ಶ್ರದ್ಧಾ ಭಕ್ತಿಯಿಂದ ಶ್ರೀ ಕಾಯಕ ಶರಣರ ಜಯಂತಿ ಆಚರಣೆ – ಕನಕಗಿರಿ.

ಶ್ರದ್ಧಾ ಭಕ್ತಿಯಿಂದ ಶ್ರೀ ಕಾಯಕ ಶರಣರ ಜಯಂತಿ ಆಚರಣೆ
ಕನಕಗಿರಿ ಪಟ್ಟಣದ ತಹಶೀಲ್ ಕಾರ್ಯಾಲಯದಲ್ಲಿ ಶ್ರೀ ಕಾಯಕ ಶರಣರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವನಾಥ್ ಮುರುಡಿ ಅವರ ನೇತೃತ್ವದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ತಹಶೀಲ್ದಾರ್ ವಿಶ್ವನಾಥ್ ಮುರುಡಿ,‘ ಮಹಾತ್ಮರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ದಿನನಿತ್ಯದ ವ್ಯವಹಾರದಲ್ಲಿ ಮಾರ್ಗದರ್ಶಕವಾಗಬೇಕು. ಅವರು ನಡೆದ ದಾರಿ, ನುಡಿದ ಮಾತು ನಮಗೆ ಮಾದರಿ ಆಗಬೇಕು’ ಎಂದರು.
ಈ ವೇಳೆ ತಹಶೀಲ್ದಾರರು ವಿಶ್ವನಾಥ ಮುರುಡಿ, ಗ್ರೇಡ್ 2 ತಹಶೀಲ್ದಾರರು ಶ್ರೀ ವಿ.ಎಚ್.ಹೋರಪೇಟಿ, ಸಿಬ್ಬಂದಿಗಳಾದ ಮುತ್ತಣ್ಣ ಗೌಂಡಿ, ಗುರುಲಿಂಗಯ್ಯ ಪೂಜಾರಿ, ಸಂಗಮೇಶ, ಶಿವರಾಜ ಗ್ರಾ.ಆ.ಅ ಕನಕಗಿರಿ, ಗಡ್ಡಿ ಕುಮಾರ ಗ್ರಾ.ಆ.ಅ ಮುಸಲಾಪುರ ವಿಜಯಭಾಸ್ಕರರೆಡ್ದಿ, ಸುರೇಶ ವಾಲೇಕರ್,ಬಸವರಾಜ್ ಮೇಟಿ,ಗಣೇಶ, ನಾಗರಾಜ, ರಾಜಾಸಾಬ್ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




