ಸಂಪಾದಕೀಯ

ಕನಕಾಚಲಪತಿ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಕನಕಾಚಲಪತಿ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಕನಕಗಿರಿ ಪಟ್ಟಣದ ಐತಿಹಾಸಿಕ ದೇವಸ್ಥಾನ ಪರಮ ಪ್ರಸಿದ್ಧವಾದ ಎರಡನೇ ತಿರುಪತಿಯ ಎನಿಸಿಕೊಂಡಿರುವಂತಹ ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹ ದೇವಸ್ಥಾನದ ಲಕ್ಷದೀಪೋತ್ಸವ ಕಾರ್ಯಕ್ರಮ ಕುರಿತು ಗ್ರೇಡ್ ಟು ತಹಶೀಲ್ದಾರ್ ಮತ್ತು ದೇವಸ್ಥಾನದ ಕಮಿಟಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಲಕ್ಷದೀಪೋತ್ಸವಕ್ಕೆ ದಿ 12/12/2023 ರಂದು ಚಾಲನೆ ನೀಡಿದರು.

ಸದರಿ ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸಿಲ್ದಾರ್ ಹೆಚ್ ತರಲಕಟ್ಟಿ ಮಾತನಾಡಿ ದೇವಸ್ಥಾನದ ಕಾರ್ಯನಿರ್ವಹಣ ಅಧಿಕಾರಿಗಳೊಂದಿಗೆ ಚರ್ಚಿಸಿ ಹಾಗೂ ಕಮಿಟಿಯ ಊರಿನ ಸದ್ಭಕ್ತಾದಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಾಗಿಸಬೇಕೆಂದು ಅದಕ್ಕೆ ಬೇಕಾಗಿರುವಂತಹ ಸಹಕಾರ ಹಾಗೂ ವ್ಯವಸ್ಥೆಯನ್ನು ದೇವಸ್ಥಾನದ ಕಮಿಟಿ ಜೊತೆಗೆ ಆಡಳಿತ ಅಧಿಕಾರಿಗಳು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳ ಸಹಕಾರ ಎಂದಿಗೂ ಇರುತ್ತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೋಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷ್ಮೀನಾರಸಿಂಹನ ಉತ್ಸವ ವಿಶೇಷ ಪೂಜೆ ಜರುಗುತ್ತದೆ ಎಂದು ದೇವಸ್ಥಾನದ ಕಮಿಟಿ ಹಾಗೂ ಅರ್ಚಕರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತ ಅಧಿಕಾರಿ ಗ್ರೇಡ್ 2 ತಹಶೀಲ್ದಾರ್ ಹೆಚ್ ತರಲುಕಟ್ಟಿ ದೇವಸ್ಥಾನದ ಕಾರ್ಯನಿರ್ವಾಹಕರಾದ ಸಿದ್ಲಿಂಗಯ್ಯ ಸ್ವಾಮಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದನಾಗಪ್ಪ ತೆಗ್ಗಿ ಹಾಲ್, ವಿ ಸಿಂಗಾಚಾರ್ಯ ಅರ್ಚಕರು, ಕಂಠಪ್ಪ ತರಲಕಟ್ಟಿ, ವೆಂಕ್ಟೇಶ್ ಸೌದ್ರಿ ,ನಾಗಪ್ಪ, ಕೊರೆಡ್ಡಿ, ವೀರೇಶ್ ತಗ್ಗಿನಮನಿ ,ಕೀರ್ತಿ ಕುಮಾರ್ ಸೋನಿ,ಕನಕಪ್ಪ ಬಿ ದುರ್ಗದಾಸ್ ಯಾದವ್ ಗಂಗಾಧರ್ ಸ್ವಾಮಿ ವೀರೇಶ್ ಸಮ ಗಂಡಿ ಅನಿಲ್ ಬಿಜ್ಹಲ್ ರಂಗಪ್ಪ ಕೂರಗಟ್ಟಿಗೆ ಮಧುಸೂಧನ್ ಆಚಾರಿ ಅಯ್ಯನಗೌಡ ಕನಕ ರೆಡ್ಡಿ ಗುಂಡಪ್ಪ ಚಿತ್ರಗಾರ ಶರಣಪ್ಪ ಸಜ್ಜನ್ ಸಣ್ಣ ಕನಕಪ್ಪ ಸೇರಿ ಊರಿನ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button