ಸಂಪಾದಕೀಯ

ಮಹಿಳೆ ಸಾಗಿ ಬಂದ ಹಾದಿ….

ಹೆಣ್ಣಿನ ಜನನ Tension ಅಲ್ಲ. Equal-in-to 10 ಸನ್ಸ್.(sons)

ಮಹಿಳೆ ಸಾಗಿ ಬಂದ ಹಾದಿ

ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು , ಕನ್ನಡದಲ್ಲಿ ಈ ಪದಕ್ಕೆ ” ಹೆಣ್ಣು” ಎಂಬ ಅರ್ಥವಿದೆ . ಇದು ಗೌರವದ ಮತ್ತು ಪುರುಷ ಪದದ ಸಮಾನವಾಗಿದೆ.

ಸೃಷ್ಟಿಯ ಮೂಲವೇ ಹೆಣ್ಣು. ಸ್ತ್ರೀಗೆ ಅವಳದೇ ಆದ ಗೌರವ ಸ್ಥಾನಮಾನಗಳಿರುವುದನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ. ಸ್ತ್ರೀ ಅವಿನಾಶಿ, ಸಂಜೀವಿನಿ ವಿಶಿಷ್ಟ ಶಕ್ತಿಗಳ ಸಂಗಮ ಹೆಣ್ಣು.

ಮಹಿಳೆಯನ್ನು ಕುರಿತು ಮನು ಹೀಗೆ ನುಡಿದಿದ್ದಾನೆ .” ಮಾತ್ರಾಸ್ಪಸ್ತಾ ಮಹಿತ್ರಾವಾದ ವಿವಿಕ್ತಸನೋ ಭವೇತ ” ಬಲವಾನಿಂದ್ರಿಯ ಗ್ರಾಮೋ ವಿದ್ವಾಂಸ ಮಡಿಕರ್ಷತಿ ” ಮನುವಿನ ದೃಷ್ಟಿಯಲ್ಲಿ ಮಹಿಳೆ ಶಿಕ್ಷಣವನ್ನು ಕಲಿಯುವುದು ಬೇಡವಾಗಿತ್ತು . ಅವಳು ಗುಲಾಮಳಾಗಿಯೇ ನಾಲ್ಕು ಗೋಡೆಗಳ ಮಧ್ಯೆಯೇ ಬದುಕಬೇಕಾಗಿತ್ತು . ಅವಳು ಅಕ್ಷರಲೋಕ ಪ್ರವೇಶ ಮಾಡಿದರೆ ಅವಳು ತೃತೀಯ ಜಗತ್ತಿನಲ್ಲಿ ನಡೆಯುವ ಸಮಾಚಾರ ತಿಳಿದುಕೊಂಡು ಪುರುಷನ ತೋಳ ತೆಕ್ಕೆಯಿಂದ ದೂರ ಹೋಗಿ ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡು ಸಬಲವಾಗುತ್ತಾಳೆ , ಎಂದು ಮಹಿಳಾ ಸಬಲೀಕರಣ ಮನುವಿನ ಬೇಡವಾಗಿತ್ತು.
ಇದರಿಂದಾಗಿ ಹೆಣ್ಣು ಮೊದಲಿನಿಂದಲೂ ವಂಚಿತಳಾಗಿಯೇ ಉಳಿದಿದ್ದಾಳೆ .

ತನ್ನ ಸ್ವಂತಿಕೆಯಿಂದ ಹಲವಾರು ತಿರ್ಮಾನಗಳು ತೆಗೆದು ಕೊಂಡು ಪುರುಷನ ಸಮಾನವಾಗಿ ನಿಂತಿದ್ದಾಳೆ. ಅದಕ್ಕಾಗಿ ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗ ಜನನಿಯೆಂದು ಹೇಳಲಾಗುತ್ತದೆ.” ಕಾರ್ಯೇಷು ದಾಸಿ,ಸಲಹೇಷು ಮಂತ್ರಿ , ಭೋಜೇಷು ಮಾತ್ , ಶಯನೇಷು ರಂಭಾ ನಾರಿ ಕ್ಷಮಿಯಾಧರಿತ್ರಿ ” ಎಂದಿದ್ದಾರೆ .

“ಮಹಿಳೆ “ಯು ‘ ಮಹಾಇಳೆ ‘ ಅಂದರೆ ” ಬಹು ದೊಡ್ಡ ಭೂಮಿ “ಯಾಗಿದ್ದರೂ ಅವಳ ಶಕ್ತಿಯನ್ನು ಅರಿಯದ ಆಜ್ಞ ಪುರುಷ ಸಮಾಜವು , ಅವಳನ್ನು ಕಾಲಾಂತರದಿಂದಲೂ ಹತ್ತಿಕ್ಕತ್ತಲೇ ಬಂದಿದೆ , ಅವಳು ‘ ಭೂಮಿತಾಯಿ ‘ ಭೂಮಿಗಿರುವಷೇ ಸಹನೆ , ತಾಳ್ಮೆ ,ಕಷ್ಟ ಸಹಿಸುವ ಶಕ್ತಿ ಅವಳಲ್ಲಿದೆ . ಮಹಿಳೆ ಭೂಮಿತಾಯಿ ತೂಕದ ಘನತೆ .

ಇದ್ದನ್ನು ಅರಿತಿದ್ದ ವೇದ ಉಪನಿಷತ್ ಕಾಲದ ದ್ರುಷ್ಟಾರರು ತಮ್ಮ ಪತ್ನಿಯರಿಗೆ ಹಿರಿದಾದ ಸ್ಥಾನ ಮಾನದಲ್ಲಿ ಕುಳ್ಳಿರಿಸಿ ಗೌರವಿಸಿದರು.” ಮಾತೃ ದೇವೋ ಭವ ” ಎಂದು ಸಾರಿದರು. ಋಷಿ ಪತ್ನಿಯಾಗಿದ್ದ ವಿಶ್ವವಾರ,ಲೋಪಮುದ್ರಾ , ಗಾರ್ಗಿ , ಮೈತ್ರೇಯಿ ಮೊದಲಾದವರು ಸ್ವತಃ ಮಂತ್ರದ್ರಷ್ಟಾರರಾಗಿದ್ದರು ವೇದಾಧ್ಯಯನ ಮಾಡುತ್ತಿದ್ದರು.
ವೇದಗಳ ರಚನೆಯಲ್ಲಿಯೂ ಅವರು ಬ್ರಹ್ಮಜ್ಞಾನಿಗಳಿಗೆ ಸರಿಸಮನಾಗಿ ನಿಂತು ಕಾರ್ಯ ನಿರ್ವಹಿಸಿದರು.

ಇತಿಹಾಸ ಪುರಾಣಗಳ ಯುಗಕ್ಕೆ ಬಂದಾಗ ಮಹಿಳೆಗಿತ್ತ ಮಹತ್ವದ ಸ್ಥಾನವು ಅಧಃಪತನಕ್ಕಿಳಿಯಿತು . ಅವಳು ಶ್ರೂದ್ರಳಾದಳು , ಅಬಲೆಯಾದಳು , ಅಡುಗೆ ಮನೆ ಹೆರಿಗೆ ಮನೆಗಳಿಗೆ ಸೀಮಿತಳಾಗಿ ಪರಾಧೀನಳಾದಳು . ಈ ಮಾತಿಗೆ ರಾಮಾಯಣ — ಮಹಾಭಾರತದಲ್ಲಿ ಬರುವ ಸೀತೆ ದ್ರೌಪದಿಯರ ಪಾತ್ರಗಳು ಸಂಕೇತದಂತೆ ನಿಂತು ಕೊಳ್ಳುತ್ತವೆ.

ಬೌದ್ಧ ಧರ್ಮವು ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡಬಾರದೆಂದು ಹೇಳುತ್ತಿದ್ದರು.ಬುದ್ಧದೇವನು ಅದನ್ನು ನಿವಾರಿಸಿದನು . ಸ್ತ್ರೀಯರಿಗೆ ಬೌದ್ಧ ಸಂಘಗಳಲ್ಲಿ ಬಿಕ್ಷುಣಿಯರಾಗಿ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ದೊರೆಕಿತು.
ಜೈನ ಧರ್ಮವು ವೇದ ಮೊದಲಿಗೆ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರು, ಆದರೆ ದಿಗಂಬರ ಪಂಥದ ಅನುಯಾಯಿಗಳ ಕಾಲ ಸಂದರ್ಭದಲ್ಲಿ ಸ್ತ್ರೀಯರ ಗೌರವದ ಸ್ಥಾನ ಮಾನಗಳು ಇಲ್ಲದಂತಾದವು .” ಮಹಿಳೆಯರು ಮೋಕ್ಷವನ್ನು ಸಾಧಿಸಬೇಕಾದರೆ ಪುರುಷ ಜನ್ಮವನ್ನು ತಡೆಯಬೇಕು” ಎಂಬಂತಹ ಧಾರ್ಮಿಕ ಕಟ್ಟುಪಾಡಗಳು ಪ್ರಚಲಿತವಾದವು .

ಮನುವಿನ ಕಾಲದಲ್ಲಿ ಪ್ರಚಲಿತವಾದ ನಿಯಮಗಳು ಮಹಿಳೆಯನ್ನು ಸಂಪೂರ್ಣವಾಗಿ ಮೂಲೆ ಗುಂಪಾಗಿಸಿದವು. ಬಾಲ್ಯ ವಿವಾಹ,ಸತಿ ಸಹಗಮನ ಪದ್ದತಿ ವಿಧವಾ ವಿವಾಹ ನಿಷೇಧಂತಹ ಅನಿಷ್ಠ ಪದ್ಧತಿಗಳು ಸ್ತ್ರೀ ಸಮಾಜಕ್ಕೆ ಕತ್ತಲು ಕವಿದಂತೆ ಮಾಡಿದವು. ಸ್ತ್ರೀಯು ಸ್ವಾತಂತ್ರ್ಯ ಪಡೆಯಲು ಯೋಗ್ಯಳಲ್ಲ — ಎಂಬ ಮನುವಿನ ನಿರ್ಬಂಧವು ಅವಳನ್ನು ಹುಟ್ಟಿನಿಂದ ಕೊನೆಯವರೆಗೂ ದಾಸಿಯಾಗಿ, ಪುರುಷನ ಅಡಿಯಾಳಾಗಿ ಶೋಷಣೆಗೊಳ್ಳುತ್ತಾ ಗುಲಾಮತನದ ಬದುಕನ್ನು ಕಳೆಯುವಂತೆ ಮಾಡಿತು.

ಮಹಿಳೆಗೆ ತನ್ನ ಸರ್ವಾಂಗ ಸುಂದರವಾದ ಸ್ವರೂಪವು ಕಾಣುವಂತಾದುದು ಕನ್ನಡ ನಾಡಿನ ಹನ್ನೆರಡನೇ ಶತಮಾನದ ಬಸವಾದಿ ಶರಣರ ಕಾಲದಲ್ಲಿ.ಅಂದಿನ ಅನುಭವ ಮಂಟಪದಲ್ಲಿ ಹಲವಾರು ಶಿವಶರಣೆಯರು ಪುರುಷರಿಗೆ ಸರಿಸಮಾನವಾದ ಅಧ್ಯಾತ್ಮಿಕ – ಅನುಭಾವಿಕ ಸಾಧನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾಳೆ .ಅವರಲ್ಲಿ ನಮಗೆ ವಚನ ರಚನೆಗೆ ತೊಡಗಿದ ಮಹಾದೇವಿಯಕ್ಕ ,ಅಕ್ಕಮ್ಮ , ಸತ್ಯಕ್ಕ , ಸೂಳೆಸಂಕವ್ವ , ಕಾಳವ್ವೆ ,ನಾಗಲಾಂಬಿಕೆ , ಗಂಗಾಂಬಿಕೆ , ಆಯ್ದಕ್ಕಿ ಲಕ್ಕಮ್ಮ , ಮೋಳಿಗೆ ಮಹಾದೇವಿ ಮುಂತಾದ ಮೂವತ್ತು ಮೂರು ಜನ ವಚನಕಾರ್ತಿಯರು ಎದುರುಗೊಳ್ಳುತ್ತಾರೆ , ಇದು ಇಂದಿಗೂ ವಿಶ್ವದ ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಸ್ಮಯದ ಸಂದ ಭಾಗವಾಗಿ ಉಳಿದುಕೊಂಡಿದೆ.
ಶಿವಶರಣರ ಸಾಧನೆಯನ್ನು ಅರಿತೇ ಶಿವಯೋಗಿ ಸಿದ್ಧರಾಮರು ಹೀಗೆ ಹೇಳುತ್ತಾರೆ.
” ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು ಆದ ಕಾರಣ ಹೆಣ್ಣು ಹೆಣ್ಣಲ್ಲ , ಹೆಣ್ಣು ರಾಕ್ಷಸಿಯಲ್ಲ ಹೆಣ್ಣು ಪ್ರತ್ವಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ “

ಶಿವನನ್ನು ಅರ್ಧನಾರೀಶ್ವರ ಎಂದು ಕರೆಯುವುದು.ಇದೆ ಅರ್ಥದಲ್ಲಿ ಬಸವಣ್ಣ , ದಾಸಿಮಯ್ಯ ಮುಂತಾದ ಶರಣರು ಸ್ತ್ರೀ ಪಾರವ್ಯವನ್ನು ಎತ್ತಿ ಹಿಡಿದರು.
ಅನುಭಾವ ಮಂಟಪದಲ್ಲಿದ್ದ ಮಹತ್ವದ ಸಾಧಕ ಶರಣರ ಸಾಧನೆಯ ಹಿಂದೆ ಶಿವಶರಣೆಯರ ಸಾಧನೆಯ ಎಚ್ಚರಿಕೆ ಜಾಗ್ರತವಾಯಿತ್ತು .

ಬಸವಣ್ಣನವರಿಗೆ ಗಂಗಾಂಬಿಕೆ ಆಚಾರ ಪತ್ನಿಯಾಗಿದಕ್ಕೆ ನೀಲಾಂಬಿಕೆ ಅವರಿಗೆ ವಿಚಾರ ಪತ್ನಿಯಾಗಿದ್ದರು.
ದುಗ್ಗಳೆ ದಾಸಿಮಯ್ಯನವರಿಗೆ ಶಿವಗೆ ಒಪ್ಪು ಭಕ್ತಿ ಅರುಹುವ ಶಕ್ತಿಯಾಗಿದ್ದಳು .
ಆಯ್ದಕ್ಕಿ ಮಾರಯ್ಯನಿಗೆ ಲಕ್ಕಮ್ಮ ಸದಾ ಕಾಯಕ ಪ್ರಜ್ಞೆಯನ್ನು ಜಾಗೃತವಾಗಿರಿಸುವ ಕಾಯಕ ಮಾಡುತ್ತಾದ್ದರು.
ಮೋಳಿಗೆ ಮಹಾದೇವಿ ಅವರು ಮಾರಯ್ಯನವರಲ್ಲಿ ನಿಜವಾದ ದಾಸೋಹದ ತಿಳಿಕೆಯನ್ನು ಉಂಟು ಮಾಡಬಲ್ಲ ಸಾಧಕಿಯಾಗಿದ್ದರು . ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ.

ಇಂದು ಕಾಲ ಬದಲಾಗಿದೆ.ಮಹಿಳೆಗೆ ಮುನ್ನಿನ ಬಂಧನಗಳಿಲ್ಲವಾದರೂ ಅವಳು ಸಂಪೂರ್ಣ ಸ್ವಾತಂತ್ರ್ಯ ಪಡೆದಿಲ್ಲ . ಮಹಿಳೆ ಪ್ರಜ್ಞಾವಂಳಾಗಬೇಕು ; ಅಂತರಂಗ ಬಹಿರಂಗಳೆರಡರಲ್ಲೂ ಆರೋಗ್ಯ ಪೂರ್ಣವಾಗಿರಬೇಕು . ಮಾನಸಿಕ — ದೈಹಿಕ ಸ್ವಾಸ್ಥ್ಯವು ಅವಳ ಹಕ್ಕಾಗಬೇಕು . ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು. ಭೂಮಿಯಿಲ್ಲದ ನಾವು ಹೇಗೆ ಬದುಕುವುದಕ್ಕೆ ಆಗುವುದಿಲ್ಲವೋ, ಭೂಮಿ ತಾಯಿ ಸ್ವರೂಪಳಾದ ಹೆಣ್ಣು ಇಲ್ಲದೆ ನಾವು ಬದುಕಲಾರೆವೆಂಬ ಪ್ರಜ್ಞೆ ಸಮಾಜದ ಹೃದಯದಲ್ಲಿ ಎಚ್ಚರವಾಗಿರಬೇಕು.ಸ್ತ್ರೀಯರಿಗೆ ಸಾಂಸ್ಕೃತಿ ಕ್ಷೇತ್ರದ ಪ್ರತಿಯೊಂದು ರಂಗದಲ್ಲೂ ಪುರುಷರಿಗೆ ಸರಿ – ಸಮಾನವಾದ ಹಕ್ಕು ಅಧಿಕಾರ ಸ್ವಾತಂತ್ರ್ಯ ದೊರೆಯಬೇಕು ಅಂದಾಗ ಸಮಾಜ ಈ ವಿಶ್ವ
ಸುಂದರವಾಗಿರುತ್ತದೆ , ಸತ್ಯದ ಸ್ವರೂಪವಾಗುತ್ತದೆ .
ಹೆಣ್ಣು ನಡೆದು ಬಂದ ದಾರಿ ದೀಪವಾಗಿ ಬೆಳಗುತ್ತದೆ.

🙏🙏🙏🙏🙏🙏🙏🙏

ಶ್ರೀಮತಿ ಅಮರಾವತಿ ಹಿರೇಮಠ
9108259250

Related Articles

Leave a Reply

Your email address will not be published. Required fields are marked *

Back to top button