ಪೂಜಾಆಚಾರ್ಯ ನ್ಯಾಯ ಕೊಡಿಸುವ ವರೆಗೂ ಕಾನೂನಿನ ಪ್ರಕಾರ ವಿಶ್ವಕರ್ಮ ಸಮಾಜ ಸುಮ್ಮನಿರುವುದಿಲ್ಲ .ಕೆ. ಪಿ. ನಂಜುಂಡಿ ಬೆಂಗಳೂರು.

ಪೂಜಾಆಚಾರ್ಯ ನ್ಯಾಯ ಕೊಡಿಸುವ ವರೆಗೂ ಕಾನೂನಿನ ಪ್ರಕಾರ ವಿಶ್ವಕರ್ಮ ಸಮಾಜ ಸುಮ್ಮನಿರುವುದಿಲ್ಲ .ಕೆ. ಪಿ. ನಂಜುಂಡಿ ಬೆಂಗಳೂರು. ಪೂಜಾಆಚಾರ್ಯ ನ್ಯಾಯ ಕೊಡಿಸುವ ವರೆಗೂ ಕಾನೂನಿನ ಪ್ರಕಾರ ವಿಶ್ವಕರ್ಮ ಸಮಾಜ ಸುಮ್ಮನಿರುವುದಿಲ್ಲ .ಕೆ. ಪಿ. ನಂಜುಂಡಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಪುತ್ತೂರಿನ ಬಡ ಹೆಣ್ಣು ಮಗಳಾದ ಅತ್ಯಚಾರವೆಸಗಿ ಒಂದು ಗಂಡು ಮಗುವಿನ ಹುಟ್ಟಿಗೆ ಕಾರಣನಾದ ಶ್ರೀ.ಕೃಷ್ಣ ಜೆ ರಾವ್ ಉಳಿದ ಆರೋಪಿಗಳಾದ 1. ತಂದೆ ಪಿ.ಜಿ ಜಗನ್ನನಿವಾಸ ರಾವ್ 2. ಸಹೋದರಿ, ವೈಷ್ಣವಿ ಪಿ. ಜಿ. ರಾವ್ 3. ದೊಡ್ಡಪ್ಪ ಚಂದ್ರಶೇಖರ್ ಪಿ.ಜಿ ಎಂಬುವವರು ನ್ಯಾಯಾಲಯದ ಆದೇಶವನ್ನು ದಿಕ್ಕರಿಸುವ ಅವರ ನಡೆಯನ್ನು ಖಂಡಿಸುತ್ತೇವೆ. ಈ ಕೇಸ್‌ಗೆ ಸಂಬಂಧಪಟ್ಟ ಹಾಗೇ ಹಲವಾರು ದಿನಗಳಿಂದ ಕೊರ್ಟಿನಲ್ಲಿ ವಿಚಾರಣೆಗಳು ನಡೆಯುತ್ತಿದೆ. ಕಳೆದ 24.04.2026ರಂದು ಘನ ಉಚ್ಚನ್ಯಾಯಾಲಯವು ಆರೋಪಿಯಾದ ಪಿ.ಜಿ. ಶ್ರೀಕೃಷ್ಣ ರಾವ್ ರವರಿಗೆ ಮಧ್ಯಂತರ ತಡೆಯನ್ನು ಷರತ್ತುಗೊಳಪಟ್ಟು ಆದೇಶ ನೀಡಿರುತ್ತದೆ. ನ್ಯಾಯಾಲಯದ ಷರತ್ತಿನ ಪ್ರಕಾರ 01.05.2026 ರಂದು 75,000/- ರೂಗಳನ್ನು ಹಾಗೂ ಕೇಸಿನ ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು 75,000/- ಗಳನ್ನು ದೂರುದಾರರಾದ ಪೂಜಾಆಚಾರ್ಯ ಹಾಗೂ ಮಗುವಿನ ಜೀವನೋಪಾಯ ಮತ್ತು ಕಲ್ಯಾಣಕ್ಕಾಗಿ ನೀಡಬೇಕೆಂದು ಆದೇಶಿಸಿತ್ತು. 01.05.2026 ರಂದು ನೀಡಬೇಕಾದ 75,000/-ರೂಗಳಲ್ಲಿ ಒಂದು ರೂಪಾಯಿಯನ್ನು ಇಲ್ಲಿಯವರೆಗೆ ನೀಡದೇ ಘನ ಉಚ್ಚನ್ಯಾಯಾಲಯದ ಆದೇಶಗಳನ್ನು ದಿಕ್ಕರಿಸಿ ನ್ಯಾಯಾಲಯದ ಆದೇಶಕ್ಕೆ ಯಾವುದೇ ಬೆಲೆ ನೀಡದೇ ಇರುವುದನ್ನು ನಾವು ಖಂಡಿಸುತ್ತೇವೆ. ಪೂಜಆಚಾರ್ಯರವರು ಹಿಂದುಳಿದ ವರ್ಗದಲ್ಲಿ ವಿಶ್ವಕರ್ಮ ಸಮಾಜಕ್ಕೆ ಸೇರಿದ್ದಾರೆ. ನಾವುಗಳು ಯಾರು ಅವರ ಸಂಬಂಧಿಗಳಾಗಿರುವುದಿಲ್ಲ. ಆದರೆ ಸಮಾಜಗಳು ಇಂತಹ ಅನ್ಯಾಯವನ್ನು ನೋಡುತ್ತಾ ಸುಮ್ಮನಿರುವುದಿಲ್ಲ. ಇಡಿ ರಾಜ್ಯದ ಜನತೆ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ನ್ಯಾಯ ಕೊಡಿಸುವುದರ ಜೊತೆಗೆ ಇಂತಹ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡುತ್ತದೆ ಎಂದು ನಂಬಿದೆ. ಪೂಜಾಆಚಾರ್ಯ ಮತ್ತು ಮಗುವಿಗೆ ನ್ಯಾಯ ಕೊಡಿಸುವ ವರೆಗೂ ಕಾನೂನಿನ ಪ್ರಕಾರ ವಿಶ್ವಕರ್ಮ ಸಮಾಜ ಹಾಗೂ ಇನ್ನಿತರೆ ಎಲ್ಲ ಸಮಾಜಗಳು ಹೋರಾಟ ಮಾಡುತ್ತೇವೆ. ಎಂದು ತಿಳಿಸಿದರು.
ಕೆ.ಪಿ.ನಂಜುಂಡಿ
ರಾಜ್ಯಧ್ಯಕ್ಷರು, ವಿಶ್ವಕರ್ಮ ಮಹಾಸಭಾ
ಈ ಪತ್ತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶ್ರೀ.ನೀಲಕಂಠ ಮಹಾಸ್ವಾಮಿಜಿಗಳು, ಅಭಯಹಸ್ತ ಆದಿಲಕ್ಷ್ಮೀ ಸಂಸ್ಥಾನ ನಿಠರ ಹಳ್ಳಿ.
ಮಧುಗಿರಿ ತಾ||
ಪೂಜ್ಯ ಶ್ರೀ ದೊಡ್ಡಂದ್ರ ಸ್ವಾಮಿಜಿಗಳು, ವಿಶ್ವಕರ್ಮ ಏಕದಂಡಗಿ ಮಠ ಸಲೇಪೇಟೆ ಅತೀ ಹಿಂದುಳಿದ ಮಠಾಧೀಶ್ರ ಮಹಾಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ.
ಪೂಜ್ಯಶ್ರಿ ಗಣೇಶ ಮಹಾಸ್ವಾಮಿಗಳು, ಶ್ರೀಮದ್ ಆನೆಗುಂಡಿ ಗೋಧಿ ಹೊಸಹಳ್ಳಿ ಸರಸ್ವತಿ ಅಮ್ಮನವರ ಆಹ್ವಾನ, ಗಂಗಾವತಿ, ಕೊಪ್ಪಳ ಜಿ॥
ಆರ್.ಪ್ರಸನ್ನಕುಮಾರ್. ರಾಜ್ಯಧ್ಯಕ್ಷರು. ಕೆ.ಪಿ.ಸಿ.ಸಿ, ಕುಶಲಕರ್ಮಿಗಳ ವಿಭಾಗ, ಬೆಂಗಳೂರು.
ಜಿ. ರವಿಕುಮಾರ್, ಲಗ್ಗೆರೆ ಓಬಿಸಿ ಬ್ಲಾಕ್ ಕಾಂಗ್ರೇಸ್, ಅಧ್ಯಕ್ಷರು.
ಜನಾರ್ಧನ್ (ಬಿಡದಿ) ಜಿಲ್ಲಾ ಮಹಾಸಭಾ. ಮುಖಂಡರು. ವರದಿ. ಮಂಜುಳಾ ರೆಡ್ಡಿ



