ಸಂಪಾದಕೀಯ

ಅಖಿಲ ಭಾರತ ವೀರಶೈವ ಮಹಾಸಭೆ ಕುರಿತು ಕೆಲವು ಸ್ವಾರಶ್ಯಕರ ಪ್ರಸಂಗಗಳು.ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲಬುರ್ಗಿ.

ಅಖಿಲ ಭಾರತ ವೀರಶೈವ ಮಹಾಸಭೆ ಕುರಿತು ಕೆಲವು ಸ್ವಾರಶ್ಯಕರ ಪ್ರಸಂಗಗಳು.

೧ ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಎಲ್ ಜಿ ಹಾವನೂರ್ ಮಂತ್ರಿಗಳಾಗಿದ್ದರು ಅವರು ಹಿಂದುಳಿದ ಆಯೋಗದ ಸಮೀಕ್ಷ ವರದಿಯನ್ನು ಸಲ್ಲಿಸಿದ್ದರು ಅದರಲ್ಲಿ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗುತ್ತಿತ್ತು ಅದನ್ನು ಪ್ರತಿಭಟಿಸಿ ನಮ್ಮ ನೆಚ್ಚಿನ ನಾಯಕರಾದ ಭೀಮಣ್ಣ ಕಂಡ್ರೆ ಅವರು ವಿಧಾನಸಭೆಯಲ್ಲಿ ಎಲ್ ಜಿ ಹವನುರ್ ನೀಡಿದ ವರದಿಯನ್ನು ಹರಿದು ಹಾಕಿದರು ಅಂದಿನ ದಿನವೇ ಕರ್ನಾಟಕದ ರಾಜಕೀಯ ವಲಯದಲ್ಲಿ ಭೀಮಣ್ಣ ಖಂಡ್ರೆ ಅವರು ವೀರಶೈವ ಸಮಾಜದ ಹೀರೋ ಆದರು. ಮುಂದೆ ಅವರು ವೀರಶೈವ ಮಹಾಸಭಾ ಅಧ್ಯಕ್ಷರಾಗಿಯೂ ಆ ಸ್ಥಾನದಲ್ಲಿ ಕುಳಿತು ವೀರಶೈವರ ಸಮಸ್ಯೆಗಳಿಗೆ ಸ್ಪಂದಿಸಿ ಮತ್ತು ಅದಕ್ಕೆ ಒಂದು ಭದ್ರ ಬುನಾದಿಯನ್ನು ಸ್ಥಾಪಿಸಿ ಬೆಂಗಳೂರಿನ ಅರಮನೆ ರಸ್ತೆಯ ಪಕ್ಕದಲ್ಲಿ ಒಂದು ಬಹುದೊಡ್ಡದಾದ ವೀರಶೈವ ಮಹಾಸಭಾ ಕಚೇರಿ ಕಟ್ಟಡವನ್ನು ನಿರ್ಮಿಸಿ ಸಮಾಜಕ್ಕೆ ಒಳಿತು ಮಾಡಿದರು ಅಂದಿನಿಂದ ವೀರಶೈವ ಸಮಾಜ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಾ ಭೀಮಣ್ಣ ಖ೦ಡ್ರೆ ಅವರನ್ನು ನೆಚ್ಚಿಕೊಂಡು ಇದುವರೆಗೆ ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ೩ ಐಎಎಸ್ ನಿವೃತ್ತ ಅಧಿಕಾರಿಗಳಾದ ಜೆಬಿ ಮಲ್ಲಾರಾಧ್ಯರು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷರಾಗಿದ್ದರು ಅವರು ಇಡೀ ರಾಜ್ಯದ ತುಂಬಾ ಪ್ರವಾಸ ಮಾಡಿ ವೀರಶೈವ ಮಹಾಸಭೆ ಇದೆ ಎನ್ನುವುದನ್ನು ಎಲ್ಲರಿಗೂ ಪರಿಚಯಿಸಿಕೊಟ್ಟರು ಅದರ ಕೆಲಸ ಕಾರ್ಯಗಳನ್ನು ಎಲ್ಲರಿಗೂ ತಿಳಿಸಿ ಕೊಡುವುದರ ಮೂಲಕ ಒಬ್ಬ ಯಶಸ್ವಿ ಅಧ್ಯಕ್ಷರಾದರು ಅಷ್ಟೇ ಅಲ್ಲ ಕರ್ನಾಟಕದಲ್ಲಿ ಯಾವುದೇ ವೀರಶೈವ ಲಿಂಗಾಯತ ಆದಂತಹ ವ್ಯಕ್ತಿ ಯಾವುದೇ ಪಕ್ಷದಿಂದ ಸ್ಪರ್ಧಿಸಲಿ ಮೊದಲು ಆತ ವೀರಶೈವ ಸಮಾಜದ ಅಧ್ಯಕ್ಷರ ಅನುಮತಿಯನ್ನು ಪಡೆದು ಮೊದಲ ಅರ್ಜಿಯನ್ನು ನಮಗೆ ಕೊಟ್ಟು ನಾವು ಅನುಮತಿಸಿದ ನಂತರವೇ ಅವರು ಪಕ್ಷದ ಅಭ್ಯರ್ಥಿ ಆಗಬೇಕು ಅವರನ್ನು ಗೆಲ್ಲಿಸುವ ಜವಾಬ್ದಾರಿ ವೀರಶೈವ ಸಮಾಜಕ್ಕೆ ಸೇರಿದ್ದು ಎಂಬ ಕರೆಯನ್ನು ಕೊಟ್ಟರು ಇದು ಅತ್ಯಂತ ಮಹತ್ವದ ಹಾಗೂ ಅರ್ಥಪೂರ್ಣ ಸಂದೇಶವಾಗಿತ್ತು ಆ ರೀತಿ ಸಮಾಜ ಸಂಘಟನೆ ಯಾಗಬೇಕೆಂಬದು ಅವರ ಸುಂದರ ಕನಸಾಗಿತ್ತು ಆದರೆ ಆ ಕನಸು ಇಂದಿಗೂ ಕೂಡ ನನಸಾಗಿಲ್ಲ. ೪ 1982 ರಲ್ಲಿ ನಾನು ಮೈಸೂರಿನಲ್ಲಿ ಕನ್ನಡ ಸ್ವಾರ್ಥಕೋಸ್ಕರ ಪದವಿಯಲ್ಲಿ ಓದುತ್ತಿದ್ದೆ ಆ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷರ ಆಯ್ಕೆ ಸಂದರ್ಭ ಆ ಸಮಿತಿಯಲ್ಲಿ ಸಾವಿರಾರು ಸದಸ್ಯರಿಗೆ ಆಹಾ ವನಿಸಿದ್ದರು ಸಿದ್ದಗಂಗಾ ಶ್ರೀಗಳ ಕರೆಯ ಮೇರೆಗೆ ಎಲ್ಲರೂ ಆಗಮಿಸಿದ್ದರಿಂದ ಯಶಸ್ವಿ ಸಭೆ ಜರುಗಿತುಜನ ಆಗ ಚುನಾವಣೆಗಳು ಇರಲಿಲ್ಲ ಬದಲಿಗೆ ಎಲ್ಲರೂ ಸೇರಿ ಒಬ್ಬರನ್ನ ಅಧ್ಯಕ್ಷರನ್ನಾಗಿ ನಾಮಕರಣ ಮಾಡುವಂಥದ್ದು ಒಬ್ಬರು ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸುವುದು ಅದನ್ನು ಇನ್ನೊಬ್ಬರು ಅನುಮೋದಿಸುವ ಪದ್ಧತಿ ಇತ್ತು ಈ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳ ಸಮ್ಮುಖದಲ್ಲಿ ಚರ್ಚೆ ಪ್ರಾರಂಭವಾಯಿತು ಆಶ್ಚರ್ಯವೆಂದರೆ ಯಾರಾದರೂ ಯಾರಾದರೂ ಹೆಸರು ಪ್ರಸ್ತಾಪಿ ಸಿದ ಕೂಡಲೇ ಅವರ ಬಗ್ಗೆ ವಿರೋಧ ವ್ಯಕ್ತವಾಗುತ್ತಿತ್ತು ಅವನು ಹಾಗೆ ಇವನು ಹೀಗೆ ಅವನು ಕಳ್ಳ ಇವನು ಸುಳ್ಳ ಅವನು ಭ್ರಷ್ಟ ಹೀಗೆ ಅನೇಕ ವಿಚಾರಗಳು ಪ್ರಸ್ತಾಪಗೊಂಡವು ಇದನ್ನೆಲ್ಲ ಕೇಳಿದ ಸಿದ್ಧಗಂಗಾ ಶ್ರೀಗಳು ಕೊನೆಗೆ ಹೇಳಿದ್ದೇನು ಗೊತ್ತೇ ಎಲ್ಲರೂ ಕಳ್ಳರು ಸುಳ್ಳರು ಒಳ್ಳೆಯವರ ಸಂಖ್ಯೆ ತುಂಬಾ ಕಡಿಮೆ ಇದೆ ಕಡಿಮೆ ಕಳ್ಳರು ಕಡಿಮೆ ಸುಳ್ಳರು ಯಾರಿದ್ದಾರೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ತಮಾಷೆಯಾಗಿ ಕರೆಕೊಟ್ಟರು ಚರ್ಚೆ ಅಲ್ಲಿಗೆ ಮುಗಿಯಿತು ಆಗ ಐ ಎಂ ಮಗದುಮ್ ನಿವೃತ್ತ ಮುಖ್ಯ ಅಭಿಯಂತರು ಕರ್ನಾಟಕ ಅವರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಿ ಮೈಸೂರಿನಲ್ಲಿ ದಸರಾ ಮೈದಾನದ ಆವರಣದಲ್ಲಿ ಸುತ್ತೂರು ಶ್ರೀ ರಾಜೇಂದ್ರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ವೀರಶೈವ ಸಮಾವೇಶ ನಡೆದು ಅಧ್ಯಕ್ಷರು ಅಧಿಕಾರ ಪದಗ್ರಹಣ ಮಾಡಿದ ಸಂದರ್ಭ ಅತ್ಯಂತ ಮಹತ್ವಪೂರ್ಣ ಮತ್ತು ರೋಮಾಂಚನಕಾರಿಯಾಗಿತ್ತು ಇಡೀ ಕರ್ನಾಟಕದ ವೀರಶೈವ ಲಿಂಗಾಯತರು ಸಮಾವೇಶಗೊಂಡು ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೊಳಿಸಿದರು. ೬ ಕಲ್ಯಾಣ ಕರ್ನಾಟಕದ ಉಕ್ಕಿನ ಮನುಷ್ಯ ಶತಾಯುಷಿ ಎನಿಸಿಕೊಂಡಿರುವ ಸನ್ಮಾನ್ಯ ಶ್ರೀ ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಮಹಾಸಭೆ ನೆಲೆ ಇಲ್ಲದೆ ಅಲೆಯುತ್ತಿರುವ ಸಂದರ್ಭದಲ್ಲಿ ಈ ಮುಂಚೆ ಅದು ಚಿತ್ರದುರ್ಗದ ಬ್ರಹನ್ ಮಠದ; ಬೆಂಗಳೂರಿನ ಗಾಂಧಿನಗರದ ವೀರಶೈವ ವಸತಿ ನಿಲಯದಲ್ಲಿ ಅದರ ಕೇಂದ್ರ ಕಚೇರಿ ಇತ್ತು ಇಂಥ ಸ್ಥಿತಿಯಲ್ಲಿದ್ದಂತಹ ವೀರಶೈವ ಮಹಾಸಭಾ ಕಚೇರಿಯನ್ನು ಬೃಹತ್ ಮತ್ತು ಮಹತ್ ಪ್ರಮಾಣದಲ್ಲಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನ ಕಟ್ಟಡವನ್ನು ಭೀಮಣ್ಣ ಖಂಡ್ರೆ ಅವರು ನಿರ್ಮಿಸಿದರು ಅವರ ನಾಯಕತ್ವದಲ್ಲಿ ನಡೆದ ಕಾರ್ಯ ಇಂದಿಗೂ ಪ್ರಸಂಶ ನೀಯ ಮತ್ತು ಅವರು ಆ ಕಟ್ಟಡವನ್ನು ವೀರಶೈವ ಸಮಾಜಕ್ಕೆ ಅರ್ಪಣೆ ಮಾಡಿ ಸಮಾಜ ಸಂಘಟನೆಗೆ ಚಾಲನೆ ನೀಡಿದರು ಅವರನ್ನು ಇಂದಿಗೂ ಕೂಡ ವೀರಶೈವ ಸಮಾಜ ಸ್ಮರಿಸಿಕೊಳ್ಳುತ್ತದೆ ೭ ಮೂಲತಃ ವೀರಶೈವ ಮಹಾಸಭೆ ಇದ್ದ ಕಚೇರಿ ಇತ್ತೀಚಿನ ಡಿನಗಳಲ್ಲಿ ಕೆಲವರು ಲಿಂಗಾಯತ ಎಂಬ ಪದವನ್ನು ಸೇರಿಸಿ ಎಂದು ಒತ್ತಡ ಹಾಕಿರುವುದರಿಂದ ಮತ್ತು ಸಾಕಷ್ಟು ಅದರ ಮೇಲೆ ಪ್ರಭಾವ ವರ್ಚಸ್ಸು ಬೀರುತ್ತಿರುವುದರಿಂದ ವೀರಶೈವ ಮಹಾಸಭೆ ತನ್ನ ನಿಬಂಧನೆಗಳಲ್ಲಿ ಇದುವರೆಗೆ ಇದ್ದ ವೀರಶೈವ ಮಹಾಸಭೆ ಇನ್ನುಮೇಲೆ ವೀರಶೈವ ಲಿಂಗಾಯತ ಮಹಾಸಭೆ ಎಂದು ಕರೆಯೋಣ ಎಂದು ನಿರ್ಣಯಿಸಿದರು ಆದರೂ ಕೂಡ ಇವೆರಡು ಪರಸ್ಪರ ಸೇರಿಕೊಳ್ಳದೆ ಪರ್ಯಾಯವಾದ ವ್ಯವಸ್ಥೆಯಲ್ಲಿ ಮುನ್ನಡೆದಿರುವುದು ವಿಷಾದದ ಸಂಗತಿಯಾಗಿದೆ ಇದನ್ನು ಸರಿಪಡಿಸುವುದು ಇಂದಿಗೂ ಕಷ್ಟ ಅಸಾಧ್ಯವಾಗಿದೆ ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಲಿಂಗಾಯತ ಮಹಾಸಭೆ ಹುಟ್ಟಿಕೊಂಡಿರುವಂತದು ನೋಡಿದರೆ ಇವೆರಡು ಸಮಾನಾಂತರ ರೇಖೆಗಳಾಗಿ ಪರಿವರ್ತನೆಯಾಗಿ ಪರಸ್ಪರ ಸಂಧಿಸುವ ಲಕ್ಷಣಗಳು ಕಾಣುತ್ತಿಲ್ಲ ಇದು ವೀರಶೈವ ಸಮಾಜಕ್ಕೆ ನುಂಗಲಾರದ ತುತ್ತಾಗಿದೆ ಇದನ್ನು ರಾಜ್ಯದ ಅಧ್ಯಕ್ಷರಾದವರು ಎಷ್ಟರ ಮಟ್ಟಿಗೆ ಸರಿಪಡಿಸುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ೮ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಕಲ್ಬುರ್ಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪರಮಪೂಜ್ಯ ಶ್ರೀ ಡಾ. ಶರಣಬಸಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರನ್ನು ಬೆಳಗಾವಿಯಲ್ಲಿ ಪ್ರಭಾಕರ್ ಕೋರೆ ಅವರು ಅದ್ದೂರಿ ಆಡಂಬರದ ಮೆರವಣಿಗೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನದ ಪದವಿಯನ್ನು ಗ್ರಹಣ ಮಾಡುವಂತೆ ಅತ್ಯುತ್ತಮವಾಗಿ ವ್ಯವಸ್ಥೆಗೊಳಿಸಿದ್ದರು ಲಕ್ಷಾಂತರ ಜನ ವೀರಶೈವ ಲಿಂಗಾಯತರು ಸೇರಿದ್ದರು ಅತ್ಯಂತ ವಿಷಾದಕರ ಸಂಗತಿ ಎಂದರೆ ಅವರು ಅಧ್ಯಕ್ಷರಾದ ಮೇಲೆ ಅವರು ಯಾವುದೇ ರೀತಿಯ ಐದು ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳಬಹುದಾದ ಸಾಧನೆಯನ್ನು ಮಾಡಲಿಲ್ಲ ಸಮಾಜವನ್ನು ಸಂಘಟಿಸಲಿಲ್ಲ ಬದಲಿಗೆ ಅವರು ಶರಣಬಸವೇಶ್ವರ ಸಂಸ್ಥಾನವನ್ನು ಬಿಟ್ಟು ಹೊರಗಡೆ ಬರಲೇ ಇಲ್ಲ ಹೀಗಾಗಿ ಸಮಾಜ ಸಂಘಟನೆಗೊಳ್ಳುವುದು ಕಷ್ಟ ಅಸಾಧ್ಯವಾಯಿತು ಅವರು ಕೇವಲ ಮೀಟಿಂಗ್ಗಳಿಗೆ ಮಾತ್ರ ಹಾಜರಾಗಿ ಬರುತ್ತಿದ್ದರೆ೦ ಬುದು ತಿಳಿದು ಬಂತು. ೯ ಇತ್ತೀಚಿಗೆ ಕರ್ನಾಟಕದ ಬಹು ದೊಡ್ಡ ಶ್ರೇಷ್ಠ ಲಿಂಗಾಯತ ಸಿರಿವಂತ ಉದಾರವಂತ ಮನುಷ್ಯರಾದ ಶಾಮನೂರು ಶಿವಶಂಕರಪ್ಪನವರು ಅಧ್ಯಕ್ಷರಾಗಿದ್ದಾರೆ ಅವರು ಇದನ್ನುತಮ್ಮ ರಾಜಕೀಯ ವೇದಿಕೆ ಯನ್ನಾಗಿ ಪರಿವರ್ತಿಸಿಕೊಂಡಿದ್ದಾ ರೆಂಬ ಆರೋಪ ಅವರ ಮೇಲೆ ಇದೆ ಈಗ ವೀರಶೈವ ಲಿಂಗಾಯತ ಮಹಾ ಸಭೆ ಸಮಾಜ ಸಂಘಟನೆಗಿಂತಲೂ ಹೆಚ್ಚಾಗಿ ರಾಜಕೀಯ ಸಂಘಟನೆಯಾಗಿ ಪರಿವರ್ತನೆಗೊಂಡಿದ್ದು ದುರದೃಷ್ಟಕರ ಸಂಗತಿಯಾಗಿದೆ ಕೆಲವೇ ಜನ ಶ್ರೀಮಂತರ ಕಪಿಮುಷ್ಠಿಯಲ್ಲಿ ಮತ್ತು ಅವರ ಹಿಡಿತದಲ್ಲಿ ವೀರಶೈವ ಮಹಾಸಭೆ ಉಳಿದಿದೆ ಎಂಬುದು ಜಗ ಜಾಹಿರವಾಗಿದೆ ಈಗ ತ್ಯಾಗ ಸೇವೆ ಸಮರ್ಪಣ ಭಾವದಿಂದ ಯಾವ ಅಧಿಕಾರದ ಅಪೇಕ್ಷೆ ಇಲ್ಲದೆ ರಾಜಕೀಯ ಚಲನವಲನಗಳಿಲ್ಲದೆ ರಾಜಕೀಯ ಮುಕ್ತ ಸಮಾಜ ಸೇವೆ ಮಾಡುವ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರುಗಳು ಆಯ್ಕೆಗೊಂಡರೆ ವೀರಶೈವ ಮಹಾಸಭೆ ಅರ್ಥಪೂರ್ಣವಾಗುತ್ತದೆ ಇಲ್ಲದಿದ್ದರೆ ಅದೊಂದು ರಾಜಕೀಯ ವೇದಿಕೆಯಾಗಿ ಪರಿವರ್ತನೆಗೊಂಡರೆ ಇದಕ್ಕಿಂತಲೂ ಕೆಟ್ಟ ಸಂಗತಿ ಮತ್ತೊಂದು ಇಲ್ಲ ವಯಸ್ಸಾದವರಿಗೆ ಇದು ವಿಶ್ರಾಂತಿ ಧಾ ಮವು ಅಲ್ಲ ಬೆಳೆಯುವವರಿಗೆ ವೇದಿಕೆಯೂ ಅಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು ಇದು ತ್ಯಾಗ ಸೇವೆ ಸಮರ್ಪಣಾ ಭಾವದಿಂದ ದುಡಿಯುವ ವ್ಯಕ್ತಿಗಳಿಗೆ ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಮಹಾಸಭೆ ಧರ್ಮ ಆಚಾರ ವಿಚಾರಗಳ ಪ್ರಚಾರಕ್ಕಾಗಿ ಇರುವ ಈ ಸಂಸ್ಥೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದೆಂಬುದು ನಮ್ಮ ಅಪೇಕ್ಷೆಯಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲಬುರ್ಗಿ

Related Articles

Leave a Reply

Your email address will not be published. Required fields are marked *

Back to top button