ಕ್ರೈಂಜಿಲ್ಲೆ

Hubli Big update : ಮುಂಬೈನ ಡಿಸಿಪಿ ಹೆಸರಲ್ಲಿ ಹುಬ್ಬಳ್ಳಿ ವೈದ್ಯನಿಗೆ ₹30.16 ಲಕ್ಷ ವಂಚನೆ

Hubballi : ನಗರದ ವೈದ್ಯ ರಾಜೀವ್‌ ಅವರಿಗೆ ಮುಂಬೈ ಡಿಸಿಪಿ ಹೆಸರಲ್ಲಿ ವಿಡಿಯೋ ಕರೆ ಮಾಡಿ ಬೆದರಿಸಿದ ವ್ಯಕ್ತಿ, ಅವರಿಂದ ಹಂತಹಂತವಾಗಿ ಒಟ್ಟು ₹30.16 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ವೈದ್ಯರಿಗೆ ಮೊದಲು ಕರೆ ಮಾಡಿದ ಕೊರಿಯರ್‌ ಕಂಪನಿಯೊಂದರ ವ್ಯಕ್ತಿಯೊಬ್ಬರು, ‘ನಿಮ್ಮ ಹೆಸರಲ್ಲಿ ಅಪರಿಚಿತ ವ್ಯಕ್ತಿ ಕೆಲವು ವಸ್ತುಗಳನ್ನು ಬುಕ್ ಮಾಡಿ ಕೊರಿಯರ್‌ ಮಾಡಿದ್ದಾರೆ’ ಎನ್ನುತ್ತಾನೆ. ಅದಕ್ಕೆ ವೈದ್ಯರು, ’ನಾನು ಯಾವುದೇ ವಸ್ತುಗಳನ್ನು ಬುಕ್‌ ಮಾಡಿಲ್ಲ’ ಎಂದು ಹೇಳುತ್ತಾರೆ. ‘ನಿಮ್ಮ ಆಧಾರ್‌ ಕಾರ್ಡ್‌ ಸೋರಿಕೆಯಾಗಿದೆ. ನೀವು ಮುಂಬೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು’ ಎಂದು ಹೇಳುತ್ತಾನೆ.
ನಂತರ ವೈದ್ಯರಿಗೆ ಸ್ಕೈಪ್‌ ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿದ ಮತ್ತೊಬ್ಬ ವ್ಯಕ್ತಿ, ತಾನು ಮುಂಬೈ ಡಿಸಿಪಿ ಎಂದು ಬೆದರಿಸಿ, ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆ ಹವಾಲ ವ್ಯವಹಾರಕ್ಕೆ ಲಿಂಕ್‌ ಆಗಿದೆ. ನಿಮ್ಮ ಬ್ಯಾಂಕ್‌ ಖಾತೆಯ ವಿವರ ಬೇಕಿದೆ ಎಂದು ಬೆದರಿಸಿ, ಹಣ ವರ್ಗಾಹಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button