ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆ ಪೂರ್ವಭಾವಿ ಸಭೆಗೆ ಕರೆ ವಿ.ಮಾನಸೂದನ್

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆ ಪೂರ್ವಭಾವಿ ಸಭೆಗೆ ಕರೆ ವಿ.ಮಾನಸೂದನ್
ಕನಕಗಿರಿ ತಾಲೂಕು ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ವಿ. ಮಧುಸೂದನ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:16-02-2024 ರ ಗುರುವಾರ ರಂದು ಸಂಜೆ 04-00 ಗಂಟೆಗೆ ಸರಿಯಾಗಿ ಸಿ ಆರ್ ಸಿ ಕನಕಗಿರಿ ತಾಲೂಕು ನೌಕರ ಸಂಘದ ಕಚೇರಿ ಬಾಲಕರ ಮಾದರಿ ಶಾಲೆ ಸಭಾಂಗಣದಲ್ಲಿ ತಾಲೂಕು ಕಾರ್ಯಕಾರಿ ಸಮಿತಿ ಸಭೆ ಹಾಗೂ ವೃಂದ ಸಂಘಗಳ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು
ನಂತರ ಪತ್ರಿಕಾಗೋಷ್ಠಿ ಮುಖಾಂತರ ತಿಳಿಸುವುದೇನೆಂದರೆ ದಿನಾಂಕ:27-02-2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ವಿವರವಾಗಿ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ಎಲ್ಲಾ ಕರ್ನಾಟಕ ಸರ್ಕಾರಿ ನೌಕರರು ಪಾಲ್ಗೊಳ್ಳಬೇಕೆಂದು ತಿಳಿಸಿದರು
ಮತ್ತು ಇದೆ ದಿನಾಂಕ 10/2/2024 ರಂದು ಮಲೆ ಮಹಾದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯಗಳಾದ ಪೂರ್ಣ ಪ್ರಮಾಣದಲ್ಲಿ 7ನೇ ವೇತನ ಅನುಷ್ಠಾನ, ನಡೆಸಿರುತ್ತಾರೆ ಮತ್ತು NPS ರದ್ದು ಪಡಿಸಿ OPS ಜಾರಿ ಮತ್ತು ಉಚಿತ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಕುರಿತು ಚರ್ಚೆ ಮಾಡುವವರ ಕುರಿತಾಗಿ ತಿಳಿಸಿದರು . 2024 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಕುರಿತು ಚರ್ಚೆ ಎನ್ನು ಮಾಡಬೇಕೆಂದು ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸಂಘದ ಸದಸ್ಯರ ಜೊತೆಗೆ ರಾಜ್ಯಾಧ್ಯಕ್ಷರ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಷಯಗಳು ಕುರಿತಾಗಿ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ನಿರ್ಣಯಗಳನ್ನು ಚರ್ಚಿಸಬೇಕಾಗುತ್ತದೆ
ಆದ್ದರಿಂದ ಸದರಿ ಸಭೆಗೆ ಕರ್ನಾಟಕ ನೌಕರರ ಸಂಘದ ಕನಕಗಿರಿ ತಾಲೂಕು ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ವೃಂದ ಸಂಘಗಳ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ತಪ್ಪದೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸ ಬೇಕೆಂದು ವಿ ಮಧುಸೂದನ್ ತಾಲೂಕ ಅಧ್ಯಕ್ಷರು ಪತ್ರಿಕಾಗೋಷ್ಠಿ ಮೂಲಕ ಕೋರಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




