4 ಪ್ಲಾಟ್ ಗಳನ್ನು ಕರಾರು ಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್

ನಾಲ್ಕು ಪ್ಲಾಟ್ ಗಳನ್ನು ಕರಾರುಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್
ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹೊಂಬಾಳೆಯ ನಿಲಯ ಜನಪದ ರಸ್ತೆ ಸರ್.ಎಂ.ವಿ.ಲೇಔಟ್ ಗಂಗ್ರೋತ್ರಿ ಲೇಔಟ್ ರಾಮಸಂದ್ರ, ಕೆಂಗೇರಿ ಹೋಬಳಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಮತ್ತು ತಿಮ್ಮಯ್ಯರವರು ಜೊತೆಗೊಡಿ ಸರ್ವೆ ನಂ 102/1 ಮತ್ತು 103/1 ಸಾಯಿ ಗಂಗ್ರೋತ್ರಿ ಹಿಲ್ ಕ್ರೈಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಎಂ.ಎಸ್.ಮಾಬಾ ಕಾರ್ಪೋರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪ್ಲಾಟ್ ನಂಬರ 713, 517, 705, 313ಗಳಿಗೆ ಮಾರಾಟ ಒಪ್ಪಂದವಾಗಿದೆ.ತಲಾ ಒಂದು ಪ್ಲಾಟ್ 20ಲಕ್ಷದಂತೆ ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಾವತಿ ಮಾಡಿ ಕರಾರು ಒಪ್ಪಂದ ಪತ್ರ ಮಾಡಿರುತ್ತಾರೆ. ನಂತರ ಕರಾರುಪತ್ರಕ್ಕೆ ಮಾನ್ಯತೇ ನಿಡದೇ ಇನ್ನೂಬ್ಬರಿಗೆ ನಾಲ್ಕು ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ ಇದರ ವಿರುದ್ದ ವಕೀಲರುಗಳಾದ ಆನಂದ್ ವಿ. ಮತ್ತು ವಕೀಲೆ ದಿವ್ಯರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ಅಶ್ವಥ್ ನಾರಾಯಣ್ ಮತ್ತು ಎಂ.ತಿಮ್ಮಯ್ಯರವರು ಕರಾರು ಒಪ್ಪಂಡ ಮಾಡಿಕೊಂಡು ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಡೆದುಕೊಂಡು ನಂತರ ಇನ್ನೂಬ್ಬರಿಗೆ ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆಎಂದು ದೂರಿದರು.
ವರದಿ. ಮಂಜುಳಾ ರೆಡ್ಡಿ.



