ಅಂಧತ್ವ ಮುಕ್ತ ಪಟ್ಟಣ ಮಾಡಲು ಸಹಕಾರ ಅವಶ್ಯಕತೆ.ಕನಕಗಿರಿ

ಅನಗತ್ಯ ಅಂದತ್ವ ಮುಕ್ತ ಪಟ್ಟಣ ಮಾಡಲು ಸಹಕಾರ ಅವಶ್ಯಕತೆ
ಕನಕಗಿರಿ:- ಬರುವ ದಿನಮಾನಗಳಲ್ಲಿ ಕನಕಗಿರಿ ಪಟ್ಟಣವನ್ನು ಅನಗತ್ಯ ಅಂದತ್ವ ಮುಕ್ತ ಪಟ್ಟಣವನ್ನಾಗಿಸಲು ಶೀಘ್ರದಲ್ಲಿ ತಪ್ಪಾಸಣ ಕೇಂದ್ರವನ್ನು ತೆರೆಯುವುದಾಗಿ ಕೊಪ್ಪಳದ ಎಂಎಂ ಜೋಶಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಡಾಕ್ಟರ್ ವಿಕ್ರಂ ಕುಮಾರ್ ತಿಳಿಸಿದರು
ಅವರು ಪಟ್ಟಣದಲ್ಲಿ ಸೋಮವಾರ ಶ್ರೀ ರುದ್ರ ಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘ ಕನಕಗಿರಿ ಹಾಗೂ ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಮತ್ತು ಎಸ್ ಜಿ ಎಂ ನೇತ್ರ ಬಂಡಾರ ಹಾಗೂ ಎಂ ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಹಾಗೂ ಕೊಪ್ಪಳ ಇವರ ಸಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪಟ್ಟಣವನ್ನು ಅಂದತ್ವ ಮುಕ್ತ ವಾಗಿಸಲು ಸಂಘ-ಸಂಸ್ಥೆಗಳು ಕೈಜೋಡಿಸಿದರೆ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯ ವೈದ್ಯರಾದ ಡಾಕ್ಟರ್ ಎ ಎಂ ಅರವಟ್ಟಿಗೆ ಮಠ್ ಮಾತನಾಡಿ ಆರೋಗ್ಯದ ಜೊತೆಗೆ ಕಣ್ಣಿನ ಹಾರೈಕೆ ಹಾಗೂ ಜಾಗೃತಿಯನ್ನು ಕೈಗೊಂಡು ವರ್ಣಮಯ ಜಗತ್ತನ್ನು ನೋಡುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಶೇಖರ ಗೌಡ ಮಾಲಿ ಪಾಟೀಲ್ ಮಾತನಾಡಿ ನಮ್ಮ ಸಂಸ್ಥೆಯು ಕೇವಲ ಶೈಕ್ಷಣಿಕವಾಗಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿಲ್ಲ ,ಇದರ ಜೊತೆಗೆ ಸಮಾಜದ ಜನತೆಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳಾದ ದಂತ ಚಿಕಿತ್ಸಾ ಶಿಬಿರ ಸೇರಿದಂತೆ ಸಮಾಜಮುಖಿ ಕೆಲಸವನ್ನು ನಮ್ಮ ಸಂಘವು ನಡೆಸುತ್ತಿದ್ದು ಇದು ಶ್ಲಾಘನೀಯ ಇದರ ಸದುಪಯೋಗವನ್ನು ಪಟ್ಟಣ ಸೇರಿದಂತೆ ಸುತ್ತಲಿನ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೇತೃ ತಜ್ಞರಾದ ಡಾಕ್ಟರ್ ಜ್ಞಾನೇಶ್ವರಿ ಡಾ. ಕಾವೇರಿ ಡಾಕ್ಟರ್ ವಿಕ್ರಂ ಕುಮಾರ್ ಹಾಗೂ ಬಸಯ್ಯ ಹಿರೇಮಠ್ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಪ್ರಭು ಶೆಟ್ಟರ್ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜ್ ಪ್ರಭು ಶೆಟ್ಟಿ ವಹಿಸಿದ್ದರು.
ಈ ಮೂಲಕ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಡಾಕ್ಟರ್ ಮಹಾಬಲೇಶ್ ಸಜ್ಜನ್ ರುದ್ರಮುನಿ ಪ್ರಭು ಶೆಟ್ಟರ್ ಶರಣಬಸಪ್ಪ ಭತ್ತದ ಮುಖಂಡರಾದ ಶರಣಪ್ಪ ಭತ್ತದ ಗಂಗಾಧರ ಸ್ವಾಮಿ, ಕಲ ಬಾಗಿಲ ಮಠ ಮೃತ್ಯುಂಜಯ ಸ್ವಾಮಿ ಹಾಗೂ ಶ್ರೀಕಾಂತ್ ರಾಯಪುರ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಬಿಜ್ಜಳ ಹಾಗೂ ಶ್ರೀ ಗುರು ರುದ್ರ ಸ್ವಾಮಿ ಪ್ರೌಢಶಾಲೆ ಮತ್ತು ಶ್ರೀ ಶಿವಯೋಗಿ ಚನ್ನಮಲ್ಲ ಶಾಲೆಯ ಶಿಕ್ಷಕ ಸಿಬ್ಬಂದಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು
ಸಂಸ್ಥೆಯ ಸದಸ್ಯ ವಾಗೀಶ್ ಹಿರೇಮಠ್ ಪ್ರಸ್ತಾವಿಕವಾಗಿ ಮಾತನಾಡಿದರು ಶಿಕ್ಷಕ ಬಸವರಾಜ್ ಸ್ವಾಗತಿಸಿದರು ಮೌನೇಶ್ ಬಡಿಗೇರ್ ಕಾರ್ಯಕ್ರಮ ನಿರ್ವಹಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




