ರಾಮಚಂದ್ರ ಗುರೂಜಿ ನೇತೃತ್ವದಲ್ಲಿ ಹನುಮಾನ್ ಚಾಲೀಸ್ ಪಠಣ. ಕೊಪ್ಪಳ ನಗರ.

ರಾಮಚಂದ್ರ ಗುರೂಜಿ ನೇತೃತ್ವದಲ್ಲಿ ಹನುಮಾನ್ ಚಾಲೀಸ್ ಪಠಣ ,
ಪಠಣ, ಪ್ರವಚನಕ್ಕೆ ಸಾವಿರಾರು ಹನುಮ ಮಾಲದಾರಿಗಳ ಬಾಗಿ
ಕೊಪ್ಪಳ: ನಗರದಲ್ಲಿ ಬುಧವಾರದಂದು ಹನುಮ ಮಾಲಾಧಾರಿಗಳಿಗೆ ಡಾ. ರಾಮಚಂದ್ರ ಗುರೂಜಿಯವರು ಕೊಪ್ಪಳ ಜಿಲ್ಲೆಯ ಹನುಮ ಮಾಲಾ ದಾರಿಗಳಿಗೆ ಹನುಮನ ರಥದ ಪ್ರಯೋಜನಗಳ ಮತ್ತು ಅದರ ವಿಷಯಗಳ ಕುರಿತು ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಮಧುಶ್ರೀ ಕಲ್ಯಾಣ ಮಂಟಪದಲ್ಲಿ ಸಾವಿರಾರು ಹನುಮ ಮಾಲಾಧಾರಿಗಳಿಗೆ ಹನುಮಾನ್ ಚಾಲೀಸ್ ಪಠಣವನ್ನು ಮಾಡಿಸುತ್ತಾ ಆಂಜನೇಯ ಸ್ವಾಮಿಯ ಕೀರ್ತನೆಗಳು ಮತ್ತು ರಥವನ್ನು ಹೇಗೆ ಆಚರಿಸಬೇಕು ಎನ್ನುವಂತಹ ವಿಷಯದ ಕುರಿತು ಸುದೀರ್ಘ ಮೂರು ಗಂಟೆಗಳ ಕಾಲ ಪ್ರವಚನ ನೀಡಿದರು.
ಈ ಸಂದರ್ಭದಲ್ಲಿ ಸಾವಿರಾರು ಹನುಮ ಮಾಲೆದಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಮತ್ತು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಡಾಕ್ಟರ್ ರಾಮಚಂದ್ರ ಗುರೂಜಿ ಡಾಕ್ಟರ್ ರಾಮಕೃಷ್ಣ ಆರ್ ಟಿ ಓ ಲಕ್ಷ್ಮಿಕಾಂತ್ ನಾಲ್ವರ್ ಯಂಕಪ್ಪ ಕಟ್ಟಿಮನಿ ಸೇರಿದಂತೆ ಇನ್ನಿತರರು ಇದ್ದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




