ಸಂಪಾದಕೀಯ

ಪತ್ತರ್ ಸೇ ಮಾರೆತೋ, ಫೂಲ್ ಸೇ ಮಾರೋ ಎನ್ನುವ ಕಾಲ ಹೋಯಿತು.

ಪತ್ತರ್ ಸೇ ಮಾರೆತೋ, ಫೂಲ್ ಸೇ ಮಾರೋ ಎನ್ನುವ ಕಾಲ ಹೋಯಿತು.

ಈಗೆನಿದ್ದರೂ ಈಂಟ ಕಾ ಜವಾಬ ಪತ್ತರ್ ಸೇ ದೇನಾ ಎನ್ನುವ ಕಾಲವಿದು.

ಹಿಂದೆ ಅದೊಂದು ಕಾಲವಿತ್ತು. ನಿನ್ನ ಎಡಗೆನ್ನೆಗೆ ಬಾರಿಸಿದವನಿಗೆ ನಿನ್ನ ಬಲಗೆನ್ನೆ ತೋರಿಸು. ಪತ್ತರ್ ಸೇ ಮಾರೇ ತೊ ಫೂಲಸೆ ವಾಪಿಸ ಮಾರೊ. ಎನ್ನುತ್ತಾ ವ್ಯಕ್ತಿಯ ವ್ಯಕ್ತಿತ್ವವನ್ನು ಹೀನಾಯವಾಗಿ ಕುಗ್ಗಿಸಿ, ಸಮರ್ಥನೂ ಕೂಡ ಸಾಮಾಥ್ಯ೯ ಕಳೆದುಕೊಂಡು ಮೂಲೆ ಸೇರುವಂತೆ ಮಾಡುತ್ತಿದ್ದರು. ಇದು ಹಿರಿಯರ ಹಿತ ವಚನವೋ? ಕೈಲಾಗದ ವ್ಯಕ್ತಿಯ ಕುಹಕದ ಯೋಚನೆಯೋ? ತಿಳಿಯದು.

ಆದರೇ ಕಾಲ ಬದಲಾಗುತ್ತಿದೆ. ಇಂದಿನ ಜನರು ಅಜ್ಜ ಹಾಕಿದ ಆಲದ‌ ಮರಕ್ಕೆ ನೇಣು ಬಿಗಿದುಕೊಳ್ಳುವಷ್ಟು ದಡ್ಡರಾಗಿ ಉಳಿದಿಲ್ಲ. ಒಳ್ಳೆಯದು, ಒಳ್ಳೆಯವರು ಯಾರು? ಕೆಟ್ಟದ್ದು, ಕೆಟ್ಟವರು ಯಾರು ಎನ್ನುವುದನ್ನು ಕ್ಷಣದಲ್ಲಿಯೇ ಅರಿಕೊಳ್ಳುತ್ತಾರೆ. ಅದಕ್ಕೆ ತಕ್ಕಂಥೆ ನಡೆ-ನುಡಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ.

ಈ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಾಂಗೈಯವರ ದೃಷ್ಟಿಯಲ್ಲಿ ಇನ್ನಿಲ್ಲದಂತೆ ಚಿಕ್ಕವರಾಗಿದ್ದಾರೆ. ಪೈಪೋಟಿಗೆ ಬಿದ್ದವರಂತೆ‌ ಮೋದಿಯವರನ್ನು ಬೈಯ್ದಿದ್ದಾರೆ ಇನ್ನೂ ಬೈಯುತ್ತಿದ್ದಾರೆ. ತಮ್ಮ ವಯಸ್ಸಿಗಿಂತಲೂ ಎರಡು ಪಟ್ಟು ಹಿರಿಯರು, ದೇಶದ ಪ್ರಧಾನಿ ಎನ್ನುವ ಕಿಂಚಿತ್ತೂ ಬುದ್ಧಿ ಬೇಡವೇ?

ಈಗಿನ ಕಾಲ ಹ್ಯಾಗಿದೆ ಎಂದರೇ ಪ್ರತಿಭಟಿಸಲಿಲ್ಲವೆಂದರೇ ಸಂಭಾವಿತ ವ್ಯಕ್ತಿಗಳ ತಲೆಯನ್ನು ತಮ್ಮ ಟಾಯಲೆಟ ಮಾಡಿಕೊಳ್ಳುತ್ತಾರೆ. ಹೀನಾಮಾನವಾಗಿ ಬೈಯುತ್ತಾರೆ, ಕಿಚಾಯಿಸಿ ರಾಕ್ಷಸ ಆನಂದ ಪಡೆಯುತ್ತಾರೆ. ಕೈಲಾಗದವ ಎಂದು ತಮ್ಮ ಪಟಾಲಂಗಳೊಂದಿಗೆ ಕೇಕೆ ಹಾಕಿ ನಗುತ್ತಾರೆ.‌ನಾವೀಗ ಅಂಥಹ ಜನರ ನಡುವೆ ಇದ್ದೆವೆ.

ಆದರೇ ಅನಂತಕುಮಾರ ಅವರು ಎಲ್ಲೇ ಮೀರಿ ಹೋಗಿದ್ದಾರೆ ಎನ್ನುವಂತಿಲ್ಲ.

     ಕಾಂಗೈನ ಹಿರಿಯ-ಕಿರಿಯರೆಲ್ಲರೂ ಜಿದ್ದಿಗೆ ಬಿದ್ದವರಂತೆ ವಿರೋಧ ಪಕ್ಷದವರಿಗೆ, ವಿಶೇಷವಾಗಿ ದೇಶದ ಪ್ರಧಾನಿಯವರನ್ನು ಹಿನಾಯವಾಗಿ ಬೈಯುತ್ತಾರೆ ಇವಕ್ಕೆ ಕನಿಷ್ಠ ಜ್ಞಾನ ಬೇಡವೇ?

ವಾಚಾಮಗೊಚರವಾಗಿ ಅಸಂವಿಧಾನಿಕ ಶಬ್ದಗಳಿಂದ ಬೈದಿದ್ದಾರೆ. ಇದಕ್ಕೆ ಕಾರಣ, ಮೋದಿಜೀ ಅಧಿಕಾರದಲ್ಲಿ ವಿರಾಜಮಾನರಾಗಿ ಜನಪ್ರೀಯತೆ ಪಡೆಯುತ್ತಿರುವುದು.‌ ಅಧಿಕಾರ ಬಿಟ್ಟು ಕೊಡದಿರುವುದು. ಅಧಿಕಾರದಲ್ಲಿಯೇ ಮುಂದುವರೆದಿರುವುದು. ಇದನ್ನು ಕಾಂಗೈಗಳು ಸಹಿಸಲಾಗುತ್ತಿಲ್ಲ. ನೀರಿನಿಂದ ಹೊರಹಾಕಿದ ಮೀನಿನಂತೆ ಅಧಿಕಾರವಿಲ್ಲದೇ ಚಡಪಡಿಸುತ್ತಿರುವ ಕಾಂಗೈ ಪರಿಸ್ಥಿತಿ ಅಯೋಮಯವಾಗಿರುವುದದೇ ಕಾರಣ.

ಕಾಂಗೈ ತನ್ನ ಕೈಯಲ್ಲಿ ಅಧಿಕಾರವಿದ್ದಾಗ ಎಷ್ಟು ಡೇಂಜರಾಗಿರುತ್ತದೆಯೋ, ಅಧಿಕಾರವಿಲ್ಲದಾಗ ಅದಕ್ಕಿಂತಲೂ ಎರಡು ಪಟ್ಟು ಡೇಂಜರಾಗಿರುತ್ತದೆ. ಹಸಿದ ಹೆಬ್ಬುಲಿಯಂತೆ ವರ್ತಿಸುತ್ತದೆ ಎಂದು ವಾಜಪೇಯಿಯವರು ಹಿಂದೆ‌ ಈ ಮಾತು ಹೇಳಿದ್ದರು.

ವಾಜಪೇಯಿಯವರ ಮಾತು ಅಕ್ಷರಶಃ ನಿಜ ಮತ್ತು ಕಾಲ‌ಕಾಲಕ್ಕೆ ನಿಜ ಮಾಡಿ ತೋರಿಸುತ್ತಾರೆ ಈ ಕಾಂಗೈ ಜನರು.

ರಾಜ್ಯದ ಕಾಂಗೈನ ನಾಯಕರಲ್ಲಿ‌ ಒಬ್ಬ ವ್ಯಕ್ತಿ ಸುಖಾಸುಮ್ಮನೇ ದೂರದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಚಪ್ಪಲಿಯಿಂದ ಹೊಡೆಯುತ್ತೆನೆ ಎಂದ ಪ್ರಭುತಿಯಿವರು. ಇಂಥಹ ಸಾವಿರ ಉದಾಹರಣೆ ಕೊಡಬಹುದು‌. ಜನರಿಗೂ ತಿಳಿದ ವಿಷವೇ ಹೊಸತೆನಿಲ್ಲ.

ಸಾರ್ವಜನಿಕ ವ್ಯಕ್ತಿಗಳು ಸಾರ್ವಜನಿಕವಾಗಿ ಅಸಹ್ಯ, ಅಸಂವಿಧಾನಿಕ ಶಬ್ದಗಳನ್ನು‌ ಉಪಯೋಗಿಸಬಾರದು ನಿಜ. ಇದು ವ್ಯಕ್ತಿ ಪ್ರತಿಷ್ಠೆ ಹೆಚ್ಚಿಸುವುದಿಲ್ಲ. ತನ್ನ ಘನತೆ ತಾನೇ ಕುಗ್ಗಿಸಿಕೊಳ್ಳುತ್ತಾನೆ. ಅದೂ ನಿಜ. ಆದರೇ ಪತ್ತರ್ ಸೇ ಮಾರೇತೋ????? ಹೊಡೆಯಿಸಿಕೊಂಡ‌ ವ್ಯಕ್ತಿ ಆ ಸಮಯದಲ್ಲಿ ಓಂ ನಮ ಶಿವಾಯ ಎನ್ನಬೇಕೆ?

Related Articles

Leave a Reply

Your email address will not be published. Required fields are marked *

Back to top button