“ಕಾಲು ಎಳೆಯುವುದು ಬಿಟ್ಟು ಕೈ ಎಳೆಯಬೇಕು” ಎ.ಮೈಕಲ್ ಕೆನಿತ್

“ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕೆನ್ನುವ ಒಬ್ಬ ಬುದ್ದಿವಂತನ ಪ್ರಶ್ನೆಗೆ ಒಬ್ಬ ಜ್ಞಾನಿ ಹೇಳಿದ ಉತ್ತರ “ಕಾಲು ಎಳೆಯುವುದು ಬಿಟ್ಟು ಕೈ ಎಳೆಯಬೇಕು” ಎಂದು. ಮನೆಯವರೇ ಆಗಲೀ ಉದ್ಯೋಗಗಳೇ ಸಂಘ ಸಂಸ್ಥೆಗಳೇ ಆಗಿರಲೀ ನಮ್ಮಯ ಬೌದ್ಧಿಕ ಮಟ್ಟದಿಂದಲೇ ಅಳೆದು ತೂಗುತ್ತಾರೆ. ಕಾಲು ಎಳೆಯುವವರಿಂದ ದೂರವಿದ್ದು ನಾವುಗಳು ಇನ್ನೊಬ್ಬರನ್ನು ಕೈ ಹಿಡಿದು ಮೇಲಕ್ಕೆಳೆಯುವಂತೆ ಬೆಳೆಯಬೇಕು. ವೈರಿಗಳು ದೂಷಿಸಲು ನಮ್ಮಲ್ಲಿನ ನ್ಯೂನತೆಗಳನ್ನು ಅಸ್ತ್ರಮಾಡಿಕೊಳ್ಳಲು ಹವಣಿಸುತ್ತಾರೆ. ನಮ್ಮ ನ್ಯೂನತೆಗಳು ನಮ್ಮ ಅರಿವಿಗೆ ಬರದಿದ್ದರೆ ಅದು ನಮ್ಮಯ “ದಡ್ಡತನಗಳು” ನಮ್ಮ ನ್ಯೂನತೆಗಳನ್ನು ಆಯಾ ಸಂದರ್ಭದಲ್ಲಿ ಸರಿಮಾಡುವವರೇ “ದೊಡ್ಡತನದ” ವ್ಯಕ್ತಿಗಳು. ಅಂಥವರನ್ನೆಂದಿಗೂ ಕಳೆದುಕೊಳ್ಳಬಾರದು ಅಲ್ಲವೇ. ನಮ್ಮನ್ನು ಯಾರೂ ಗೌರವಿಸುವುದಿಲ್ಲವೆಂದು ಎಂದಿಗೂ ಬೇಜಾರಾಗಬಾರದು. ಯಾಕೆಂದರೆ ಬಟ್ಟೆಯ ಅಂಗಡಿಯಲ್ಲಿ ನಮಗೆ ಇಷ್ಟವಾಗದೆ ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟ ಆಗುತ್ತವೆ ಹಾಗೆಯೇ ನಮ್ಮ ಜೀವನ ನಡವಳಿಕೆ ಕೂಡ ಅಷ್ಟೇ. ಕುಹಕಿಗಳು ಚೇಳಿನ ವಿಷಕ್ಕಿಂತಲೂ ಹೆಚ್ಚು ಪರಿಣಾಮ ಬೀರುತ್ತಾರೆ. ಅಂಥವರ ಸಂಘ ಸಹವಾಸಗಳನ್ನು ಮನಗಂಡು ಅನತಿ ದೂರದಲ್ಲಿಡಬೇಕು. ಹಾವು ಚೇಳು ಕಚ್ಚಿದರೆ ಔಷಧಿ ಇದೆ ಆದರೆ ಮನುಷ್ಯನ ವಿಷಕ್ಕೆ ಯಾವ ಔಷಧಿಯು ಇಲ್ಲಿವರೆಗೆ ಕಂಡು ಹಿಡಿಯಲಾಗಿಲ್ಲ…
“ಶುಭಃ-ಮುಂಜಾನೆಯ ಶುಭಾಶಯಗಳು……….. ಆತ್ಮೀಯರೇ ಗೆಲುವು ಮತ್ತು ಯಶಸ್ಸು ಎನ್ನುವುದು ನೆರಳಿನ ತರಹ ಅದನ್ನು ಯಾವತ್ತಿಗೂ ಹಿಡಿಯಲು ಪ್ರಯತ್ನಿಸಬಾರದು. ಯಾಕೆಂದರೆ ಕೆಲವೊಮ್ಮೆ ಕತ್ತಲಿನಲ್ಲಿಯೂ ಬೆಳಕಿನಲ್ಲಿಯೂ ಮಾಯವಾಗಿಬಿಡುತ್ತವೆ. ನಮ್ಮ ದಾರಿಯಲ್ಲಿ ನಾವುಗಳು “ಪ್ರಖರ ಗುರಿ” ಮತ್ತು “ಧ್ಯೇಯ”ದೊಂದಿಗೆ ಸಾಗುತ್ತಿದ್ದರೆ ಅವುಗಳು ಒಂದಲ್ಲಾ ಒಂದು ದಿನ ತನ್ನಷ್ಟಕ್ಕೆ ತಾವು ನಮ್ಮ ಹಿಂಬಾಲಿಸಿ ಹಿಂದೆಯೇ ಬಂದೇ ಬರುತ್ತವೆ. ಗೆಲುವಿನ ಕರತಾಡನವು ಕಿವಿಗಡಚಿಕ್ಕುವುದು. ತಾಳ್ಮೆ ಮತ್ತು ಜಾಣ್ಮೆಗಳು ನಿಮ್ಮಲ್ಲಿರಬೇಕು.”
ಎ.ಮೈಕಲ್ ಕೆನಿತ್ ಶಿವಮೊಗ್ಗ.✍


