ಸಂಪಾದಕೀಯ

ಬಸರಿಹಾಳ ಶಾಲೆಯಲ್ಲಿ ಮಕ್ಕಳಿಗೆ ಹಾಲು ವಿತರಣೆ ಇಲ್ಲ ವಿದ್ಯಾರ್ಥಿಗಳು ಅಳಲು.ಕನಕಗಿರಿ.

ಬಸರಿಹಾಳ ಶಾಲೆಯಲ್ಲಿ ಮಕ್ಕಳಿಗೆ ಹಾಲು ವಿತರಣೆ ಇಲ್ಲ ವಿದ್ಯಾರ್ಥಿಗಳು ಅಳಲು

ಕನಕಗಿರಿ:ತಾಲೂಕಿನ ಬಸರಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇಯರ್ ಸಮಯದಲ್ಲಿ ಹಾಲು ವಿತರಣೆ ಮಾಡಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೊಡಿಕೊಂಡರು.
ಗ್ರಾಮದ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಸುಮಾರು 270 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರ ಭಾಗ್ಯ ಯೋಜನೆಯಡಿ ಪ್ರತಿ ದಿನ ಬೆಳಗ್ಗೆ ಪ್ರಾರ್ಥನೆಯ ನಂತರ ಮಕ್ಕಳಿಗೆ 150 ಮಿ.ಲೀ. ಹಾಲು ನೀಡಬೇಕು. ಆದರೆ ಶಾಲಾ ಪ್ರಾರಂಭದಿಂದಲೂ ಶಾಲೆಯಲ್ಲಿ ಹಾಲು ವಿತರಣೆ ಸ್ಥಗಿತಗೊಂಡಿದೆ ವಿದ್ಯಾರ್ಥಿ ವಿರೇಶ, ಪ್ರವೀಣ್, ಪ್ರದೀಪ್ ಅಳಲು ತೊಡಿಕೊಂಡರು.


ಗ್ರಾಮಸ್ಥರ ಆರೋಪ:ಮಕ್ಕಳು ಬೆಳಗ್ಗೆ ಉಪಾಹಾರ ಮಾಡದೆ ಶಾಲೆಗೆ ಬರುತ್ತಾರೆ. ಹಾಲು ಕುಡಿದರೆ ಸ್ವಲ್ಪ ಶಕ್ತಿ ಬರುತ್ತಿತ್ತು. ಶಾಲಾ ಪ್ರಾರಂಭದಿಂದ ಆದರೆ ಈಗ ಹಾಲು ಕೊಡುತ್ತಿಲ್ಲ. ಕೇಳಿದರೆ ‘ಹಾಲು ಬಂದಿಲ್ಲ’ ಅಂತಾರೆ. ಮಕ್ಕಳು ಬಾಯಿ ಬಡಿದುಕೊಂಡು ಕೂರುವಂತಾಗಿದೆ ಎಂದು ಯಮನೂರು ನಾಯಕ ಆಕ್ರೋಶ ವ್ಯಕ್ತಪಡಿಸಿದರು.


ಶಾಲೆ ಪ್ರಾರಂಭವಾದ ದಿನದಿಂದ ಏಜೆನ್ಸಿಗಳು ಶಾಲೆಗೆ ಹಾಲು ನೀಡಿಲ್ಲ. ಬುಧವಾರ ಬೆಳಗ್ಗೆ ಹಾಲು ಬಂದಿದೆ. ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಹಾಲು ನೀಡುತ್ತಿದ್ದೇವೆ. ಧರ್ಮಣ್ಣ ಲಮಾಣಿ.
-ಮುಖ್ಯೋಪಾಧ್ಯಯ ಸ.ಹಿ.ಪ್ರಾ.ಶಾಲೆ, ಬಸರಿಹಾಳ.


ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button