ಸಂಪಾದಕೀಯ

ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ.

ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸೆಗಿದವರ ಮೇಲೆ ಕಾನೂನಿನ ಕ್ರಮವಹಿಸಲು : “ಕೆಯುಡಬ್ಲುಜೆ ತಾಲೂಕು ಘಟಕ ಆಗ್ರಹ”

ಕನಕಗಿರಿ ಪಟ್ಟಣದಲ್ಲಿ ಸೋಮವಾರದಂದು ಜೀಬಿ ಮೀಟಿಂಗ್ ಗೈರಾಗಿದ್ದ ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ವಾದ ವಿವಾದಗಳು ನಡೆಯುವ ಸಮಯದಲ್ಲಿ ಕನಕಗಿರಿ ತಾಲೂಕಿನ ವರದಿಗಾರರು ವರದಿ ಮಾಡಲು ಹೋಗಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುತ್ತಾರೆ. ಅಂತವರ ವಿರುದ್ಧ ವ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತಾಗಿ ತಹಶೀಲ್ದಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟದ ಅಧ್ಯಕ್ಷರಾದ ಸೋಮಶೇಖರಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ಮಾನ್ಯ ತಹಸೀಲರ್ ಅವರಿಗೆ ಮನವಿ ಸಲ್ಲಿಸಲಾಯಿತು.

ದಿನಾಂಕ: 02.03.2026ರ ಸೋಮವಾರ ಸಂಜೆ 7.00 ಗಂಟೆಯ ಸುಮಾರಿಗೆ ಕನಕಗಿರಿ ಪಟ್ಟಣದ ಪಟ್ಟಣ ಪಂಚಾಯತಿ ಹತ್ತಿರದ ಮೆಡಿಕಲ್ ಸ್ಟೋರ್ ನಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದ ಪ.ಪಂ ಸದಸ್ಯ ಅನಿಲಕುಮಾರ ಬಿಜ್ಜಳ ಹಾಗೂ ಪ.ಪಂ ಅಧ್ಯಕ್ಷೆಯ ಪತಿ ಟಿ.ಜೆ ರಾಮಚಂದ್ರ ಮತ್ತು ಸಹಚರರ ನಡುವೆ ವಾಗ್ವಾದ ಉಂಟಾಗಿ ಗಲಾಟೆಯಾಗುವ ಮಾಹಿತಿ ಸಾರ್ವಜನಿಕರಿಂದ ಪತ್ರಕರ್ತರಿಗೆ ಬಂದಿರುತ್ತದೆ. ಈ ಮಾಹಿತಿ ಮೇರೆಗೆ ಪತ್ರಕರ್ತರಾದ ಪ್ರಹ್ಲಾದರೆಡ್ಡಿ ಮಾದಿನಾಳ, ಮಧುಸೂದನರೆಡ್ಡಿ ಹಾಗೂ ಶ್ರೀನಿವಾಸ ಪೂಜಾರ ಇವರು ಗಲಾಟೆಯ ವರದಿ ಮಾಡಲೆಂದು ಪೋಟೋ ಮತ್ತು ವಿಡಿಯೋ ಮಾಡಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿದಲ್ಲದೇ ನೂರಾರು ಜನರ ಗುಂಪೊಂದು ಮಾಧ್ಯಮದವರ ಮೇಲೆ ದೌರ್ಜನ್ಯ ಎಸಗಿ ಮಾಧ್ಯಮ ಕ್ಷೇತ್ರವನ್ನು ಹತ್ತಿಕ್ಕುವ ಕೆಲಸ ಮಾಡಿ ಪತ್ರಿಕಾ ರಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿರುತ್ತದೆ.

ಮುಂದುವರೆದು ಸ್ಥಳದಲ್ಲಿ ಪೊಲೀಸರಿದ್ದರೂ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯವಾಗಿದ್ದು, ಪತ್ರಕರ್ತರ ಮೊಬೈಲ್ ಕಸಿದುಕೊಂಡರೂ ಸಹ ಸಾರ್ವಜನಿಕರು ಪತ್ರಕರ್ತರ ಹಲ್ಲೆ ಮಾಡಿರುವುದನ್ನು ಚಿತ್ರೀಕರಿಸಿರುತ್ತಾರೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಯಿಂದ ನಗರದ ಅಲ್ಲಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳಲ್ಲಿ ಘಟನೆಯ ಚಿತ್ರೀಕರಣವಾಗಿರುತ್ತದೆ. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಹಲ್ಲೆ ಮತ್ತು ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತರಿಗೆ ನ್ಯಾಯ ಕೊಡಿಸಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು ಶಿರಸ್ತದರರೂ ಶ್ರೀಮತಿ ಅನಿತಾ ಇಂಡಿ ಅವರ ಉಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದರು .

ಈ ಸಂದರ್ಭದಲ್ಲಿ ಶಿರಸ್ತದರರೂ ಶ್ರೀಮತಿ ಅನಿತಾ ಇಂಡಿ ಕೆಯುಡಬ್ಲೂಜೆ ತಾಲೂಕ್ ಅಧ್ಯಕ್ಷರಾದ ಸೋಮಶೇಖರಯ್ಯ ಸ್ವಾಮಿ ಹಿರೇಮಠ್ ಗ್ರಾಮಾಂತರ ಉಪಾಧ್ಯಕ್ಷರಾದ ಮಹಾಂತೇಶ್ ಕಲಿಕೇರಿ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ರೆಡ್ಡಿ ಸಹ ಕಾರ್ಯದರ್ಶಿ ಹೊನ್ನೂರ್ ಹುಸೇನ್ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಿಜಯ ಭಾಸ್ಕರ್ ರೆಡ್ಡಿ ಸದಸ್ಯರಾದ ಮಧುಸೂದನ್ ರೆಡ್ಡಿ ಶರಣಪ್ಪ ಮರಾಠಿ ಅಯ್ಯಪ್ಪ ವಿಶ್ವಕರ್ಮ ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ಮುಖ್ಯವರದಿಗಾರ

Related Articles

Leave a Reply

Your email address will not be published. Required fields are marked *

Back to top button