ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸರ ವೃತ್ತಕ್ಕೆ ಅಡಿಗಲ್ಲು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ಭಕ್ತ ಕನಕದಾಸರ ವುತ್ತಕ್ಕೆ ಅಡಿಗಲ್ಲು
ವರದಿ:-ವಿಜಯ್ ಕುಮಾರ್ ಹಿರೇಮಠ
ತುರ್ವಿಹಾಳ
ತುರ್ವಿಹಾಳ : ಪಟ್ಟಣದಲ್ಲಿ ಭಕ್ತ ಕನಕದಾಸರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ನೂತನ ವೃತ್ತಗಳ ನಿರ್ಮಾಣಕ್ಕೆ ಶಾಸಕರು,ಪಟ್ಟಣದ ವಿವಿಧ ಮಠಗಳ ಶ್ರೀಗಳಿಂದ ಭೂಮಿಪೂಜೆ.
ನಂತರ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ ಪಟ್ಟಣದ ಪೋಲಿಸ್ ಠಾಣೆ ಮುಂದೆ ಭಕ್ತ ಕನಕದಾಸರ ವೃತ್ತ ನಿರ್ಮಾಣ ಹಾಗೂ ಸಿಂಧನೂರು- ಕುಷ್ಟಗಿ ಮುಖ್ಯ ರಸ್ತೆಯ ಎಪಿಎಂಸಿ ಮುಂಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ
ರಾಯಣ್ಣನ ವೃತ್ತ ನೀರ್ಮೀಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರಿಂದ ಪಟ್ಟಣದ ಎಪಿಎಂಸಿಯಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ ಮಾಡಿದರು.
ಭೂಮಿ ಪೂಜೆಯಲ್ಲಿ ಪಟ್ಟಣದ ಅಮೋಘ ರೇವಣಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್, ಪುರವರ ಹಿರೇಮಠದ ಶ್ರೀ ಷ.ಬ್ರ.ಅಮರಗುಂಡಯ್ಯ ಶಿವಾಚಾರ್ಯರು, ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ,ಚಿದಾನಂದಯ್ಯ ಗುರುವಿನ್,ಪಟ್ಟಣದ ಮುಖಂಡರಾದ ಮಲ್ಲನಗೌಡ ದೇವರಮನಿ,ಪ ಪಂ ಅಧ್ಯಕ್ಷ ಕೆ.ಶಾಮಿದ್ ಸಾಬ್ ಚೌದ್ರಿ
ಮೌಲಪ್ಪಯ್ಯ ಗುತ್ತೆದಾರ,ಉಮರ್ ಸಾಬ,ಶೇಖರಗೌಡ ದೇವರಮನಿ,ಗೂಳಪ್ಪ ಕುಂಟೋಜಿ,ದೊಡ್ಡಪ್ಪ ಕಲ್ಗೂಡಿ, ಆರ್.ಶಿವನಗೌಡ,ಬಾಲಪ್ಪ ಕುಂಟೋಜಿ,ಸಿದ್ದೇಶ್ವರ
ಗುರಿಕಾರ್,ಅಭಿಗೌಡ,ಮಲ್ಲಪ್ಪ ಕಾನಿಹಾಳ,ಯಲ್ಲಪ್ಪ ಭೋವಿ,ಶರಣಬಸವ ರಡ್ಡೆರ್,ಶರಣಬಸವ ಗಡೇದ್, ಅರವಿಂದ್ ರೆಡ್ಡಿ,ಅನ್ವರ್ ಪಾಷಾ ದಳಪತಿ,ಡಾ.ರಮೇಶ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು, ಊರಿನ ಸರ್ವ ಸಮಾಜದ ಮುಖಂಡರು ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದರು.




