ತುರ್ವಿಹಾಳ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ತುರ್ವಿಹಾಳ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ಅವಿರೋಧವಾಗಿ ಅಧ್ಯಕ್ಷ ಕೆ.ಶಾಮಿದ್ ಸಾಬ್ ಉಪಾಧ್ಯಕ್ಷೆ ಗಂಗಮ್ಮ ಭೋವಿ ಆಯ್ಕೆ
ತುವಿ೯ಹಾಳ: ಪಟ್ಟಣ ಪಂಚಾಯತ್ ಜಿದ್ದಾಜಿದ್ದಿನ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ನಡೆದ ಕಸರತ್ತಿಗೆ ಅಂತಿಮ ತೆರೆ ಬಿದ್ದಿದೆ. ಅಧ್ಯಕ್ಷ ಸ್ಥಾನಕ್ಕೆ ಕೆ.ಶಾಮಿದ್ ಸಾಬ್ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಗಂಡ ಯಲ್ಲಪ್ಪ ಭೋವಿ ಆಯ್ಕೆಯಾಗಿದ್ದಾರೆ.
ದಿನಾಂಕ 29 /8/ 2024ರಂದು ನಡೆಯಬೇಕಿದ್ದ ಪ. ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಬೆಳಗ್ಗೆ 9:00 ರಿಂದ 11 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿತ್ತು 11:15 ಗಂಟೆ ಯಾದರೂ ಒಂದು ನಾಮಪತ್ರ ಸಲ್ಲಿಕೆಯಾಗದೆ ಇರುವುರಿಂದ ಚುನಾವಣಾಧಿಕಾರಿ ತಹಸೀಲ್ದಾರ್ ಅರುಣ್ ಕುಮಾರ್ ಎಚ್ ಚುನಾವಣೆ ದಿನಾಂಕವನ್ನು ಮುಂದೂಡಿದರು.ಮತ್ತು ಇಂದು
30/8/2024ರಂದು ಚುನಾವಣೆಗೆ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಸಮಯ ನಿಗದಿ ಮಾಡಲಾಗಿತ್ತು
ಅಧ್ಯಕ್ಷ ಸ್ಥಾನಕ್ಕೆ ಕೆ.ಶಾಮಿದ್ ಸಾಬ್ ನಾಮಪತ್ರ ಸಲ್ಲಿಸಿದರು ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಗಂಡ ಯಲ್ಲಪ್ಪ ಭೋವಿ ನಾಮಪತ್ರ ಸಲ್ಲಿಸಿದರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ಒಂದು ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಅಧ್ಯಕ್ಷರಾಗಿ ಶಾಮಿದ್ ಸಾಬ್ ಚೌದರಿ ಉಪಾಧ್ಯಕ್ಷರಾಗಿ ಗಂಗಮ್ಮ ಗಂಡ ಯಲ್ಲಪ್ಪ ಭೋವಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸಿಲ್ದಾರ್ ಅರುಣ್ ಕುಮಾರ್ ಎಚ್ ತಿಳಿಸಿದರು. ನಂತರ ಮಾತನಾಡಿದ ಅವರು ಎರಡು ವರ್ಷ ಮೂರು ತಿಂಗಳ ಕಾಲ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನ ಖಾಲಿ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ನನ್ನನ್ನು ಪಟ್ಟಣ ಪಂಚಾಯತಿ ಆಡಳಿತ ಅಧಿಕಾರಿಯನ್ನಾಗಿ ನೇಮಿಸಿದ್ದರು ಇಲ್ಲಿಯವರೆಗೆ ನನಗೆ ಸಹಕಾರ ನೀಡಿದ ಶಾಸಕರಿಗೆ ಸಾರ್ವಜನಿಕರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಸನ್ಮಾನ ಪಟ್ಟಣ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಕೆ. ಶಾಮಿದ್ ಸಾಬ್ ಗಂಗಮ್ಮ ಗಂಡ ಯಲ್ಲಪ್ಪ ಭೋವಿ ಇವರಿಂದ ಶಾಸಕರಾದ ಆರ್.ಬಸನಗೌಡ ತುರುವಿಹಾಳ ಮಲ್ಲನಗೌಡ ದೇವರಮನಿ, ಫಾರಕ್ ಸಾಬ್ ಖಾಜಿ, ಮೌಲಪ್ಪಯ್ಯ ಗುತ್ತೇದಾರ್,ಉಮರ್ ಸಾಬ್, ಮತ್ತು ಪ.ಪಂ.ಎಲ್ಲಾ ಸದಸ್ಯರುಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಸಾಬಣ್ಣ ಕಟ್ಟೆಕಾರ್,ಮಲ್ಲನಗೌಡ ದೇವರಮನಿ, ಫಾರೂಖ್ ಸಾಬ್ ಖಾಜಿ,ಮೌಲಪ್ಪಯ್ಯ ಗುತ್ತೇದಾರ್,ಉಮರ್ ಸಾಬ್, ಆರ್.ಸಿದ್ದನಗೌಡ,ಆರ್ ಶಿವನಗೌಡ, ಬಾಪುಗೌಡ ದೇವರಮನಿ,ಕರಿಯಪ್ಪ ವಿರುಪಾಪುರ, ಶರಣಪ್ಪ ಹೊಸಗೌಡ್ರು,ಮರಿಯಪ್ಪ ಶಿಕ್ಷಕರು,ಫಕೀರಪ್ಪ ಭಂಗಿ, ಅರವಿಂದ ರೆಡ್ಡಿ, ರಾಮಣ್ಣ ಉಪ್ಪಾರ್,ಶಂಕರಗೌಡ ದೇವರಮನಿ, ಶರಣಬಸವ ಗಡೆದ್,ಸಿರಾಜ್ ಪಾಷಾ ದಳಪತಿ, ಅಬು ತುರಾಬ್ ,ಮಹಾಂತೇಶ್ ಸಜ್ಜನ್, ಸೋಮನಾಥ್ ಮಾಟುರ್,ಶಾಮಿದ್ ಅಲಿ ,ಮತ್ತು ಪ.ಪಂ.ಸದಸ್ಯರು ಊರಿನ ಹಿರಿಯರು ಹಾಗೂ ಯುವಕರು ಭಾಗಿಯಾಗಿದ್ದರು




