ಕರಾಟೆ ಮತ್ತು ಯೋಗ ಎರಡೂ ವಿಭಿನ್ನ ಸ್ವರೂಪದ ವಿಷಯಗಳು. – ಕರಾಟೆ ಮೊಹಮದ್.

ಕರಾಟೆ ಮತ್ತು ಯೋಗ ಎರಡೂ ವಿಭಿನ್ನ ಸ್ವರೂಪದ ವಿಷಯಗಳಾಗಿದ್ದು, ಅವುಗಳಿಗೆ ಪ್ರತ್ಯೇಕ ಪರಿಣಿತಿ ಬೇಕು – ಗೊಂದಲ ಸೃಷ್ಟಿ ಸಬೇಡಿ – ಕರಾಟೆ ಮೊಹಮದ್
ಬೆಂಗಳೂರು, ಜು. 13: ಕರಾಟೆ ಮತ್ತು ಯೋಗ ಎರಡೂ ವಿಭಿನ್ನ ಸ್ವರೂಪದ ವಿಷಯಗಳಾಗಿದ್ದು, ಅವುಗಳಿಗೆ ಪ್ರತ್ಯೇಕ ಪರಿಣಿತಿ, ತರಬೇತಿ ಹಾಗೂ ಬೋಧನಾ ವಿಧಾನ ಅಗತ್ಯವಿದೆ. ಹೀಗಾಗಿ ಎರಡೂ ವಿಷಯಗಳನ್ನು ಒಬ್ಬರೇ ಶಿಕ್ಷಕರಿಂದ ಪರಿಣಾಮಕಾರಿಯಾಗಿ ಬೋಧಿಸುವುದು ಸಾಧ್ಯವಿಲ್ಲ. ಎಂದು ಇಂದು ರಾಜ್ಯ ಕರಾಟೆ ಶಿಕ್ಷಕರ ಸಂಘ (ರಿ.), ಕರ್ನಾಟಕ ವತಿಯಿಂದ ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಯೋಗ ಮತ್ತು ಕರಾಟೆ ತರಬೇತಿಯನ್ನು ಒಬ್ಬರೇ ಶಿಕ್ಷಕರಿಂದ ನಡೆಸುವ ಆದೇಶವನ್ನು ಮರು ಪರಿಶೀಲಿಸುವ ಕುರಿತು ಡಿಮಾಂಡ್ ಮಾಡಿದರು. ಸಂಘದ ಪದಾಧಿಕಾರಿಗಳು, ರಾಜ್ಯದ ಸುಮಾರು 590 ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ….
ಇತ್ತೀಚಿನ ದಿನಗಳಲ್ಲಿ ಮಹಿಳೆಯರುರಾಜ್ಯ ಕರಾಟೆ ಶಿಕ್ಷಕರ ಸಂಘ ಸರ್ಕಾರದ ಈ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸುತ್ತದೆ.
ಈಗಾಗಲೇ ಜೂನ್ 2026ರಿಂದಲೇ ಶಿಕ್ಷಕರಿಗೆ ಪರಿಚಯಾತ್ಮಕ ತರಬೇತಿ ನೀಡಿ, ವೇಳಾಪಟ್ಟಿ ಸಿದ್ಧಪಡಿಸಿ ಬೋಧನಾ ಪ್ರಕ್ರಿಯೆ ಆರಂಭಿಸಬೇಕಾಗಿತ್ತು. ಆದರೆ ಯೋಗ ಮತ್ತು ಕರಾಟೆ ತರಬೇತಿಯನ್ನು ಒಂದೇ ಶಿಕ್ಷಕರಿಂದ ನಡೆಸುವ ಗೊಂದಲದಿಂದಾಗಿ ಅರ್ಹ ತರಬೇತುದಾರರ ಕೊರತೆ ಉಂಟಾಗಿದ್ದು, ಅನೇಕ ಶಾಲೆಗಳಲ್ಲಿ ಈವರೆಗೆ ತರಬೇತಿ ಆರಂಭವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಯೋಜನೆಯ ಅನುಷ್ಠಾನವೇ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗೊಂದಲವನ್ನು ವ್ಯಕ್ತಪಡಿಸಿದರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಹಂತದಲ್ಲೇ ಆತ್ಮರಕ್ಷಣೆಯ ತರಬೇತಿ ಕಡ್ಡಾಯವಾಗಬೇಕು. ಯೋಗ ಮತ್ತು ಕರಾಟೆ ಶಿಕ್ಷಣದಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ–2020)ಯಲ್ಲಿಯೂ ಕ್ರೀಡೆ ಹಾಗೂ ಜೀವನ ಕೌಶಲ್ಯಗಳಿಗೆ ಆದ್ಯತೆ ನೀಡಿರುವುದರಿಂದ ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಯೋಗ ಮತ್ತು ಕರಾಟೆ ತರಬೇತಿಯನ್ನು ಶಾಶ್ವತವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಹಾಗೂ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ಮನವಿಯನ್ನು ಜಾರಿಗೆ ತಂದು, ಕರಾಟೆ ಶಿಕ್ಷಕರ ಸೇವೆಯನ್ನು ನಿಯಮಿತಗೊಳಿಸಿ ಸೂಕ್ತ ಗೌರವಧನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರು ಶ್ರೀ ಮಹಮ್ಮದ್ ನದೀಮ್, ಗೌರವಾಧ್ಯಕ್ಷರು ಲಕ್ಷ್ಮಿನಾರಾಯಣ ಆಚಾರ್ಯ, ಪ್ರದಾನ ಕಾರ್ಯದರ್ಶಿ ಕಟ್ಟೇಸ್ವಾಮಿ, ಕೋಶಾಧಿಕಾರಿ ಶಿವಕುಮಾರ್ ಮತ್ತು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಕರಾಟೆ ಶಿಕ್ಷಕರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ




