ದೂರ ದೃಷ್ಟಿಯ ಶಿಕ್ಷಣದ ದಾರ್ಶನಿಕ. ಲಿಂಗೈಕ್ಯ ಪೂಜ್ಯ ಶ್ರೀ ಡಾ.ಶರಣಬಸವಪ್ಪ ಅಪ್ಪಾಜಿ 8 ನೇ ಮಹಾದಾಸೋಹ ಪೀಠಾಧಿಪತಿಗಳು *ಪೂಜ್ಯರಿಗೆ ಹೃದಯಪೂರ್ವಕ ನಮನಗಳು.

*ಕಲಬುರಗಿ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಿದ ದೂರ ದೃಷ್ಟಿಯ ಶಿಕ್ಷಣದ ದಾರ್ಶನಿಕ. ಲಿಂಗೈಕ್ಯ ಪೂಜ್ಯ ಶ್ರೀ ಡಾ.ಶರಣಬಸಪ್ಪಾಜೀ 8 ನೇ ಮಹಾದಾಸೋಹ ಪೀಠಾಧಿಪತಿಗಳು, ಶರಣಬಸವೇಶ್ವರ ಸಂಸ್ಥಾನ ಕಲ್ಬುರ್ಗಿ*
**ಪೂಜ್ಯರಿಗೆ ಹೃದಯಪೂರ್ವಕ ನಮನಗಳು.*
*
1) ಮಹಿಳೆಯರ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣದ ದಾರಿಯಲ್ಲಿ ದಾರಿ ದೀಪವಾಗಿ ಮುನ್ನಡೆದ ಮಹನೀಯರು ಡಾ. ಅಪ್ಪಾಜಿ.
2)ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲೆಗಳು ಪದವಿ ಕಾಲೇಜುಗಳು ಹಾಗೂ ವೃತ್ತಿಪರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮಹಿಳಾ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದರು.
3) ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದವರಲ್ಲಿ ಡಾ. ಅಪ್ಪಾಜಿಯವರು ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿಯೇ ಎರಡನೇ ಮಹಿಳಾ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು.
4) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಡಾ. ಅಪ್ಪಾಜಿಯವರು ಶೈಕ್ಷಣಿಕವಾಗಿ ಹಿಂದುಳಿದಿದ್ದ ಕಲಬುರಗಿ ಭಾಗವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಅಪೂರ್ವ ಕೊಡುಗೆ ನೀಡಿದರು.
5) ಡಾ. ಅಪ್ಪಾಜಿಯವರ ಶೈಕ್ಷಣಿಕ ಸೇವೆ ಕೇವಲ ಸಂಸ್ಥೆಗಳ ನಿರ್ಮಾಣಕ್ಕೆ ಸೀಮಿತವಾಗಿರಲಿಲ್ಲ. ಅದು ಸಾವಿರಾರು ಕುಟುಂಬಗಳ ಬದುಕಿನಲ್ಲಿ ಜ್ಞಾನದ ಬೆಳಕು ಬೆಳಗಿಸಿದ, ಮಹಿಳೆಯರಿಗೆ ಆತ್ಮವಿಶ್ವಾಸ ನೀಡಿದ ಮತ್ತು ಕಲಬುರಗಿ ಭಾಗದ ಭವಿಷ್ಯವನ್ನೇ ರೂಪಿಸಿದ ಮಹಾನ್ ಶೈಕ್ಷಣಿಕ ಕ್ರಾಂತಿಯಾಗಿತ್ತು.
6) ಕಲಬುರಗಿ ಭಾಗದ ಶೈಕ್ಷಣಿಕ ಸಬಲೀಕರಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸಮರ್ಪಿಸಿದ ಮಹಾನ್ ಶಿಕ್ಷಣ ಸೇವಾ ಧುರೀಣರು ಡಾ. ಅಪ್ಪಾಜೀ.
7) ಪೂಜ್ಯ ಡಾ. ಅಪ್ಪಾಜೀಯವರಿಂದ ಸಂಸತ್ತಿನ ಆವರಣದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿ ಅನಾವರಣ.
8) ಕಲಬುರ್ಗಿ ಭಾಗದಲ್ಲಿಯೇ ಪ್ರಥಮ ಬಾರಿಗೆ ಸಾರ್ವಜನಿಕ ಶಾಲೆಯನ್ನು ಸ್ಥಾಪಿಸಿದ ಕೀರ್ತಿ ಡಾ. ಅಪ್ಪಾಜಿಯವರಿಗೆ ಸಲ್ಲುತ್ತದೆ.
9) ಡಾ. ಅಪ್ಪಾಜಿಯವರ ದೂರ ದೃಷ್ಟಿಯ ಫಲವಾಗಿ ಸ್ಥಾಪನೆಯಾದ ಎಸ್. ಬಿ.ಆರ್. ಕಾಂಪೋಸಿಟ್ ಪಿ.ಯು. ಕಾಲೇಜು, ಗುಣಮಟ್ಟದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಪ್ರತಿವರ್ಷದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಮೂಲಕ ಈ ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿದ್ದಾರೆ.
10) ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಡಾ. ಅಪ್ಪಾಜಿಯವರು ಗುಲ್ಬರ್ಗ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದರು.
11) ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಬಹುಶಿಸ್ತೀಯ ವಿಶ್ವವಿದ್ಯಾಲಯವಾದ ಶರಣಬಸವ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು.
12) ಶರಣಬಸವ ವಿಶ್ವವಿದ್ಯಾಲಯ ಹಾಗೂ ಅದರ ವಿವಿಧ ಕಾಲೇಜುಗಳ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಪುರುಷಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿರುವುದು ಡಾ. ಅಪ್ಪಾಜಿಯವರ ಮಹಿಳಾ ಶಿಕ್ಷಣದ ದೂರ ದೃಷ್ಟಿಯ ಸಾಕ್ಷಿಯಾಗಿದೆ. ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯಲ್ಲಿಯೂ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ.
*ಶ್ರೀ ಬಸವರಾಜ್. ಕಾರ್ಯದರ್ಶಿಗಳು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಪೂಜ್ಯ ಡಾಕ್ಟರ್ ಶರಣಬಸವ ಅಪ್ಪಾಜಿ ಫ್ಯಾಮಿಲಿ ಟ್ರಸ್ಟ್ ಶರಣಬಸವ ವಿಶ್ವವಿದ್ಯಾಲಯ* ಕಲಬುರ್ಗಿ ಕಲ್ಯಾಣ ಕರ್ನಾಟಕ.



