ಸಂಪಾದಕೀಯ

ಚಲನಚಿತ್ರ ಪೋಷಕ ಕಲಾವಿದರ ಸಂಘದಲ್ಲಿ ಅವ್ಯವಹಾರ;7 ಮಂದಿ ಪದಾಧಿಕಾರಿಗಳ ವಜಾ – ಪದ್ಮಿನಿ.

ಚಲನಚಿತ್ರ ಪೋಷಕ ಕಲಾವಿದರ ಸಂಘದಲ್ಲಿ ಅವ್ಯವಹಾರ;
7 ಮಂದಿ ಪದಾಧಿಕಾರಿಗಳ ವಜಾ – ಪದ್ಮಿನಿ

ಬೆಂಗಳೂರು. ಕಷ್ಟ ಕಾಲ ದಲ್ಲಿ ಕಲಾವಿದರಿಗೆ ಸಹಾಯಕ್ಜೆ ಬರಬೇಕೆಂದು ಪೋಷಕ ಕಲಾವಿದರಿಗಾಗಿ ಸಂಘ ಕಟ್ಟಿದ್ದೀವಿ ಆದರೆ ಕೆಲವರು ಉಡಾಫಿ ಮಾತಿಗಳಿಂದ ಸಂಸ್ಕಾರ ಹೀನರಾಗಿ ದೌರ್ಜನ್ಯ ವನ್ನು ನಡೆಸುತ್ತಾ , ನನಗೆ ಸಂಘವನ್ನು ನಡೆಸಲು ಸಹಕರಿಸುತ್ತಲ್ಲ ಎಂದು ಪದ್ಮಿನಿ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲ ತಮ್ಮ ಅಳಲು ತೋಡಿಕೊಂಡರು. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪಿ.ಆರ್. ಉಷಾ (ಪದ್ಮಿನಿ) 2023-2026 ಸಾಲಿನಲ್ಲಿ ಅಧ್ಯಕ್ಷರಾಗಿದ್ದೇನೆ. 2023 ರಂದು ಮಾರ್ಚ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಹಿಂದಿನ ಮಾಜಿ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್ ಮತ್ತು ಕಾರ್ಯದರ್ಶಿ ನವನೀತಂ, ಖಜಾಂಚಿ ಬಾಲರಾಜ್ ಹಾಗೂ ಹಿನ್ನಿತರೆ 7 ಮಂದಿ ಹಿಂದಿನ ಪದಾಧಿಕಾರಿಗಳು ನೂತನವಾಗಿ ಆಯ್ಕೆಆದ ನನಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕೊಡುತ್ತಿಲ್ಲ.
ಇದುವರೆವಿಗೂ ಸಂಘ ಯಾವುದೇ ಲೆಕ್ಕಪತ್ರವನ್ನು ನೀಡಿಲ್ಲ. ಇವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ ಅನುಮಾನ ಇದೆ. ಹಿಂದಿನ ಅವ್ಯವಹಾರ ಬಯಲಾಗದ ರೀತಿಯಲ್ಲಿ ಗುಂಪುಗಾರಿಕೆ ಮಾಡಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಬೈಲಾ ಹಾಗು ಕಾನೂನನ್ನು ಮೀರಿ ವರ್ತಿಸುತ್ತಿದ್ದಾರೆ. ಸಂಘದ ಹೆಸರಿನಲ್ಲಿ ನಮ್ಮ ಪದಾಧಿಕಾರಿಗಳ ಗಮನಕ್ಕೆ ತರದೆ ನಿಧಿ ಸಂಗ್ರಹಮಾಡಿ ಅವ್ಯವಹಾರ ನಡೆಸುತ್ತಿದ್ದಾರೆ. ಇದು ಸಂಘದ ಬೈಲಾ ವಿರೋಧವಾಗಿದೆ. ಈ ಬಗ್ಗೆ ಪೊಲೀಸ್‍ಗೆ ದೂರು ನೀಡಿದ್ದೇವೆ ಮತ್ತು ನ್ಯಾಯಾಲದಲ್ಲಿ ದಾವೆ ದಾಖಲಿಸಿದ್ದೇವೆ. ನ್ಯಾಯಾಲಯ ಇವರ ವಿರುದ್ಧ ತಡೆಯಾಜ್ಞೆ ನೀಡಿದೆ. ಇಷ್ಟಾದರೂ ತಮ್ಮ ಅಕ್ರಮ ಅವ್ಯವಹಾರ ಮುಂದುವರೆಸಿದ್ದಾರೆ.
ಇದರಿಂದ ಸಂಘದ ಬೈಲಾ ಪ್ರಕಾರ ದಿನಾಂಕ: 28-11-2023 ರಿಂದ ಕಾರ್ಯದರ್ಶಿ ನವನೀತಂ, ಖಜಾಂಚಿ ಬಾಲರಾಜ್, ಉಪಾಧ್ಯಕ್ಷರು ಕವನ ಮತ್ತು ಉಮಾಶಂಕರ್, ಸಹ ಕಾರ್ಯದರ್ಶಿ ಸುಧಾ ಮತ್ತು ವಿಜಯಕುಮಾರ್, ಸುಲೋಚನಾ ರೈ ಒಟ್ಟು ಕಾರ್ಯಕಾರಿ ಸಮಿತಿಯ 7 ಮಂದಿ ಪದಾಧಿಕಾರಿಗಳನ್ನು ವಜಾಮಾಡಲಾಗಿದೆ. ಇನ್ನು ಮುಂದೆ ಸಂಘದ ಹೆಸರಿನಲ್ಲಿ ಇವರುಗಳು ನಡೆಸುವ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹ ನೀಡಬಾರದೆಂದು, ಪ್ರೋತ್ಸಹಿಸಬಾರದು ಎಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪಿ.ಆರ್. ಉಷಾ (ಪದ್ಮಿನಿ) ಮನವಿ ಮಾಡುತ್ತೇನೆ. ಇವರ ಮೊಂಡುತನ ದಿಂದ ಬೇಸತ್ತು ಈ ನಿರ್ಣಯ ಮಾಡಲಾಗಿದೆ , ನಾನು ಹೋರಾಟ ಮಾಡಲು ಸಿದ್ದವಾಗಿದ್ದೀನಿ ಎಂದು ದಿಟ್ಟ ನಿರ್ಣಯದಿಂದ ತಿಳಿಸಿದರು
ಪಿ.ಆರ್. ಉಷಾ (ಪದ್ಮಿನಿ)
ಅಧ್ಯಕ್ಷರು ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button