ಸಂಪಾದಕೀಯ

ನಜೀರ್ ಅಹಮ್ಮದ್ ಶೇಖ ಅವರಿಗೆ ವಿಧಾನ ಪರಿಷತ್ ಗೆ ಅವಕಾಶ ನೀಡಬೇಕು – ಮೌಲಾಲಿ ಸಾಬ್ ಬೆಂಡಿಗೇರಿ ಬೆಂಗಳೂರು, ಜು. 7.

ನಜೀರ್ ಅಹಮ್ಮದ್ ಶೇಖ ಅವರಿಗೆ ವಿಧಾನ ಪರಿಷತ್ ಗೆ ಅವಕಾಶ ನೀಡಬೇಕು – ಮೌಲಾಲಿ ಸಾಬ್ ಬೆಂಡಿಗೇರಿ ಬೆಂಗಳೂರು, ಜು. 7: ನಜೀರ್ ಅಹಮ್ಮದ್ ಶೇಖ ಅವರಿಗೆ ವಿಧಾನ ಪರಿಷತ್ ಗೆ ಅವಕಾಶ ನೀಡಬೇಕು ಎಂದು ಮೌಲಾಲಿ ಸಾಬ್ ಬೆಂಡಿಗೇರಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸರ್ಕಾರವನ್ನು ಡಿಮಾಂಡ್ ಮಾಡಿದರು . ಸಮಾಜಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ನಜೀರ್ ಅಹಮ್ಮದ್ ಶೇಖ ಅವರನ್ನು ಮುಂಬರುವ ವಿಧಾನ ಪರಿಷತ್ (ಎಂಎಲ್‌ಸಿ) ನಾಮನಿರ್ದೇಶನ ಕೋಟಾದಡಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಕಿತ್ತೂರು ಕರ್ನಾಟಕ ಮುಸ್ಲಿಂ ವೇದಿಕೆಯ ಸರ್ವ ಸದಸ್ಯರು ಒತ್ತಾಯಿಸಿದರು.
ವೇದಿಕೆಯ ಮುಖಂಡರು, ರಾಜ್ಯದ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರೀಪ್ರಸಾದ್ ಅವರು ನಜೀರ್ ಅಹಮ್ಮದ್ ಶೇಖ ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂದು ಸರ್ಕಾರವನ್ನು ಡಿಮಾಂಡ್ ಮಾಡಿದರು.
ನಜೀರ್ ಅಹಮ್ಮದ್ ಶೇಖ ಅವರು ಹಲವು ವರ್ಷಗಳಿಂದ ಸಮಾಜಸೇವೆ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆಗೆ ಮಹತ್ವದ ಪಾತ್ರ ವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ವಿವಿಧ ಹಂತಗಳಲ್ಲಿ ಪಕ್ಷ ಸಂಘಟನೆಗಾಗಿ ದುಡಿದ ಅನುಭವ ಹೊಂದಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ನಿಷ್ಠೆ , ಸಂಘಟನಾ ಅನುಭವ, ಜನಸೇವೆ ಮತ್ತು ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಸಮರ್ಥ ಪ್ರತಿನಿಧಿತ್ವ ದೊರೆಯಲಿದೆ ಎಂದು ಮುಖಂಡರು ತಿಳಿಸಿದರು.
ಕಿತ್ತೂರು ಕರ್ನಾಟಕ ಮುಸ್ಲಿಂ ವೇದಿಕೆಯ ಸರ್ವ ಸದಸ್ಯರು ಹಾಗೂ ವಿವಿಧ ಮುಖಂಡರು ಭಾಗವಹಿಸಿ, ಶ್ರೀ ನಜೀರ್ ಅಹಮ್ಮದ್ ಶೇಖ ಅವರಿಗೆ ವಿಧಾನ ಪರಿಷತ್ ನಾಮನಿರ್ದೇಶನದಲ್ಲಿ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರಿಕಾಗೋಷ್ಟಿ ಇಂದ ವಿನಂತಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ನಜೀರ್ ಅಹಮದ್ ಶೇಕ್, ಊ . ಟಿ .ನದಾಫ್ , ಎಂ . ಡಿ . ಮುನಾಫ್ ಮುಂತಾದವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button