ಪತ್ರಿಕೋದ್ಯಮ

ಕನಕಗಿರಿಯ ಐತಿಹಾಸಿಕ ತಾಣಗಳ ಪರಿಶೀಲನೆಗೆ ಡೆಕ್ಕನ್ ಹೆರಿಟೇಜ್ ಆಫ್ ಇಂಡಿಯಾ ತಂಡ ಭೇಟಿ.

ಕನಕಗಿರಿಯ ಐತಿಹಾಸಿಕ ತಾಣಗಳ ಪರಿಶೀಲನೆಗೆ ಡೆಕ್ಕನ್ ಹೆರಿಟೇಜ್ ಆಫ್ ಇಂಡಿಯಾ ತಂಡ ಭೇಟಿ

ಕನಕಗಿರಿ, ಜು. 27: ಕನಕಗಿರಿ ಪಟ್ಟಣದ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉದ್ದೇಶದಿಂದ ಡೆಕ್ಕನ್ ಹೆರಿಟೇಜ್ ಆಫ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳಾದ ಇಂದ್ರಜಿತ್ ಸಾವಂತ್, ಸ್ಟಿಫಿನ್ ಬ್ಲಾಚ್ ಸ್ಯಾಲೋಜ್ ಹಾಗೂ ಡಾ. ಹೆಲಿನ್ ಫಿಲಂ ಗ್ರೀಕ್ ಅವರು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕನಕಗಿರಿಗೆ ಭೇಟಿ ನೀಡಿ ವಿವಿಧ ಐತಿಹಾಸಿಕ ಸ್ಥಳಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಯಾದ ಚಂದ್ರಶೇಖರ್ ಗಾಳಿ ಅವರು ಕನಕಗಿರಿಯ ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಮುಖ ತಾಣಗಳ ಕುರಿತು ತಂಡಕ್ಕೆ ಮಾಹಿತಿ ನೀಡಿದರು.

ಬಳಿಕ ತಂಡವು ವೆಂಕಟಪತಿ ಬಾವಿ, ಪುಷ್ಕರಣಿ, ತ್ರಿವೇಣಿ ಸಂಗಮ ಸೇರಿದಂತೆ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅವುಗಳ ಮಹತ್ವ ಮತ್ತು ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿತು. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿದ್ಧಲಿಂಗಯ್ಯ ಸ್ವಾಮಿ ಅವರು ದೇವಸ್ಥಾನ, ಪುಷ್ಕರಣಿ ಹಾಗೂ ವೆಂಕಟಪತಿ ಬಾವಿಯ ಇತಿಹಾಸ, ಧಾರ್ಮಿಕ ಮಹತ್ವ ಹಾಗೂ ಪಾರಂಪರಿಕ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಐತಿಹಾಸಿಕ ತಾಣಗಳ ಸಂರಕ್ಷಣೆ, ಜೀರ್ಣೋದ್ಧಾರ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಕುರಿತು ತಂಡವು ಪರಿಶೀಲನೆ ನಡೆಸಿತು. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಈ ತಾಣಗಳನ್ನು ಸಂರಕ್ಷಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button