ಅರ್ಜಿದಾರರ ಜಾತಿ, ಧರ್ಮವನ್ನು ನಮೂದಿಸಬಾರದು ಸುಪ್ರೀಂ ಕೋರ್ಟ್.

ಅರ್ಜಿದಾರರ ಜಾತಿ, ಧರ್ಮವನ್ನು ನಮೂದಿಸಬಾರದು ಸುಪ್ರೀಂ ಕೋರ್ಟ್.
ದಾವೇ ದಾಖಲಿಸುವ ವೇಳೆ ಕೇಸ್ ಪೇಪರ್ಗಳಲ್ಲಿ ಅರ್ಜಿದಾರರ ಜಾತಿ, ಧರ್ಮವನ್ನು ನಮೂದಿಸಬಾರದು ಎಂದು ಸುಪ್ರೀಂ ಕೋರ್ಟ್ ದೇಶದಲ್ಲಿಯ ತನ್ನ ಆಧೀನದ ಎಲ್ಲಾ ನ್ಯಾಯಾಲಯಗಳಿಗೆ ಆದೇಶಿಸಿದೆ.
” ಸರ್ವೋಚ್ಚ ನ್ಯಾಯಾಲಯ, ರಾಜ್ಯಗಳ ಉಚ್ಚ ನ್ಯಾಯಾಲಯಗಳು ಕೆಳಗಿನ ನ್ಯಾಯಾಲಯಗಳ ಮುಂದೆ ಯಾವುದೇ ದಾವೆದಾರರ ಜಾತಿ / ಧರ್ಮವನ್ನು ಉಲ್ಲೇಖಿಸಲು ನಮಗೆ ಯಾವುದೇ ಕಾರಣವಿಲ್ಲ” ಎಂದು ಪೀಠ ಹೇಳಿದೆ. ಇಂತಹ ಪದ್ಧತಿ ಕೂಡಲೇ ನಿಲ್ಲಿಸಬೇಕು.
ಕೇಸ್ ಪೇಪರ್ಗಳಲ್ಲಿ ದಾವೆದಾರರ ಜಾತಿ ಅಥವಾ ಧರ್ಮವನ್ನು ನಮೂದಿಸುವ ಅಭ್ಯಾಸವನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಎಲ್ಲಾ ಹೈಕೋರ್ಟ್ಗಳು ಮತ್ತು ಅಧೀನ ನ್ಯಾಯಾಲಯಗಳಿಗೆ ನಿರ್ದೇಶಿಸುವ ಸಾಮಾನ್ಯ ಆದೇಶವನ್ನು ಜಾರಿಗೊಳಿಸಿದೆ.
ಈ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ.



