ಪತ್ರಿಕೋದ್ಯಮ

ಒಕ್ಕಲಿಗ ಬರೆಯಿಸಿ, ಉಪಜಾತಿಗಳನ್ನು ಬರೆಸಬೇಕಾಗಿದೆ – ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳ ಕರೆ. ಬೆಂಗಳೂರು .

ಒಕ್ಕಲಿಗ ಬರೆಸಿ ಉಪಜಾತಿಗಳನ್ನು ಬರೆಸಬೇಕಾಗಿದೆ – ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳ ಕರೆ. ಬೆಂಗಳೂರು . ಒಕ್ಕಲಿಗ ಬರೆಸಿ ಉಪಜಾತಿಗಳನ್ನು ಬರೆಸಬೇಕಾಗಿದೆ ಎಂದು ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಒಕ್ಕಲಿಗ ಜನಗಕ್ಕೆ ಕರೆ ನೀಡಿದ್ದಾರೆ . ಹಿಂದುಳಿದ ವರ್ಗಗಳ ಆಯೋಗ ಉಪಜಾತಿಗಳನ್ನು ಬರೆಸಬೇಕಾಗಿದೆ. ಇದರಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯ ತನ್ನ ಉಪಜಾತಿಗಳನ್ನು ಗುರುತಿಸಲು ಅಸಡ್ಡೆ ವ್ಯಕ್ತಪಡಿಸುತ್ತಿರುವ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಜಾತಿ ಮತ್ತು ಉಪಜಾತಿ ಎರಡನ್ನು ಒಕ್ಕಲಿಗ ಬರೆಸಿ ಎಂದು ಪ್ರಚಾರ ಮಾಡುತ್ತಿರುವವರ ನಡೆಯನ್ನು ಖಂಡಿಸಿದ್ದಾರೆ.
ಒಕ್ಕಲಿಗ ಸಮುದಾಯ ಜಾತಿ ಕಾಲಂ 9ರಲ್ಲಿ ಒಕ್ಕಲಿಗ ಕೋಡ್ ನಂ. 1541 ಎಂದು, ಉಪಜಾತಿ ಕಾಲಂ 10ರಲ್ಲಿ ಗಂಗಡ್ಯಾರ್ ಒಕ್ಕಲಿಗರು ಕೋಡ್ 356, ವಾಸ ಒಕ್ಕಲಿಗರು 290, ಮರಸು ಒಕ್ಕಲಿಗರು 939, ಹಳ್ಳಿಕಾರ್ ಒಕ್ಕಲಿಗರ 453, ರೆಡ್ಡಿ ಒಕ್ಕಲಿಗರು 1225 ಹೀಗೆ ತಮ್ಮ ಉಪಜಾತಿಯ ಕೋಡ್ ಸಹಿತ ಬರೆಸುವಂತೆ ಆ ಮುಖಾಂತರ ಶತ ಶತಮಾನಗಳಿಂದ ಬಂದಿರುವ ಒಕ್ಕಲಿಗೆ ಉಪ ಪಂಗಡಗಳ ಅಸ್ತಿತ್ವ ಉಳಿಸುವಂತೆ ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳು ಒಕ್ಕಲಿಗ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಜಾತಿ ಮತ್ತು ಉಪಜಾತಿ ಕಾಲಂ ಎರಡರಲ್ಲು ಒಕ್ಕಲಿಗ ಎಂದು ಬರೆಸುವಂತೆ ತಪ್ಪು ಪ್ರಚಾರ ಮಾಡುತ್ತಿರುವವರು ಸಮುದಾಯದ ಹಾದಿ ತಪ್ಪಿಸುತ್ತಿದ್ದಾರೆ. ಸುಮಾರು 1800 ವರ್ಷಗಳ ಇತಿಹಾಸವಿರುವ ಗಂಗಡ್ಯಾರ್ ಒಕ್ಕಲಿಗರು, ಹಾಗೆ ನಾಡಪ್ರಭು ಕೆಂಪೇಗೌಡರ ವಂಶಸ್ಥರಾದ ಮರಸು ಒಕ್ಕಲಿಗರ ಇತಿಹಾಸವನ್ನು ನಾಶಮಾಡಲು ಹೊರಟಿದ್ದಾರೆ. ಈ ಉಪ ಪಂಗಡಗಳ ಚರಿತ್ರೆ ಮರೆಯಾಗಬೇಕೆ? ಹಾಗಾಗಲು ಬಿಡದೆ ಗಂಗಡ್ಯಾರ್, ಮರಸು, ದಾಸ ಇನ್ನಿತರ ಉಪ ಪಂಗಡಗಳು, ತಪ್ಪು ಪ್ರಚಾರಗಳಿಗೆ ಕಿವಿಗೊಡದೆ ಎಚ್ಚೆತ್ತುಕೊಂಡು ತಮ್ಮ ಉಪಜಾತಿಗಳನ್ನು ಬರೆಸಬೇಕಾಗಿದೆ.
ಜಾತಿ ಮತ್ತು ಉಪಜಾತಿ ಕಾಲಂಗಳಲ್ಲಿ ಬೇರೆ ಬೇರೆ ಬರೆಸಿದರೆ ಒಕ್ಕಲಿಗರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸುತ್ತಿರುವುದರಿಂದ ಯಾವ ಕಾರಣಕ್ಕೂ ಒಕ್ಕಲಿಗರ ಸಂಖ್ಯೆ ಕಡಿಮೆಯಾಗುವುದಿಲ್ಲ. ಹಾಗೂ ಜಾತಿ ಮತ್ತು ಉಪಜಾತಿ ಎರಡರಲ್ಲು ಒಕ್ಕಲಿಗ ಎಂದು ಬರೆಸಿದ ಮಾತ್ರಕ್ಕೆ ಸಂಖ್ಯೆ ದುಪಟವಾಗುವುದಿಲ್ಲ. ಉಪಜಾತಿ ಕಾಲಂನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದರಿಂದ ಒಕ್ಕಲಿಗ ಉಪಜಾತಿಗಳ ನಿಖರ ಸಂಖ್ಯೆಯು ತಿಳಿಯುತ್ತದೆ.
ಈ ಸಮೀಕ್ಷೆಯಲ್ಲಿ ಉಪಜಾತಿ ಬರೆಸದೆ ಹೋದರೆ, ಮುಂದಿನ ಪೀಳಿಗೆ ತನ್ನ ಮೂಲಜಾತಿಯನ್ನು ಮರೆಯುತ್ತದೆ ಮತ್ತು ಸರ್ಕಾರಿ ದಾಖಲೆಗಳಲ್ಲು ಗಂಗಡ್ಯಾರ್, ಮರಸು, ದಾಸ, ಹಳ್ಳಿಕಾರ್ ಹೀಗೆ ಅನೇಕ ಉಪಜಾತಿಗಳು ಕಣ್ಮರೆಯಾಗುತ್ತವೆ ಮತ್ತು ಉಪಜಾತಿಗಳನ್ನು ಗುರುತಿಸಲು ಪ್ರತ್ಯೇಕ ಸಮೀಕ್ಷೆಯನ್ನು ನಡೆಸುವುದಿಲ್ಲ. ಹಾಗಾಗಿ ಒಕ್ಕಲಿಗ ಸಮುದಾಯ ಎಚ್ಚೆತ್ತುಕೊಂಡು ತನ್ನ ಉಪಚಾತಿಗಳನ್ನು ಈ ಸಮೀಕ್ಷೆಯಲ್ಲಿ ಗುರುತಿಸಬೇಕಾಗಿದೆ ಎಂದು ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳು ಒಕ್ಕಲಿಗ ಸಮುದಾಯಕ್ಕೆ ಕರೆ ನೀಡಿದ್ದಾರೆ, ಈಗಾಗಲೇ ಕೇಂದ್ರ ಸರ್ಕಾರಾದ ಮೀಸಲಾತಿಯಲ್ಲಿ ಒಕ್ಕಲಿಗ ಉಪ ಪಂಗಡಗಳಾದ ಗಂಗಡ್ಯಾರ್, ಮರಸು, ದಾಸ, ಹಳ್ಳಿಕಾರ್, ಸರ್ಪ, ನಾಮಧಾರಿಗಳಿಗೆ ಅವಕಾಶ ಇದೆ. ಆದರೆ ಒಕ್ಕಲಿಗರಲ್ಲಿ ಉಪಜಾತಿ ಸಹಿತ ಜಾತಿ ಪ್ರಮಾಣಪತ್ರ ವಿರದ ಕಾರಣ ಇದರಿಂದ ವಂಚಿತರಾಗುತ್ತಿದ್ದು ಒಕ್ಕಲಿಗರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿ ದೆ ಎಂದು ವಿನೋದ್ ಕುಮಾರ್ ಗೌಡ ಅವರು ಹೆಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು
ಪೂಜ್ಯ ಶ್ರೀ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳು ಮತ್ತು ರಾಜ್ಯ ರೈತ ಸಂಘ , ಹಸಿರು ಸೇನೆ ರಾಜ್ಯಾಧ್ಯಕ್ಷರು ಬಿ.ಕೆ. ವಿನೋದ್ ಕುಮಾರ್ ಗೌಡ, ದೇವರಾಜ್ , ಆನಂದ್ ಕುಮಾರ್ ಮುಂತಾದವರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button