲಾಗಿ ಲಿಂಗಾಯಿತ ಪ್ರಬಲ ಕೋಮಿನ ಸಮುದಾಯಕ್ಕೆ ಸೇರಿದವರು ಬೆಳಗಾವಿಯಿಂದ ಬೀದರವರೆಗೆ 13 ಜಿಲ್ಲೆಗಳ ಗಂಡು ಲಿಂಗಾಯತರು ಅವರ ಬೆನ್ನ ಹಿಂದೆ ಇದ್ದಾರೆ ಎಂಬ ಭಾವನೆ ಇತ್ತು. ಆದರೆ ಈಗ ಲಿಂಗಾಯಿತ ಸಮುದಾಯವೇನೋ ಅವರ ಬೆನ್ನ ಹಿಂದೆ ಇದೆ ಆದರೆ ಬಿಜೆಪಿಯ ವರಿಷ್ಠರು ಮತ್ತು ದಕ್ಷಿಣ ಕರ್ನಾಟಕದ ಬಿಜೆಪಿಯ ಹಿರಿಯ ನಾಯಕರು ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಾಯಗೊಂಡ ಹುಲಿಯಂತೆ ವ್ಯಗ್ರರಾಗಿ ಮನಸ್ಸಿಗೆ ಬಂದಂತೆ ತಮಗೆ ತಿಳಿದಂತೆ ತೋಚಿದಂತೆ ಮಾತನಾಡುತ್ತಿದ್ದಾರೆ ಯಡಿಯೂರಪ್ಪನವರನ್ನು ಮತ್ತು ಅವರ ಮಗ ವಿಜೇಂದ್ರ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದಾರೆ ಚಮಚ ಚೇಲಾಗಳನ್ನು ಮಣೆ ಹಾಕ ಬೇಡಿ ಅವರಿಗೆ ಯಡಿಯೂರಪ್ಪನವರಿಗೆ ಮತ್ತು ಅವರ ಮಗ ವಿಜೇಂದ್ರ ಅವರಿಗೆ ಹೆಚ್ಚಿನ ಅವಕಾಶ ಕೊಡುವುದರ ಮೂಲಕ ಬಿಜೆಪಿ ಅವನತಿಗೆ ವರಿಷ್ಠರೇ ಕಾರಣರಾಗುತ್ತಾರೆ ಎಂಬ ಧ್ವನಿ ಬರುವಂತೆ ಮಾತನಾಡುತ್ತಿದ್ದಾರೆ ಬಳಸಬಾರದ ಶಬ್ದಗಳನ್ನು ಬಳಸುವುದರ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ತಮ್ಮ ಘನತೆ ಗಾಂಭೀರಕ್ಕೆ ಹಾನಿ ಉಂಟು ಮಾಡುವಂತಹ ಶಬ್ದಗಳನ್ನು ಬಳಸುವುದರಿಂದ ಯಡಿಯೂರಪ್ಪ ಕುಟುಂಬವನ್ನು ಟೀಕಿಸುತ್ತಿದ್ದಾರೆ ಇತ್ತೀಚಿಗೆ ರಮೇಶ್ ಜಾರಕಿಹೊಳಿಯವರನ್ನು ಜೊತೆಗೆ ಕರೆದುಕೊಂಡು ವಿರೋಧ ಪಕ್ಷದ ನಾಯಕನ ಆಯ್ಕೆ ಸಂದರ್ಭದಲ್ಲಿ ಪ್ರತಿಭಟಿಸಿ ರಮೇಶ್ ಜಾರಕಿಹೊಳಿಯವರನ್ನು ಕರೆದುಕೊಂಡು ಉತ್ತರ ಕರ್ನಾಟಕದ ಧೀ ಶಕ್ತಿಯನ್ನು ಪ್ರದರ್ಶಿಸೋಣ ಎಂದು ಹೇಳಿ ಹೋಗಿದ್ದಾರೆ ಬಹುಶಃ ಈಗ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳು ಬಿಜೆಪಿಯ ಮೂಲಕ ವಿಭಾಗವಾದಂತಾಗಿದೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವನಿ ತೀವ್ರಗೊಂಡರೂಗೊಳ್ಳಬಹುದು ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಬಸನಗೌಡ ಪಾಟೀಲರು ಪ್ರತ್ಯೇಕ ಉತ್ತರ ಕರ್ನಾಟಕ ವಾದರೆ ರಮೇಶ ಜಾರಕಿಹೊಳಿ ಮತ್ತು ಏ ಎಸ್ ನಡಹಳ್ಳಿಪಾಟೀಲ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿಕೊಂಡು ತಾವು ಮುಖ್ಯಮಂತ್ರಿಗಳಾಗುವ ಸಾಧ್ಯತೆಯೂ ಇದೆ 13 ಜಿಲ್ಲೆಗಳ ಪ್ರತ್ಯೇಕ ಉತ್ತರ ಕರ್ನಾಟಕ ಈಗ ತೀರಾ ಅವಶ್ಯ ಮತ್ತು ಅನಿವಾರ್ಯ ಹಾಗೂ ತುರ್ತು ಅಗತ್ಯವಾಗಿದೆ ಎಂಬುದಕ್ಕಿಂತ ಹೆಚ್ಚಾಗಿ ಪ್ರತ್ಯೇಕಗೊಳಿಸುವುದರ ಮೂಲಕ ಅಭಿವೃದ್ಧಿಪರ ಕೆಲಸ ಕಾರ್ಯಗಳಿಗೆ ನಾಂದಿ ಹಾಡಬೇಕೆಂಬುದು ಈಗಿನ ಧ್ಯೇಯವಾಗಿದೆ 50 ವರ್ಷಗಳ ಹಿಂದೆ ಕರ್ನಾಟಕ ಏಕೀಕರಣ ಗೊಳಿಸುವುದಕ್ಕಾಗಿ ಹೋರಾಟ ಮಾಡಿದರೆ ಇಂದು ಅಧಿಕಾರಿಕಾಗಿಯೋ ಅಥವಾ ಅಭಿವೃದ್ಧಿಗಾಗಿಯೂ ಪ್ರತ್ಯೇಕ ಉತ್ತರ ಕರ್ನಾಟಕವನ್ನು ರಚಿಸುವ ಹುನಾರದಲ್ಲಿ ನಮ್ಮ ರಾಜಕಾರಣಿಗಳಿದ್ದಾರೆ ಒಂದು ವೇಳೆ ಪ್ರತ್ಯೇಕ ಉತ್ತರ ಕರ್ನಾಟಕವಾದರೆ ಮೊದಲ ಮುಖ್ಯಮಂತ್ರಿ ಆಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿಕಾರ ಸ್ವೀಕರಿಸುವುದಂತೂ ಖಂಡಿತ ಎಂಬ ಮಾತು ಕೇಳಿ ಬರುತ್ತಿದೆ ಬಸನಗೌಡರು ಸ್ವಲ್ಪ ಗಂಭೀರವಾಗಬೇಕು ಅವರ ಮಾತಿನಲ್ಲಿ ಹಿಡಿತವಿರಬೇಕು ಬಾಯಿಗೆ ಬಂದಂತೆ ಮನಸ್ಸಿಗೆ ಬಂದಂತೆ ತೋಚಿದಂತೆ ಹೇಳಿಕೆಗಳನ್ನು ನೀಡಬಾರದು ಎಂದು ಕೆಲವರು ಸಲಹೆ ಕೊಡುತ್ತಿದ್ದಾರೆ ಆದರೆ ಆ ಸಲಹೆಯನ್ನ ಅವರು ಸ್ವೀಕರಿಸಬಹುದು ಬದಲಿಗೆ ಧಿಕ್ಕರಿಸಬಹುದು ನಾನು ಅಟಲ್ ಬಿಹಾರಿ ವಾಜಪೇಯಿ ಕ್ಯಾಬಿನೆಟ್ ನಲ್ಲಿ ಸಂಪುಟ ಸಚಿವನಾಗಿದ್ದೆ ಕೇಂದ್ರ ಸರ್ಕಾರದ ಸಚಿವನಾಗಿ ಎಲ್ ಕೆ ಅಡ್ವಾಣಿ ಮುರಳಿ ಮನೋಹರ್ ಜೋಶಿ ಅಂತಹ ನಾಯಕರ ಜೊತೆಗೆ ಒಡನಾಡಿದವನು ನಾನು ಈ ಯಡಿಯೂರಪ್ಪ ಯಾವ ಮೂಲೆ ಅವರ ಮಗ ವಿಜಯೇಂದ್ರ ನನ್ನ ಮುಂದೆ ಬಚ್ಚಾ ಅವನ ಎದುರಿಗೆ ನಾನು ಕುಳಿತುಕೊಳ್ಳಬೇಕಾ ಎಂಬ ಜಂಬದ ಮಾತುಗಳು ಆಡುತ್ತಿರುವುದು ನೋಡಿದರೆ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳಬೇಕಾಗಿದೆ ಒಟ್ಟಾರೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವಾಗಲಿ, ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ ವಾಗಲಿ ಸಿಗದೇ ಇರುವುದರಿಂದ ಹತಾಶರಾಗಿ ಅತ್ಯಂತ ನಿರಾಶ ಭಾವನೆಯಿಂದ ಈಗ ಎರಡು ಸ್ಥಾನಗಳು ದಕ್ಷಿಣದವರಿಗೆ ಕೊಟ್ಟು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಹೊಸ ಡೈಲಾಗ್ ತಮ್ಮ ಹೇಳಿಕೆಯಾಗಿ ಪರಿವರ್ತಿಸಿದ್ದಾರೆ ಬಹುಶಃ ಇದು ಅಧಿಕಾರ ವಂಚಿತತನದಿಂದ ಹೇಳಿದ ಮಾತು ಅಥವಾ ನಿಜವಾಗಿ ಉತ್ತರ ಕರ್ನಾಟಕದ ಮೇಲಿನ ಪ್ರೀತಿಯಿಂದ ಹೇಳಿದ. ಮಾತು ಎಂಬುದನ್ನು ಕಾಲವೇ ನಿರ್ಣಯಿಸಬೇಕು ಅಂತೂ ಇಂತೂ ಬಸನಗೌಡರಿಗೆ ರಾಜ್ಯ ಇಲ್ಲದಂತಾಗಿದೆ ಅವರೊಬ್ಬ ವ್ಯಾಜ್ಯತೆಗೆಯುವ ಮನುಷ್ಯಎಂಬುದು ಈಗ ಕರ್ನಾಟಕ ಅರಿತಿದೆ ಮುಂದಿನ ದಿನಗಳಲ್ಲಿ ಬಿಜೆಪಿ ವರಿಷ್ಠರ ಮತ್ತು ರಾಜ್ಯ ನಾಯಕರ ಕೋಪಕ್ಕೆ ಆಹುತಿಯಾಗುತ್ತಾರೋ ಅಥವಾ ಪ್ರೀತಿಗೆ ಪಾತ್ರರಾಗುತ್ತಾರೋ ಕಾದು ನೋಡಬೇಕಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



