ಸಂಪಾದಕೀಯ

ಕುಡಿಯುವ ನೀರಿನ ಪೈಪನ್ನು ಹೊಡೆದು ದ್ವಂಸಗೊಳಿಸಿದ ದುಷ್ಕರ್ಮಿಗಳು.

ಕುಡಿಯುವ ನೀರಿನ ಪೈಪನ್ನು ಹೊಡೆದು ದ್ವಂಸಗೊಳಿಸಿದ ದುಷ್ಕರ್ಮಿಗಳು

ಕನಕಗಿರಿ ಪಟ್ಟಣಕ್ಕೆ ಕುಡಿಯೋ ನೀರಿನ ಸಂಬಂಧ ಲಕ್ಷ್ಮಿ ದೇವಿ ಕೆರೆಯಿಂದ ಪೈಪ್ ಲೈನ್ ಮುಖಾಂತರ ಪಟ್ಟಣಕ್ಕೆ ಕುಡಿಯುವ ನೀರು ಬರುತ್ತಿದ್ದು ಅದನ್ನು ಯಾರು ದುಷ್ಕರಿಮಿಗಳು ಕಲ್ಲಿನಿಂದ ಹೊಡೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಕೂಡಲೇ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳದ ಲಕ್ಷ್ಮಣ್ ಕಟ್ಟಿಮನಿ ಅವರ ಗಮನಕ್ಕೆ ಸ್ಥಳೀಯರು ತಂದಿರುತ್ತಾರೆ. ಮತ್ತು ಮುಖ್ಯ ಅಧಿಕಾರಿಗಳು ಕೂಡಲೇ ಸಿಬ್ಬಂದಿ ಗಳದ ಕಾಸಿಂಸಾಬ್ ಅವರಿಗೆ ಮಾಹಿತಿ ನೀಡಿ ಪೈಪನ್ನು ಸರಿಪಡಿಸಲು ಸೂಚಿಸಿದರು. ನಂತರ ಸಿಬ್ಬಂದಿಗಳದ ಕಾಸಿಂಸಾಬ್ ಮತ್ತು ಸ್ಥಳೀಯ ರೈತರ ಸಹಾಯದಿಂದ ಪೈಪನ್ನು ಸರಿಪಡಿಸುವುದರಲ್ಲಿ ಯಶಸ್ವಿಯಾದರು.

ಮುಂಬರುವ ದಿನಗಳಲ್ಲಿ ಈ ತರಹದ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಮತ್ತು ಇಂತಹ ಕೃತ್ಯವನ್ನು ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button