ಸಂಪಾದಕೀಯ

536 ನೇ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ.ಕನಕಗಿರಿ.ಕೊಪ್ಪಳ.

536 ನೇ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

ಕನಕಗಿರಿ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ದಾಸ ಶ್ರೇಷ್ಠರಾದ ಭಕ್ತ ಕನಕದಾಸರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು
ಹಾಗೂ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಭಕ್ತಿ ಪೂರ್ವಕ ಪುಷ್ಪ ನಮನಗಳನ್ನು ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಮತ್ತು ಕನಕಗಿರಿ ಪಟ್ಟಣದ ಕನಕದಾಸ ವೃತ್ತದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತಿಯ ಕಾರ್ಯಕ್ರಮದ ಅಂಗವಾಗಿ ಕನಕದಾಸರ ಸರ್ಕಲ್ ಹಾಗೂ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಪಣೆ ಮಾಡುವ ಮೂಲಕ ಕನಕದಾಸರ ಜಯಂತಿಯನ್ನು ಆಡಳಿತ ಅಧಿಕಾರಿ ಗ್ರೇಡ್ 2 ತಶಿಲ್ದಾರ್ ಹೆಚ್ ಹೊರಪೇಟೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದುಕುರ್ ಮತ್ತು ಹಾಲುಮತ ಸಮಾಜದ ಗುರು ಹಿರಿಯರೊಂದಿಗೆ ಸೇರಿ ಆಚರಿಸಲಾಯಿತು.

ಇದೇ ವೇಳೆ ಕುರುಬ ಸಮಾಜದ ಮುಖಂಡ ಸಿದ್ದಪ್ಪ ನೀರ್ಲೂಟಿ ಮಾತನಾಡಿ ಕನಕದಾಸರು ಒಂದು ಸಮಾಜಕ್ಕೆ ಮಾತ್ರ ಮೀಸಲಾಗಿರದೆ ಸರ್ವ ಸಮುದಾಯಗಳಿಗೂ ಅವರ ಕೀರ್ತನೆಗಳು ಸರ್ವಕಾಲಿಕ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ನೀನಾದರೂ ಬಲ್ಲಿರ ಎಂದು ತಮ್ಮ ಕೀರ್ತನೆಗಳ ಮೂಲಕ ಎಲ್ಲಾ ಸಮಾಜದವರನ್ನು ಒಂದೇ ಎಂದು ಸಾರಿರುವಂಥ ದಾಸರಹಣ್ಯರು ಮನುಕುಲದ ಉದ್ಧಾರಕ್ಕಾಗಿ ಎಲ್ಲಾ ಸಮಾಜದವರು ಜಾತಿ ಮತಗಳನ್ನು ಮರೆತು ಸಹೋದರತ್ವ ಬಾಂಧವತೆ ಇಂದ ಬದುಕಿ ಬಾಳಬೇಕು ಎಂದರು ನಂತರ ವಿವಿಧ ಕಚೇರಿಗಳಾದ ತಾಲೂಕ್ ಆಡಳಿತ ಭವನ ತಾಲೂಕ ಪಂಚಾಯತ್ ಪಟ್ಟಣ ಪಂಚಾಯಿತಿ ಶಿಶು ಅಭಿವೃದ್ಧಿ ಕೇಂದ್ರ ಉಪಕಜನೆ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯ ಬಿಜೆಪಿ ಕಾರ್ಯಾಲಯ ಸೇರಿದಂತೆ ವಿವಿಧ ಸರಕಾರಿ ಸರ್ಕಾರಿಯೇತರ ಸಂಘ ಸಂಸ್ಥೆಗಳ ಮುಖಾಂತರ ಕನಕದಾಸರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಪುಷ್ಪಾರ್ಪಣೆ ಮಾಡುವ ಮೂಲಕ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು ಇದೇ ವೇಳೆ ಮಾತನಾಡಿದ ಇಓ ಚಂದ್ರೇಶೇಕರ್ ಬಿ ಕಂದಕೂರ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆ ಗಳು, ಸುಳಾದಿಗಳು, ಉಗಾಭೋಗಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುವುದು ಅಲ್ಲದೆ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ಮೂಲಕ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ ಯಂತೆಂದರು.

ಈ ಸಂದರಭದಲ್ಲಿ ಗ್ರೇಡ್ ಟು ತಹಸಿಲ್ದಾರ್ ಹೆಚ್ಚು ಹೊರಪೇಟೆ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ B ಕಂದುಕುರ್ ಪೊಲೀಸ್ ಆರಕ್ಷಕ ಅಧಿಕಾರಿಗಳಾದ ಜಗದೀಶ್ H ಮತ್ತು ಹಾಲು ಮತದ ಸಾಮಾಜದ ಮುಖಂಡರುಗಳಾದ ಡಾಕ್ಟರ್ ದೇವರಾಜ್ ಬಸವಂತಗೌಡ ಪಾಟೀಲ್ ದೇವಪ್ಪ ಮಲ್ಲಿಗೆವಾಡ ನಾಗಪ್ಪ ಹುಗ್ಗಿ ಪರ್ಸಪ್ಪ ಚೌಡಕಿ ಸಣ್ಣಪ್ಪ ಸಿಂಗಾಪುರ್ ಹನುಮಂತಪ್ಪ ಕುಲುಗಪ್ಪ ಚೌಡಕಿ ದುರ್ಗಪ್ಪ ಆರಾಪುರ ನಾಗರಾಜ್ ಕರಡಿ ಹನುಮಂತಪ್ಪ ತಂಗಡಗಿ ವೀರೇಶ್ ಚೆನೂರ್ ಕನಕಪ್ಪ ಬೊಮ್ಮ ಚಾಳ್ ಗಂಗಾಧರ್ ಚೌಡಕಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕುರುಬ ಸಮಾಜ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಜಯಂತಿಯಲ್ಲಿ ಭಾಗವಹಿಸಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button