ಸಂಪಾದಕೀಯ

ಪ್ರತಿಯೊಂದು ಕುಟುಂಬಕ್ಕೆ ಉಪಯುಕ್ತವಾಗಿದೆ, ಈ ಯಂತ್ರ ಶಾಸಕ ಆರ್.ಬಸನಗೌಡ ತುರ್ವಿಹಾಳ

ಪ್ರತಿಯೊಂದು ಕುಟುಂಬಕ್ಕೆ ಉಪಯುಕ್ತವಾಗಿದೆ, ಈ ಯಂತ್ರ ಶಾಸಕ ಆರ್.ಬಸನಗೌಡ ತುರ್ವಿಹಾಳ

ತುರ್ವಿಹಾಳ:ಪಟ್ಟಣ ಪಂಚಾಯಿತಿ ಆವರಣದಲ್ಲಿ ಸೋಮವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕ ಹಾಗೂ ಖಾಧಿ ಗ್ರಾಮ
ದ್ಯೋಗ ಮಂಡಳಿಯ ಅಧ್ಯಕ್ಷ ಆರ್ ಬಸನಗೌಡ
ತುರ್ವಿಹಾಳ ಅವರಿಂದ ಸವಲತ್ತಿನ ದರದಲ್ಲಿ ಮನೆ ಹಿಟ್ಟಿನ ಗಿರಣಿಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಈ ಯಂತ್ರದಲ್ಲಿ ಗೋದಿ,ಜೋಳ,ರಾಗಿಹಿಟ್ಟು,ರವಾ,ನುಚ್ಚು,ಮೆಕ್ಕೆ
ಜೋಳದ ನುಚ್ಚು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿಕೋಳ್ಳಲು ಯಂತ್ರವು ಉತ್ತಮವಾಗಿದೆ, ಹಾಗೂ ಈ ಯಂತ್ರ ಸಿಂಗಲ್ ಫೇಸ್ ವಿದ್ಯುತ್ ಕನೆಕ್ಷನ್ ನಲ್ಲಿ ನಡೆಯುವ ಮೂಲಕ ಪ್ರತಿ ಒಂದು ಕುಟುಂಬಕ್ಕೆ ಉಪಯುಕ್ತವಾಗಿದೆ, ಈ ಯಂತ್ರ
ವನ್ನು ಒಂದು ಕುಟುಂಬಕ್ಕೆ ಒಂದೇ ಕೊಡಲಾಗುವುದು ಕ್ಷೇತ್ರದಲ್ಲಿನ ಬಡ ಜನರು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷ ಕೆ.ಶಾಮಿದ್ ಸಾಬ್ ಮಾತನಾಡಿ ಕ್ಷೇತ್ರದ ಜನರ ಮೇಲಿನ ವಿಶೇಷ ಕಾಳಜಿಯಿಂದ ಶಾಸಕರು ಈ ಯಂತ್ರವನ್ನು ತಂದಿದ್ದು
ಇದರ ಅಂದಾಜು 24 ಸಾವಿರ ಬೆಲೆ ಬಾಳುವ ಸಣ್ಣ ಪ್ರಮಾಣದ ಹಿಟ್ಟಿನ ಗಿರಿಣಯ 16 ಯಂತ್ರಗಳನ್ನು ಶೇ50 ರಷ್ಟು ಕಡಿಮೆ ದರಕ್ಕೆ ಸರ್ಕಾರ ನೀಡುತ್ತಿದೆ,ಇದರ ಪ್ರಯೋಜನವನ್ನು ಪಟ್ಟಣದ ಸಾರ್ವಜನಿಕರು ಪಡೆದು
ಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೀರಭದ್ರಗೌಡ,ಬಸವ ರಾಜಪ್ಪ ಹಂಪಾನಾಳ,ಶಂಕರಗೌಡ ದೇವರಮನಿ,ಶಾಮೀದ ಅಲಿ ಅರಬ್, ನಿಂಗಪ್ಪ ಗೋಸಬಾಳ,ಮುರ್ತುಜಾ ಚೌದ್ರಿ, ಗ್ಯಾನಪ್ಪ ನಾಯ್ಕರ್,ಮಲ್ಲಪ್ಪ ಕಿಡಿಕಿ,ಕರಿಸಿದ್ದಪ್ಪ ಅಂಗಡಿ, ಸೇರಿದಂತೆ ಇತರರು ಇದ್ದರು.

Oplus_131072

Related Articles

Leave a Reply

Your email address will not be published. Required fields are marked *

Back to top button