ಸಂಪಾದಕೀಯ

ರಾಮ ನಾಮದಲ್ಲಿ ಪ್ರೇಮದ ಉನ್ಮಾದ ಹೊರಹೊಮ್ಮಲಿ. ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

ರಾಮ ನಾಮದಲ್ಲಿ ಪ್ರೇಮದ ಉನ್ಮಾದ ಹೊರಹೊಮ್ಮಲಿ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಶುಭ ಸೂಚನೆ. ನಮ್ಮ ದೇಶವನ್ನು ಆಳಿದ ಮಹಾನ್ ದೊರೆ ಅವತಾರಿ ಪುರುಷ ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವದು ಇಡೀ ದೇಶ ಸಂತೋಷ ಪಡುವ ಸಂಗತಿಯಾಗಿದೆ ಎಲ್ಲಾ ಕಡೆ ರಾಮ ನಾಮ ಜಪ ರಾಮ ನಾಮ ಸ್ಮರಣೆ ನಡೆಯುತ್ತಿದೆ ಈ ರಾಮ ನಾಮದ ಪ್ರೇಮದಲ್ಲಿ ಇಡೀ ದೇಶ ಮುಳುಗಿ ಹೋಗುತ್ತಿದೆ ಈ ಪವಿತ್ರವಾದ ಸಂದರ್ಭದಲ್ಲಿ ಜನರ ಹೃದಯ ಮಂದಿರದಲ್ಲಿ ಪ್ರೇಮ ಭಾವನೆ ಹುಟ್ಟಬೇಕೆ ಹೊರತತೂ ದ್ವೇಷ ಮತ್ತು ಅಸೂಯೆ ಭಾವನೆ ಬರಬಾರದು ರಾಮಮಂದಿರ ಉದ್ಘಾಟನೆಯಾದ ಮೇಲೆ ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಭಾರತದಲ್ಲಿ ರಾಮ ರಾಜ್ಯ ನಿರ್ಮಾಣವಾಗಬೇಕು ಎಲ್ಲ ಪ್ರಜೆಗಳಿಗೆ ನ್ಯಾಯ ಸಿಗಬೇಕು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ದೊರೆಯಬೇಕು ರಾಮ ರಾಜ್ಯವೆಂದರೆ ಸುಖೀ ರಾಜ್ಯ ರಾಮನೆಂದರೆ ನ್ಯಾಯ ದೀನ ದಲಿತ ಶೋಷಿತ ತುಳಿತಕ್ಕೆ ಒಳಗಾದ ಜನಾಂಗದ ದನಿ ಶ್ರೀರಾಮನಾಗಿದ್ದಾನೆ ಅಂತಹ ಶ್ರೀ ರಾಮ ಎಲ್ಲರಿಗೂ ಬೇಕು ಇಂತಹ ರಾಮನನ್ನು ಕೇವಲ ಬಿಜೆಪಿಯವರು ತಮ್ಮ ರಾಮನೆಂದು ಹೇಳಿಕೊಂಡು ರಾಜಕಾರಣ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ರಾಮ ಎಲ್ಲರಿಗೂ ಸೇರಿದವನು ಭಾರತದ ತಂದೆ ಬಂಧು ಆಗಿದ್ದವನು. ಇಂತಹ ಶ್ರೀ ರಾಮನನ್ನು ರಾಜಕೀಯ ವ್ಯಕ್ತಿಗಳು ಹೈಜಾಕ್ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಬಿಜೆಪಿ ರಾಮ ಕಾಂಗ್ರೆಸ್ ರಾಮ ಜೆಡಿಎಸ್ ರಾಮನೆಂದು ಇಲ್ಲ ಇಡೀ ಭಾರತದ 140 ಕೋಟಿ ಜನರ ಆರಾಧ್ಯ ದೇವತೆಯಾಗಿದ್ದಾನೆ ಇತ್ತ ಶ್ರೀ ರಾಮನ ಮಂದಿರ ಅಪೂರ್ಣವಿರುವಾಗಲೇ ಅವಸರದ ನಿರ್ಣಯದೊಂದಿಗೆ ಉದ್ಘಾಟನೆಗೆ ಹೊರಟ ಬಿಜೆಪಿ ಸರ್ಕಾರ ಲೋಕಸಭಾ ಚುನಾವಣೆಯನ್ನು ಮುಂದೆ ಇರಿಸಿಕೊಂಡು ನಾಟಕವಾಡುತ್ತಿದೆ ಎಂಬ ಭಾವನೆ ಜನರಿಗೆ ಬರುತ್ತಿವೆ. ನಿಜವಾದ ಭಕ್ತಿ ಶ್ರದ್ಧೆ ಅನನ್ಯವಾದ ಭಾವನೆಗಳಿಂದ ಶ್ರೀರಾಮನನ್ನು ಪೂಜಿಸಿ ಗೌರವಿಸಬೇಕು ರಾಮಮಂದಿರ ಉದ್ಘಾಟನೆ ಜನವರಿ 22ರಂದು ನೆರವೇರುತ್ತಿರುವುದು ಸಂತಸದ ಸಂಗತಿಯಾಗಿದೆ ಅಂದು ಇಡೀ ದೇಶವೇ ದೀಪಾವಳಿ ಹಬ್ಬವನ್ನು ಆಚರಿಸಿದಂತೆ ಎಲ್ಲ ಮಂದಿರಗಳಲ್ಲಿ ಮಸೀದಿಗಳಲ್ಲಿ ಚರ್ಚುಗಳಲ್ಲಿ ಮತ್ತು ಮನೆ ಮನೆಗಳಲ್ಲಿ ರಾಮ ದೀಪವನ್ನು ಬೆಳಗಿಸಿ ಪ್ರಜ್ವಲನಗೊಳಿಸಿ ಸಂಭ್ರಮ ಪಡುವ ದೀಪಾವಳಿಯ ದಿನವಾಗಿದೆ ರಾಮ ರಹೀಮ್ ಏಕ್ ಹೈ ಈಶ್ವರ ಅಲ್ಲಾ ತೇರೇ ನಾಮ್ ಸಬ್ಕೋ ಸನ್ಮತಿ ದೇ ಭಗವಾನ್ ಎಂಬ ಮಾತಿನಂತೆ ನಾವು ಅಲ್ಲಾನನ್ನು ಅಲ್ಲಮನನ್ನು ರಾಮನನ್ನು ರಹಿಮನನ್ನು ಏಕಮುಖವಾಗಿ ನೋಡಬೇಕು ಹಿಂದೂ ಮುಸ್ಲಿಮರು ಭಾರತದ ಎರಡು ಸಂತತಿಗಳು ಸಹೋದರ ಭಾವನೆಯನ್ನು ಇರಿಸಿಕೊಂಡು ಒಂದಾಗಿ ಚೆಂದಾಗಿ ಬಾಳಬೇಕು ಭಾರತದಲ್ಲಿ ವೈವಿಧ್ಯತೆ ಇದೆ ದೇಶದ ಸಂಸ್ಕೃತಿ ಜನಾಂಗಗಳಲ್ಲಿ ಅನೇಕತೆ ಇದೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದಂತಹ ಪವಿತ್ರ ದೇಶ ಮತ್ತೊಂದು ಕಡೆ ನೋಡಲು ಕಾಣುವುದಿಲ್ಲ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಭಾಷೆ ಉಡುಗೆ ತೊಡುಗೆ ಆಹಾರ ವಿಹಾರ ಇದ್ದರೂ ಕೂಡ ನಾವೆಲ್ಲರೂ ಒಂದೇ ನಮ್ಮಗೊಬ್ಬನೇ ತಂದೆ ಎಂದು ಭಾವಿಸಿ ಸರ್ವ ಧರ್ಮ ಸಹಿಷ್ಣುತೆ ಗುಣವನ್ನು ಹೊಂದಿರುವ ಈ ದೇಶದಲ್ಲಿ ದೇವರ ಧರ್ಮದ ಹೆಸರಿನಲ್ಲಿ ಸೌಹಾರ್ದತೆಯಿಂದ ಬಾಳಬೇಕೆ ವಿನಃ ಜಾತಿ ಭಾವನೆ ಆಗಲಿ ಕೋಮು ಭಾವನೆಗಳಾಗಲಿ ಬರಬಾರದು ಭಾರತ ಜಾತ್ಯತೀತ ರಾಷ್ಟ್ರ ಭಾರತದ ಸಂವಿಧಾನ ಜಾತ್ಯತೀತವಾಗಿದೆ ಆದರೆ ಇಂದು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರದ ಲಾಲಸೆಗಾಗಿ ದೇಶದ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟು ಸಂವಿಧಾನವನ್ನು ಧಿಕ್ಕರಿಸಿ ಬಾಳುವ ಮತ್ತು ಅಧಿಕಾರ ಪಡೆಯುವ ಕೀಳು ಮಟ್ಟಕ್ಕೆ ಹೋಗಿದ್ದಾರೆ ಭಾರತದಲ್ಲಿ ಯಾವುದೇ ಪಕ್ಷವಿರಲಿ ಜಾತಿ ಭಾಷೆ ಸಂಸ್ಕೃತಿಗಳಿರಲಿ ನಾವು ಸೌಹಾರ್ದತೆಯಿಂದ ಬಾಳಿ ನಾವು ಸಹೋದರರಂತೆ ವಾಸಿಸಬೇಕು ಅಖಂಡ ಭಾರತೀಯರು ನಾವೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ಮಾತ್ರ ಈ ದೇಶ ಉಳಿಯಲು ಸಾಧ್ಯ ಇಂಥ ಪವಿತ್ರವಾದ ವಾತಾವರಣವನ್ನು ಹಾಳು ಮಾಡಿ ರಾಜಕಾರಣಿಗಳು ರಾಮನ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ಶ್ರೀರಾಮನು ಬಿಜೆಪಿಗೆ ಸೇರಿದವನೆಂಬ ಭಾವನೆ ಮತ್ತು ಶ್ರೀರಾಮನ ಪರಂಪರೆ ನಮ್ಮದು ಎಂದು ಹೇಳಲು ಹೊರಟಿರುವುದು ಈ ದೇಶದ ದುರಂತವಾಗಿದೆ ಶ್ರೀರಾಮ ಯಾರಿಗೆ ಬೇಡ ಎಲ್ಲರಿಗೂ ಬೇಕು ಕನಕದಾಸರು ರಾಗಿಯನ್ನು ರಾಮಧಾನ್ಯವೆಂದು ವರ್ಣಿಸಿದ್ದಾರೆ ರಾಮನಾಗಲಿ ರಾಮ ನಾಮವಾಗಲಿ ರಾಮ ಧಾನ್ಯವಾಗಲಿ ಯಾರಿಗೆ ಬೇಡ ಎಲ್ಲರಿಗೂ ರಾಗಿ ಬೇಕು ರಾಮ ಬೇಕು ಪ್ರತಿಯೊಬ್ಬರ ಮಕಾನನಲ್ಲಿ ಮತ್ತು ದುಖಾನನಲ್ಲಿ ಇರಬೇಕು ಅಂದಾಗ ಈ ದೇಶ ಪಾವನವಾಗುತ್ತದೆ ನಮ್ಮಲ್ಲಿ ಅವತಾರಿ ಪುರುಷರಿದ್ದಾರೆ ಪವಿತ್ರವಾದ ನದಿಗಳು ಹರಿದಿವೆ ಫಲವತ್ತಾದ ಭೂಮಿ ಇದೆ ತತ್ವಜ್ಞಾನದ ಕೊರತೆ ಇಲ್ಲ ಇಂಥ ಅದ್ಭುತವಾದ ದೇಶದಲ್ಲಿ ಅಧಿಕಾರಕ್ಕಾಗಿ ತತ್ವ ಸಿದ್ಧಾಂತ ನ್ಯಾಯ ಸಂವಿಧಾನವನ್ನು ಬಲಿಕೊಡಲು ಹೊರಟಿರುವ ರಾಜಕಾರಣಿಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಇಡೀ ದೇಶದ ತುಂಬಾ ಜನವರಿ 22 ರಂದು ರಾಮ ನಾಮ ಪ್ರೇಮದ ಉನ್ಮಾದದಲ್ಲಿ ದೇಶ ದೀಪವನ್ನು ಪ್ರಜ್ವಲಿಸಿ ರಾಮಮಂದಿರದ ಉದ್ಘಾಟನೆಗೆ ಮತ್ತು ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಜೈಕಾರ ಹಾಕಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button